ಭಕ್ತನ ಭಕ್ತಸ್ಥಲ - ಸತ್ವಪರೀಕ್ಷೆ
ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ?
ಕೋಳದ ಮೇಲೆ ಸಂಕಲೆಯನಿಕ್ಕುವರೆ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ?
ಕೂಡಲಸಂಗಯ್ಯನ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೇ?
Transliteration Hagahadalli biddavara mēle oraḷa nūṅkuvare?
Kōlada mēle saṅkaleyanikkuvare?
Benda huṇṇa kambiyalli kīsuvare?
Kūḍalasaṅgayyana kāḍuva kāṭa
siriyāḷaṅgallade sairisabahude?
Manuscript
English Translation 2 Should you upon one fallen into a pit
Roll down a mortar?
Should you put chains upon
One who's already handcuffed?
Should you into a scalded wound
Insert a wire of steel?
Should any but Siriyāḷa endure
The torment that
Lord Kūḍala Saṅga inflicts?
Translated by: L M A Menezes, S M Angadi
Hindi Translation गड्ढे पर ओखली गिराएँगे?
हथकडियों पर जंजीर बाँधेंगे?
जले व्रण को कील से चीरेंगे?
कूडलसंगमदेव की ताडनाओं को
सिरियाळ के सिवा और कोई सह सकता है?
Translated by: Banakara K Gowdappa
Telugu Translation ఖణిజమున పడువాని పై రోలు దొర్లింతురే.
తుండుపై మఱలా సంకెళ్ళు వేతు రే:
కాలిన పుండును కమ్మితో పొడుతురే
సంగడు బాధించు బాధలు
సిరియాళునికిగాని సై రింపగావు
Translated by: Dr. Badala Ramaiah
Marathi Translation
खड्यात पडलेल्यांच्यावर उखळ ढकलून देणार?
हातकडी घातल्यावर साखळदंडानेही बांधणार?
पिकलेल्या फोड सळीने टोचणार?
कूडलसंगाने दिलेला त्रास सिरियाळाशिवाय
दुसरे कोण सहन करणार ?
Translated by Shalini Sreeshaila Doddamani
ಶಬ್ದಾರ್ಥಗಳು ಒರಳ = ; ಕೀಸು = ; ಕೋಳ = ; ಸಂಕೋಲೆ = ; ಹಗಹ = ; ಹುಣ್ಣು = ;
ಕನ್ನಡ ವ್ಯಾಖ್ಯಾನ ಬಂದಿರುವ ಕಷ್ಟವನ್ನೇ ಸಹಿಸಿಕೊಳ್ಳಲಾರೆನೆಂದು ರೋದಿಸುತ್ತಿರುವಾಗ-ಅದಕ್ಕಿಂತಲೂ ಉಗ್ರವಾದ ಇನ್ನೊಂದು ಕಷ್ಟ ಮತ್ತೊಂದು ಕಷ್ಟ ಸಾಲುಗಟ್ಟಿ ಬಂದರೆ ಸಹಿಸುವುದು ಹೇಗೆ ? ಎಡವಿ ಅಗೇವಿನಲ್ಲಿ ಬಿದ್ದು ನರಳುತ್ತಿರುವವನ ಮೇಲೆ-ಎಡವಿದ ಒರಳುಕಲ್ಲೂ ಬಿದ್ದರೆ ಗತಿಯೇನು ? ಹಿಡಿದು ಕೈಗೆ ಹಾಕಿದ ಕೊಳವೇ ಕೊರೆದು ನೋಯಿಸುತ್ತಿರುವಾಗ-ಆ ಕೊಳದ ಮೇಲೆ ಸರಪಳಿಯನ್ನು ಸುತ್ತಿ ಎಳೆದರೆ ಹೇಗೆ ? ಬೆಂಕಿಯಲ್ಲಿ ಮೈ ಬೆಂದಾಗ ಕಂಬಿಯಿಂದ ಕೆದಕಿ ನೋಡಿದರೆ ಹೇಗೆ-ಎಂದು ಬಸವಣ್ಣನವರು ತಮ್ಮ ಜೀವನದ ಯಾವುದೋ ಒಂದು ಘಟ್ಟದಲ್ಲಿ ಉತ್ತರೋತ್ತರ ದಾರುಣವಾದ ಪರಿಸ್ಥಿತಿಗಳು ಧಾಳಿ ಮಾಡಿದಾಗ ದೇವರಿಗೆ ಮೊರೆಯಿಟ್ಟ ವಚನವಿದು. ಸಿರಿಯಾಳನ ದೃಢವ್ರತ ತಮ್ಮದಾಗಬೇಕೆಂಬುದು ಬಸವಣ್ಣನವರ ಹಂಬಲ.ನೋಡಿ ವಚನ 148.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು