ಆದ್ಯರ ವಚನ ಪರುಷವೆಂದೆಂಬೆನು;
ಆ ಪರುಷ ಎನಗೆಂತು ದೊರೆಕೊಂಬುದಯ್ಯಾ?
ತನು-ಮನ-ಧನವ ವಿವರಿಸಿ ನುಡಿವೆ;
ಸೋಂಕಿಂಗೆ ಸೈರಿಸಲಾರೆ!
ಹೊಲೆಯರ ಮದ್ದಳೆಯಂತೆ ನುಡಿವ ಡಂಭಕನಾನಯ್ಯಾ,
ಕೂಡಲಸಂಗಮದೇವಾ!
Transliteration Ādyara vacana paruṣavendembenu;
ā paruṣa enagentu dorekombudayyā?
Tanu-mana-dhanava vivarisi nuḍive;
sōṅkiṅge sairisalāre!
Holeyara maddaḷeyante nuḍiva ḍambaka nānayyā,
kūḍalasaṅgamadēvā!
Manuscript
English Translation 2 I say the word of the Pioneers
Is as the philosopher's stone:
But can that stone
Become my own?
In theory I speak
Of body, mind and wealth:
But a mere touch
Is intolerable to me!
I am a humbug, sounding
Even as a pariah's tabor, Lord
Kūḍala Saṅgama!
Translated by: L M A Menezes, S M Angadi
Hindi Translation कहता हूँ, पुरातन शरणों का वचन पारस है,
वह पारस मुझे कैसे प्राप्त होग?
तन, मन, धन का विवरण देता हूँ,
स्पर्श तक सहन नहीं कर सकता ।
चमारों के नगाडे की भाँति
बोलनेवाला दंभी हूँ, कूडलसंगमदेव ॥
Translated by: Banakara K Gowdappa
Telugu Translation ఆద్యుల వచనము పరుసము కదయ్యా!
అది నా కెట్లు లభించునయ్యా
తను-మన-ధనముల వివరింతునే గాని
తను`మన`ధనముల వివరింతున్గాని
స్పృశింప పరులు సైరింప నేర
మాలవాని మద్దెలరీతి వాగు
డాంబికుడ నేనయ్యా! కూడల సంగమదేవా!
Translated by: Dr. Badala Ramaiah
Marathi Translation
आद्यांची वचने मज वाटे परीस
विजयी होण्यास, ढाल जैसा
सदाशिव लिंगाचा मनी दृढ विश्वास
करी जो खास, तोचि भक्त
शरणांची वचने वाटे कडुझार
परी गोडी फार, अंतरात
कूडलसंगमदेवा ! वचनांचे सार
जणू मधाची धार, अमृतापरी
अर्थ – जो सदाशिव नावाच्या लिंगावर अर्थात इष्टलिंगावर पूर्ण विश्वास ठेवून पूजा-अर्चा करतो तोच समाधानी जीवन जगत असतो. म्हणजेच सर्वत्र जीवन मुक्त जिवन जगत असतो त्याच बरोबर आद्यांची वचने परीससारखी आहेत. कारण ती स्वानुभावातून प्रकट झालेली असतात. ती आचरणात आणताना सुरुवातीला कटू वाटणारी आहेत कारण त्यास गोड वाटणारे षडरिपू कवच चिकटलेले नसते. पण त्यात खोलवर उडी घेतल्यास म्हणजे वचने आचरणात आणल्यास अमृताचि अवीट गोडी अनुभवास येऊ लागेल. म्हणून शिवशरणांची वचने म्हणजे रोग नाशासाठी कडू लिंबाचे सेवन केल्यासारखे होय. पण शेवट गोड व फलदाई होय.
Translated by Rajendra Jirobe, Published by V B Patil, Hirabaug, Chembur, Mumbai, 1983
आद्यांच्या वचनाला परिस म्हणतो.
तो परिस मला कसा प्राप्त होईल देवा ?
तन-मन-धनाचे सविस्तर वर्णन करतो
पण अर्पण करण्याची इच्छा करीत नाही.
