•  
  •  
  •  
  •  
Index   ವಚನ - 312    Search  
 
ಆನು ನಿಮ್ಮ ಭಕ್ತಿಯಲ್ಲಿ ದರದುರನೆಂಬೆ. ದಿಟಕ್ಕೆ ಬಂದರೆ ಕಾಣದಂತಡ್ಡ ಮೊಗವಿಕ್ಕುವೆ ಗರುಡಂಗೆ ಘಟಸರ್ಪನ ತೋರುವಂತೆ ! ಶಿವಶರಣರೆಂದರೆ ಕಿವಿಗೇಳದಂತಿಹೆನು; ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ.
Transliteration Ānu nim'ma bhaktiyalli dharadhuranembe. Diṭakke bandare kāṇadantaḍḍa mogavikkuve garuḍaṅge ghaṭasarpana tōruvante! Śivaśaraṇarendare kivi kēḷadantihenu; manakke manavē sākṣiyyā, kūḍalasaṅgamadēvā.
Manuscript
English Translation 2 I claim to be a prodigy In my devotion unto Thee; But when it comes to test the truth, I turn my face away and slink, Even as a fearful snake at eagle's sight! If one says, 'Bow to Śiva !' My ears refuse to hear: My mind is witness to itself, O Kūḍala Saṅgama Lord! Translated by: L M A Menezes, S M Angadi
Hindi Translation कहता हूँ, मैं तुम्हारा निस्सीम भक्त हूँ, प्रमाण देना हो, तो मुँह मोडता हूँ जैसे गरुड को देख घट-सर्प। शिवशरण के नाम को मैं अनसुना करता हूँ । मन का मन ही साक्षी है कूडलसंगमदेव ॥ Translated by: Banakara K Gowdappa
Telugu Translation నీ భక్తి లో నేను నిస్సీముడంటి పరీక్ష రాగ చూడనట్లు ముఖము తప్పించితి; గరుత్మంతునకు ఘటసర్పము చూపినట్లె! శివశరణన చెవి దూరనట్లుంటి? మనసుకు మనసే సాక్షి కూడల సంగమ దేవా Translated by: Dr. Badala Ramaiah
Marathi Translation तुमच्या भक्तीत स्वतःला धुरन्धर मानतो. पारखले तर मी विमुख होतो. जैसा गारुडीला पाहून घटसर्प विमुख होतो. शिवशरण शब्द ऐकूनही न ऐकल्याप्रमाणे राहतो. मनाला मन साक्षी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಘಟಸರ್ಪ = ; ದಿಟ = ; ಧರಧುರ = ; ಸಾಕ್ಷಿ = ;
ಕನ್ನಡ ವ್ಯಾಖ್ಯಾನ ಶಿವಭಕ್ತಿಯಲ್ಲಿ ಅಗ್ರಗಣ್ಯ ನಾನು ಎಂಬಂತೆ ಎಲ್ಲರಿಗೂ ಮುಂದಾಳಾಗಿ ಮೆರೆಯುತ್ತೇನೆ. ಆದರೆ ಶಿವ ಶರಣರಿಗೆ ಸೇವೆ ಸಲ್ಲಿಸುವ ಪರೀಕ್ಷಾ ಸಮಯ ಬಂದಾಗ ಕಾಣದಂತೆ ಮುಖ ತಿರುಗಿಸಿ ಹಿಂದಕ್ಕೆ ಸರಿಯುತ್ತೇನೆ -ಕೂಗಿ ಕರೆದರೂ ಕಿವಿಗೇಳದಂತೆ ಕಾಲಿಗೆ ಬುದ್ದಿ ಹೇಳುತ್ತೇನೆ. ನಾನು ಮನಸ್ಸಾಕ್ಷಿಯಾಗಿ ನಡೆದುಕೊಳ್ಳುತ್ತಿಲ್ಲ ಎನ್ನುತ್ತ ಬಸವಣ್ಣನವರು ತಮ್ಮ ಧಾರ್ಮಿಕ ಕ್ಲೈಬ್ಯವನ್ನು ವಿವರಿಸಲು ಒಂದು ಉಪಮಾನವನ್ನು ಕೊಡುತ್ತಾರೆ : ಗರುಡನು ಎಂಥ ನಾಗರಹಾವನ್ನಾದರೂ ಬಾಲದಿಂದ ಹಿಡಿದೆತ್ತಿ ಕೊಲ್ಲಲು ಪ್ರಸಿದ್ಧವಾಗಿರುವುದು. ಆದರೇನು-ಅದರ ಸತ್ತ್ವವು ಸಮತಟ್ಟಾದ ಬಯಲಿನಲ್ಲಿ ಮಾತ್ರ-ಫಟ(ಕೊಡ)ದಲ್ಲಿರುವ ಸರ್ಪವನ್ನು ಕಂಡರೆ ಅದು ಹೆದರಿ ಮುಖ ತಿರುವಿಸುವುದು-ಎಂದು. ಈ ವಚನದಲ್ಲಿ ಬಸವಣ್ಣನವರು ಕುರಿತಿರುವುದು ತಮ್ಮನ್ನೇ ಆದರೂ-ವ್ಯವಸ್ಥಿತ ಜಾಹೀರಾತಿನ ಜಾಲದಿಂದ ಧರ್ಮಕ್ಷೇತ್ರದಲ್ಲಿ ಹೆಸರುವಾಸಿಯಾದ “ಸೇವಾಧುರಂಧರನ” ನೆನಪಾಗುವುದು ನಮಗೆ. ಅವನ ಕೀರ್ತಿವಾರ್ತೆಯೊಂದು ಪರಿ, ಕೃತಿ ಮತ್ತೊಂದು ಪರಿ, ಅವನು ಮೇಲ್ನೋಟಕ್ಕೆ ಧರ್ಮವೀರನಂತೆ ಕಂಡರೂ ಘಟಸರ್ಪದ ಪರೀಕ್ಷೆಗೆ(ಅಂದರೆ ಶರಣಸೇವೆಗೆ)ಸಿದ್ಧನಿಲ್ಲದ ಗುಪ್ತಪಾತಕಿ. ವಿ: ಅಪರಾಧದ ಆರೋಪಕ್ಕೆ ಒಳಗಾದವನು-ತಾನು ನಿರಪರಾಧಿ ಎಂದು ತೋರಿಸಿಕೊಡಲು -ಹಾವಿರುವ ಕೊಡದೊಳಕ್ಕೆ ಕೈಹಾಕಿ ಆ ಹಾವಿನಿಂದ ಕಡಿಸಿಕೊಳ್ಳದೆ ತೇರ್ಗಡೆಯಾಗಬೇಕಾದ ನ್ಯಾಯವಿಧಾನವೊಂದು ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು ಎಂಬುದನ್ನು ಇಲ್ಲಿ ನೆನೆಯಬೇಕು. (ಧರಧುರ < ಧುರಂಧರ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು