•  
  •  
  •  
  •  
Index   ವಚನ - 316    Search  
 
ಕಾಣುತ್ತ ಕಡೆಗಣಿಸಿ, ಕೆಡಿಸಿ ಅರಸುವ ಮತಿಭ್ರಷ್ಟ ನಾನು, ಲಿಂಗಯ್ಯಾ! ತನುಲೋಭ, ಮನಲೋಭ, ಧನಲೋಭ ಮುಂದುಗೆಡಿಸಿ ಕಾಡಿಹುವೆನ್ನಾ. ತನು-ಮನ-ಧನವ ನಿವೇದಿಸಿದವರ ಮನೆಯ ಮಗ ನಾನಯ್ಯಾ, ಕೂಡಲಸಂಗಮದೇವಾ.
Transliteration Kāṇutta kaḍegaṇisi, keḍisi arasuva matibhraṣṭa nānu, liṅgayya! Tanulōbha, manalōbha, dhanalōbha mundugeḍisi kāḍ'̔ihuvenna. Tanu-mana-dhanava nivēdisidavara maneya maga nānayya, kūḍalasaṅgamadēvā.
Manuscript
English Translation 2 Fallen from sense am I, O Liṅga Lord, For slighting it what I saw And seeking it when marred! The body's greed, the greed of mind, The greed for money bar My way and pester me! I'm but a slave In their house who have given away Their body, mind and wealth, O Kūḍala Saṅgama Lord. Translated by: L M A Menezes, S M Angadi
Hindi Translation देखता हुआ उपेक्षा कर, बिगडकर खोजनेवाला मैं मतिभ्रष्ट हूँ लिंगदेव, तन लोभ, मन लोभ, धन लोभ, मुझे पथ-भ्रष्ट कर सताते हैं । तन, मन, धन के निवेदकों के घर का दास हूँ, कूडलसंगमदेव ॥ Translated by: Banakara K Gowdappa
Telugu Translation కన్పించునది కాదని విడచి దేనికో వెదకెడి హీనమతి నేను లింగయ్యా తనుమనధనలోభములు నన్ను ముందే చెఱచి గారించెనయ్యా! తనుమనధనముల నివేదించు వారి యింటి నిసుగు నేనయ్యా! కూడల సంగమదేవా! Translated by: Dr. Badala Ramaiah
Marathi Translation पाहोनी दुर्लक्षी, आणि तुज शोधी झाली भ्रष्ट बुध्दी, लिंगदेवा. तन मन धन, लोभ हेचि तीन त्रासिताती जाण, मज लागी कूडलसंगमदेवा! अर्पितो जे तीन तयांची संतान, मज जाण अर्थ - परमेश्वरी प्रसन्नता कशात आहे ? परमानंद तो कसा प्राप्त करुन घेता येतो ? दुःख कशात आहे ? हे सर्व दिसते आहे. पण मन त्याकडे धाव घेत नाही. परमेश्वर माझ्यातच आहे म्हणजे अतिशय जवळ आहे. तरीही बाहेर त्याचे शोधणे चालूच आहे. तन व धनाचा लोभ दाखवून सत्यापासून आनंदापासून तो दूर नेत आहे. अशा तऱ्हेने पथभ्रष्ट करून सतावित आहे. ज्यांनी तन, मन व धन या विविध साधनाने परमेश्वरी ऐक्य साधले आहे. अशा शिवशरणांचा मी पुत्र आहे. तरीही तन, मन व धन हे त्रिविध अर्पण करण्याच्या संधीची वाट पहात बसले आहे हे माझे मन. त्यासाठी सोमवार, मंगळवार, बुधवार, पोर्णिमा आमावस्या यासारख्या शुभ घटिकेला अर्पण करणे योग्य असे विचार करीत बसले आ हे. हे योग्य नाही. कारण याने वेळ व जीवन वाया जाईल. Translated by Rajendra Jirobe, Published by V B Patil, Hirabaug, Chembur, Mumbai, 1983 पाहून उपेक्षा करणारा, हरवून शोधणारा, मतीभ्रष्ट मी आहे लिंगदेवा. तन-मन-धनलोभ मज पथभ्रष्ट करुन त्रास देत आहेत. तन-मन-धन अर्पित करणाऱ्यांचा पुत्र मी आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಅರಸೋತ್ತಿಗೆ; ತನು = ; ನಿವೇದಿಸು = ; ಭ್ರಷ್ಟ = ; ಲೋಭ = ;
ಕನ್ನಡ ವ್ಯಾಖ್ಯಾನ ನಮ್ಮ ತನು ಮನ ಧನವನ್ನು ನನ್ನದೆಂದೇ ಬಗೆದು, ಅದರ ಮೇಲೆ ಸ್ವಾಮ್ಯವನ್ನೂ ಸ್ಥಾಪಿಸಿಕೊಂಡು ಮನಸ್ಸಿಗೆ ಬಂತೇ ದಾನಧರ್ಮ ಮಾಡುವುದು-ಇಲ್ಲವೇ ತನ್ನ ಭೋಗಕ್ಕಾಗಿಯೇ ಬಳಸುವುದರಲ್ಲಿ ತಪ್ಪೇನಿದೆಯೆಂಬುದೊಂದು ಪ್ರಶ್ನೆ. ಆದರೆ ಈ ತನುಮನಧನ ತನ್ನದೇ ಆದರೂ ಅವುಗಳ ಮೇಲಣ ಸರ್ವ ಸ್ವಾಮ್ಯ ವ್ಯಕ್ತಿಗಿಲ್ಲವೆಂಬುದೇ ಬಸವಣ್ಣನವರ ಉತ್ತರ. ಅವರ ಪ್ರಕಾರ-ವ್ಯಕ್ತಿಯು ತನ್ನ ತನುಮನಧನ ವನ್ನು ಶಿವಭಕ್ತಸೇವೆಗೆಂದು ಮುಡಿಪಿಟ್ಟಿರಬೇಕು-ಅದೇ ಅವನು ಶಿವಭಕ್ತನಾದನೆಂಬುದಕ್ಕೆ ಸಾಕ್ಷಿ. ಆಮೇಲೆ ಅವನು ತನ್ನ ಮುಡಿಪಿಟ್ಟ ತನುಮನಧನವನ್ನು ಶಿವನಿಗಲ್ಲದೆ ಮತ್ತು ಶಿವಭಕ್ತರಿಗಲ್ಲದೆ ಮತ್ತೊಂದಕ್ಕೆ ಮಾಡುವ ಹಕ್ಕನ್ನು ಪಡೆದಿರುವುದಿಲ್ಲ-ಹೀಗೆ ನಮಗೂ, ನಮ್ಮ(ತನುಮನಧನವೂ ಸೇರಿದಂತೆ) ಎಲ್ಲ ಆಸ್ತಿಗೂ ಇರುವ ಸಂಬಂಧ ತೀರ ಪವಿತ್ರವಾದದ್ದು ಮತ್ತು ಜವಾಬ್ದಾರಿಯುತವಾದದ್ದು, ಎಂದಿಗೂ ಅದನ್ನು ಕೇವಲ ಸ್ವಾರ್ಥಕ್ಕಾಗಿ ವ್ಯಯ ಮಾಡಕೂಡದು. ಎಂಬ ಈ ನಿಲುವಿಗೆ ಸ್ವತಃ ಬಸವಣ್ಣನವರೇ ಬಂದು ನಿಶ್ಚಲವಾಗಿ ನಿಲ್ಲಬೇಕಾದರೆ ನಡುವೆ ಒಮ್ಮೆ ತಪ್ಪಿರಬಹುದು.ಅದನ್ನು ಕುರಿತಿದೆ ಈ ವಚನ.ತಮ್ಮ ಆ ಅನಿಶ್ಚಿತ ಬುದ್ಧಿಗಾಗಿ ಬಸವಣ್ಣನವರು ಮರುಗಿ-ಏಕಪ್ರಕಾರವಾಗಿ ತ್ರಿವಿಧದಾಸೋಹದಲ್ಲಿ ನಿರತರಾದ ಮಹನೀಯರ ಮನೆಯ ಆಳಾಗಿರಲು ಬಯಸುವರು-ತಮಗೆ ತರಪೇತಿ ಸಿಕ್ಕೀತೆಂದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು