MusicCourtesy:Provided to YouTube by Mars Inc Kanchanavemba · Ambayya Nuli Vachana Sambrama ℗ Akash Audio Released on: 2022-05-21
English Translation 2Enamoured of a cur called gold,
I lost all sight of Thee, O Lord!
I've time for gold, for Liṅga no time!
O Kūḍala Saṅgama Lord,
Can a dog mad for stench
Care for an ambrosial dish?
Translated by: L M A Menezes, S M Angadi
Hindi Translationस्वर्ण रुपी श्वान पर विश्वास कर
स्वामी, मैं तुम्हें भूल गया ।
स्वर्ण के लिए समय है,
लिंग के लिए नहीं,
दुर्गंध पर आसक्त श्वान
अमृत का स्वाद क्या जानता है कूडलसंगमदेव?
Translated by: Banakara K Gowdappa
Telugu Translationకాంచన మను కుక్కను మెచ్చి
నిన్ను నే మఱచితి నయ్యా!
కాంచనమునకే గాని కాలము
లింగమునకు లేదయ్యా:
ఎముకల మెచ్చెడి కుక్క అమృత
పాకము తెలియునే కూడల సంగమదేవా!
Translated by: Dr. Badala Ramaiah
Marathi Translationश्वानाचियेपरी, मोह कांचनांचा
विसर तो तुझा, पडलासी
वेळ भरपूर, मिळवाया सोने
लिंगार्चनी देणे, होत नाही
कूडलसंगमदेवा ! हाड चघळी श्वान
अमृत गोडी जाण, जाणे कैसा ?
अर्थ - माझे लक्ष ऐश्वर्य संपत्तीकडे लागल्यामुळे मला तुझा विसर पडत आहे. कारण व्यापार उद्योग करण्यात धनसंपत्ती जमविण्यात माझा पूर्ण वेळ जात असल्यामुळे लिंगदेवाची पूजा व ध्यान करण्यास वेळ उरत नाही, जसे हाड पाहताच त्यावर तुटून पडणारा नव्हे त्याची चटक लागलेल्या कुत्र्याप्रमाणे माझी गत झाली आहे त्यामुळे परम अमृत स्वरूपी गुरु, लिंग व जंगम यांची भक्ती व सेवा करून त्यांच्या पादोदकांची व प्रसादरूपी अमृतांची गोडी मी जाणू शकलो नाही हे ताबडतोब थांबविले पाहिजे. म्हणून कूडलसंगमदेवा! (परमेश्वरा) माझी गत त्या कुत्र्याप्रमाणे न होऊ देता, ऐश्वर्य संपत्तीच्या मागे माझ्या मनास धावु न देता शरण सेवेकडे वेळीच प्रवृत्त करावे हीच तुझ्या चरणी नम्र प्रार्थना.
Translated by Rajendra Jirobe, Published by V B Patil, Hirabaug, Chembur, Mumbai, 1983कांचनरुपी मायेवर विश्वास ठेवून
तुम्हाला मी विसरलो.
कांचनासाठी वेळ आहे. लिंगदेवासाठी नाही.
मांस इच्छीणारा कुत्रा अमृताचा
स्वाद कसा जाणेल कूडलसंगमदेवा?
Translated by Shalini Sreeshaila Doddamani
ಶಬ್ದಾರ್ಥಗಳುಕಾಂಚನ = ; ಸೊಣಗ = ; ಹಡಿಕೆ = ;
ಕನ್ನಡ ವ್ಯಾಖ್ಯಾನಮನುಷ್ಯನ ಮೂಲಭೂತ ಆಕಾಂಕ್ಷೆಗಳಲ್ಲಿ ಪ್ರಕರ್ಷವಾದುವೆಂದರೆ ಹಣ ಹೆಂಡತಿ ಮಕ್ಕಳು. ಈ ಮೂರನ್ನು ವಿತ್ತೇಷಣ ದಾರೇಷಣ ಪುತ್ರೇಷಣ ಎಂದು ಈಷಣತ್ರಯವಾಗಿ ಗಣನೆ ಮಾಡಿರುವರು. ಇವುಗಳಲ್ಲಿ ವಿತ್ತೇಷಣ ಅಡಿಗಲ್ಲಾದರೆ ದಾರೇಷಣ ಉಪ್ಪರಿಗೆ, ಪುತ್ರೇಷಣ ಕಳಶದಂತೆ. ಹೀಗೆ ಎಲ್ಲಕ್ಕೂ ಮೂಲ ಬಂಡವಾಳವಾದ ಹಣವನ್ನು ಕುರಿತು ಆಶೆಪಡುವುದು, ಅದಕ್ಕಾಗಿ ನೂರು ವಿಧದಲ್ಲಿ ಅವಿಶ್ರಾಂತವಾಗಿ ಹೆಣಗುವುದು, ಈ ಹೆಣಗುವಿಕೆಯೇ ಜೀವನಕ್ಕೆ ಬೆಲೆ ತರುವುದೆಂಬ ಜಿದ್ದಿನಿಂದ ಮಿಕ್ಕ ಉತ್ತಮ ಗುಣಗಳನ್ನು ಜೀವನ ಮೌಲ್ಯಗಳನ್ನು ನೀಗಿಕೊಳ್ಳುವುದು-ಇವು ಕೊಂಡಿಗೆ ಕೊಂಡಿಯಾಗಿ ಭವಬಂಧನದ ಶೃಂಖಲೆಯಾಗುವುದು. ಈ ಭವಶೃಂಖಲೆಯ ಸರಣಿಯಲ್ಲಿ ಕಾಂಚನ(ಹಣ)ಕ್ಕೇ ಪ್ರಥಮಸ್ಥಾನ-ಇಲ್ಲಿ ಧರ್ಮಕ್ಕೆ ಸ್ಥಾನವೇ ಇಲ್ಲ. ಈ ನಮ್ಮ ಸಂಸಾರಲಾಲಸೆಯನ್ನೇ ಈ ವಚನದಲ್ಲಿ “ಕಾಂಚನವೆಂಬ ನಾಯಿ” ಎಂದು ಕರೆಯಲಾಗಿದೆ.
ಧರ್ಮಾಮೃತದ ಸ್ವಾದವನ್ನೇ ಕಂಡರಿಯದ ಈ ನಾಡಾಡಿ ನಾಯಿಗೋ ನಿಲ್ಲಬಾರದೆಡೆಗಳಲ್ಲಿ ನಿಲ್ಲುವುದು, ಮೂಸುವುದು. ನೀರ್ಗರೆಯುವುದು, ಅಲೆಯುವುದು-ಇದರ ಬೆನ್ನುಬಿದ್ದವನಿಗೆ ಏನು ಗತಿಯೆಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಪರಿಸ್ಥಿತಿಗೆ ಬಸವಣ್ಣನವರು ತಮ್ಮ (ರಾಜಕೀಯ) ಜೀವನವನ್ನು ಹೋಲಿಸಿಕೊಂಡಿರುವರು. ಬಿಜ್ಜಳನಲ್ಲಿ ಸಂಬಳಕ್ಕಿದ್ದ ಅವರು-ಆ ಸಂಬಳಕ್ಕಾಗಿ ತಮ್ಮ ಎಷ್ಟೊಂದು ಬೆಲೆ ಬಾಳುವ ಸಮಯ ಮುರಿಯುತ್ತದೆ, ಶರಣ ಸೇವಾಕಾರ್ಯ ಕುಂಟುತ್ತದೆ, ತಮ್ಮ ದಿವ್ಯದ ಕನಸೆಲ್ಲಾ ಕೆಳಗೆ ಜಗ್ಗುತ್ತದೆ ಎಂಬ ಕೊರಗನ್ನು ಈ ವಚನವ್ಯಾಜದಿಂದ ಶಿವನಲ್ಲಿ ನಿವೇದಿಸಿಕೊಳ್ಳುತ್ತಿರುವರು.
ಶಿವಪೂಜೆ ಜಂಗಮಸೇವೆ ಮುಂತಾದ ಧರ್ಮಕಾರ್ಯಗಳನ್ನು ಮೊಟಕುಗೊಳಿಸಿಯಾದರೂ ಅವರು ರಾಜಕಾರ್ಯವನ್ನು ನಿರ್ವಹಿಸಲೇ ಬೇಕಾಗಿತ್ತು.ಆ ರಾಜಕಾರ್ಯಕ್ಕಾಗಿ ದೊರಕಿಸಿದ ಅಧಿಕ ವೇಳೆ ಧರ್ಮ ಕಾರ್ಯಕ್ಕಿಲ್ಲವಲ್ಲಾ ಎಂಬುದೇ ಬಸವಣ್ಣನವರ ಅತೃಪ್ತಿಗೆ ಜಗುಪ್ಸೆಗೆ ಕಾರಣವಾಗಿತ್ತು.
ಈ ಪರಿಯ ಅಸೀಮ ವಿಷಾದದಲ್ಲಿದ್ದ ಬಸವಣ್ಣನವರು ಕಲ್ಯಾಣದಲ್ಲಿ ಭಂಡಾರಿ(ಮಂತ್ರಿ)ಯಾಗಿ ಬಹಳಕಾಲ ಉಳಿದಿರಲಿಲ್ಲ. ಬಿಜ್ಜಳನು ರಾಜನಾಗಿ ಐದು ವರ್ಷಗಳಿಗಿಂತ ಹೆಚ್ಚುಕಾಲವಿರಲಿಲ್ಲ. ಅವನಿಗಿಂತ ಮೊದಲೇ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕೂಡಲ ಸಂಗಮಕ್ಕೆ ಮರಳಿದ ವಿಚಾರ ಪ್ರಸಿದ್ಧವೇ ಇದೆ. ಅಲ್ಲಿ ಅವರು ಪೂರ್ಣವೇಳೆಯ ಭಕ್ತಜನಸೇವಕರಾಗಿ ತಮ್ಮ ಅಪರ ವಯಸ್ಸಿನವರೆಗೆ ನಡೆಸಿದ ದಿವ್ಯಜೀವನದ ವಿವರ ಯಾವ ಪುರಾಣದಲ್ಲಿಯೂ ದೊರೆಯದಿರುವುದು ದುರದೃಷ್ಟಕರ. ಅದು ಬಸವಣ್ಣನವರು ರಾಜಸೇವಕರಾಗಿದ್ದ ಅವಧಿಯ ಜೀವನದಷ್ಟು ವರ್ಣರಂಜಿತವೆನಿಸಲಿಲ್ಲ ಆ ಪುರಾಣಕಾರರಿಗೆ !
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.