शूद्राच्या मृदंगाप्रमाणे आवाज काढणारा
दांभिक मी आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಆದ್ಯರು = ಮುಂಚಿನ ಶರಣರು, ಪುರಾತನರು; ಡಂಬಕ = ; ತನು = ; ಪರುಷ = ; ಸೈರಿಸು = ; ಸೋಂಕು = ;
ಕನ್ನಡ ವ್ಯಾಖ್ಯಾನ ಶರಣರ ಮಹಾತ್ಮೆಗಳಲ್ಲಿ “ವಚನಪರುಷ” ವೆಂಬುದೂ ಒಂದು: ಆಡಿದ ಮಾತು ನಡೆದುಹೋಗುವುದೇ ಆ ವಚನಪರುಷ. ತನು ಮನ ಧನವನ್ನು ಗುರು ಲಿಂಗ ಜಂಗಮಕ್ಕೆ ದಾಸೋಹಮಾಡಿದಲ್ಲದೆ ಈ ವಚನ ಪರುಷ ಸಿದ್ಧಿಸಲೊಲ್ಲದು-ಎನ್ನುತ್ತಿರುವರು ಬಸವಣ್ಣನವರು.
ಡಂಭಾಚಾರಿಯಾದವನು-ತನ್ನ ತನು ಸೇವಾಸಿದ್ಧವೆಂದೋ ಪರಾರ್ಥಾರ್ಪಿತವೆಂದೋ, ತನ್ನ ಮನ ನಿಶ್ಚಂಚಲವೆಂದೋ, ದಯಾಪರವೆಂದೋ, ತನ್ನ ಧನ ಶಿವನ ಸೊಮ್ಮೆಂದೋ ಶರಣರ ಪಾದಕ್ಕೆ ಅರ್ಪಿಸಿದ ಕಾಣಿಕೆಯೆಂದೋ-ಕೋಲು ಸೋಕಿದ ತಮ್ಮಟೆಯಂತೆ ಶಬ್ದಾಯಮಾನವಾಗಿರುವನೇ ಹೊರತು-ಭಕ್ತಿಯಿಂದ ನಮಸ್ಕರಿಸುವುದಿಲ್ಲ, ವಿಶ್ವಾಸದಿಂದ ಧ್ಯಾನಿಸುವುದಿಲ್ಲ. ನಿಜದಿಂದ ದಾನ ಮಾಡುವುದಿಲ್ಲ.
ಹೀಗೆ ದಿವ್ಯಕ್ಕೆ ಮುಕ್ತವಾಗಿ ತನ್ನನ್ನು ಒಡ್ಡಿಕೊಳ್ಳದೆ ಕೇವಲ ಮಾತಾಳಿಯಾಗಿರುವ ಸಾಧಕನೊಬ್ಬನ ವ್ಯಂಗ್ಯಚಿತ್ರವನ್ನಿಲ್ಲಿ ಬಸವಣ್ಣನವರು ತಮ್ಮ ಹೆಸರಿನಲ್ಲೇ ಬಿಡಿಸಿರುವರು.
ವಿ: ಸ್ಪರ್ಶದ ತದ್ಭವರೂಪ ಪರುಷ. ಇದರ ಅರ್ಥ ಸ್ಪರ್ಶಮಣಿ-ಮುಟ್ಟಿದ್ದೆಲ್ಲಾ ಚಿನ್ನವಾಗುವ ಒಂದು ಮಣಿ-ಹಾಗೆಯೇ ಕಂಡದ್ದೆಲ್ಲಾ ಪವಿತ್ರವಾಗುವ, ಮುಟ್ಟಿದ್ದೆಲ್ಲಾ ಪುನೀತವಾಗುವ, ಪಾದ ಸೋಕಿದ್ದೆಲ್ಲಾ ಯಾತ್ರಾಸ್ಥಳವಾಗುವ, ನುಡಿದಿದ್ದೆಲ್ಲಾ ನಡೆದು ಹೋಗುವ, ಭಾವಿಸಿದ್ದೆಲ್ಲಾ ಸಿದ್ಧಿಸುವ ಮಹಿಮೆ ಎಂಬ ಅರ್ಥವೂ ಉಂಟು. ಈ ಅರ್ಥದಲ್ಲಿ ಈ ಮೊದಲಿನವನ್ನೇ ಪಂಚಪರುಷವೆನ್ನುವರು. ಮತ್ತು ಬಸವಣ್ಣನವರು ಪಂಚಪರುಷಮೂರ್ತಿ ಎಂಬ ಐತಿಹ್ಯವೂ ಉಂಟು. ಪರುಷವೆಂಬ ಪದವಿನ್ನೊಂದು ಸ್ವತಂತ್ರವಾಗಿಯೇ ಸಂಸ್ಕ್ರತದಲ್ಲಿದೆ-ಅದರ ಅರ್ಥ ಕಠೋರವೆಂದು-ನೋಡಿ ವಚನ 172.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು