ಸೋಲಬಲ್ಲರವರು, ಗೆಲಲರಿಯರಯ್ಯಾ;
ತನು-ಮನ-ಧನದಲ್ಲಿ ವಂಚನೆಯನರಿಯರಯ್ಯಾ,
ದಾಸ-ಸಿರಿಯಾಳನವರು.
ಕೂಡಲಸಂಗನ ಶರಣರು ಉಪಚಾರವನರಿಯರಯ್ಯಾ!
Transliteration Sōlaballaru avaru, gelalariyarayya;
tanu-mana-dhanadalli van̄caneyanariyarayya,
dāsa-siriyāḷanavaru.
Kūḍalasaṅgana śaraṇaru upacāravanariyarayyā!
Manuscript
English Translation 2 O Lord, they only know to lose,
They do not know to gain:
The Dāsa and Siriyāḷas know
No fraud, good Sir,
In body, mind and wealth.
Kūḍala Saṅga's Śaraṇās
Know not mere form.
Translated by: L M A Menezes, S M Angadi
Hindi Translation वे हारना जानते हैं, जीतना नहीं,
तन मन धन में कपट नहीं जानते
दासय्या और सिरियाळ
कूडल संग के शरण उपचार नहीं जानते ॥
Translated by: Banakara K Gowdappa
Telugu Translation ఓడ నేర్చినవారు గెల్వనెఱుగరయ్య
తను-మన-ధనముల వంచన సేయరయ్యా
సిరియాళదాసులు సంగని శరణులు
ఉపచార మెరుగరయ్యా !
Translated by: Dr. Badala Ramaiah
Marathi Translation
हरणारे जाण, जाणती जिंकणे
वंचना करणे, जाणतीना
दासय्या, श्रीयाळ, तन मन देती
काय धनासि तो, पाहताती
कूडलसंगमदेवा ! तुझे ते शरण
औपचारिक जाण, नव्हेती ती
अर्थ - शिवभक्त श्रीयाळ शेठ यांनी आपला एकुलता एक पुत्र जंगम गुरूना आणि देवर दासमय्या याने अतिप्रयासाने स्वहस्ते तयार केलेले तलम रेशमी वस्त्र जंगम अर्थात गुरूना हे सर्व काही परमेश्वराचेच आहे याच भावनेने समर्पण केले. व्यवहारिक दृष्टिने सर्व काही हरणारेच मुक्तीस पात्र ठरतात. जीवनातील सुख:दुखाच्या संघर्षाला मात करणारे ठरतात. तन मन व धन या त्रिविध साधनाने गुरु, लिंग जंगम व दासोह व्हावे या भावनने अर्पण करणारे शिवशरण औपचारिकता, दंभाचार, वंचना इत्यादीतील मर्म जाणत असतात. ते जसे बोलतात तसे वागतात व जसे वागतात तसेच बोलतात म्हणून मुक्त जीवन जगत असतात. ते ज्ञान म्हणजे क्रिया व व क्रिया म्हणजे ज्ञान यास जागत असतात. म्हणून शिवशरणापुढे खोटेपणा, दंभाचार व वंचना चालणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
हारतात पण जिंकणे जाणत नाहीत.
तनमनधनाची वंचना जाणत नाहीत.
दासिमय्या सिरियाळ, कूडलसंगमदेवाचे
शरण औपचारिकता जाणत नाहीत.
Translated by Shalini Sreeshaila Doddamani
ಶಬ್ದಾರ್ಥಗಳು ತನು = ; ವಂಚನೆ = ;
ಕನ್ನಡ ವ್ಯಾಖ್ಯಾನ ಶಿವಶರಣರು ಕೇವಲ ಉಪಚಾರದ ಮಾತಿನವರಲ್ಲ-ಮಾನಹಾನಿಯಾಗುವುದೆಂಬ ಪ್ರಾಣಹಾನಿ ಯಾಗುವುದೆಂಬ ಸಂದರ್ಭದಲ್ಲೂ ಅವರು ಹಿಡಿದ ದಾಸೋಹವ್ರತದಲ್ಲಿ ಹಿಂಜರಿಯುವುದಿಲ್ಲ. ಶಿವನು ಒಬ್ಬ ಜಂಗಮನ ವೇಷದಲ್ಲಿ ಬಂದನೆಂಬುದಿರಲಿ-ಆ ಜಂಗಮನು ಬೆಲೆಬಾಳುವ ಜರತಾರಿಯ ರೇಷ್ಮೆವಸ್ತ್ರವನ್ನು ಬೇಡಿದರೆ-ದೇವರ ದಾಸಿಮಯ್ಯನು ಆ ಜಂಗಮದ ಆಶೆ ಈಡೇರಲಿ ಎಂದು ಆ ಪೀತಾಂಬರವನ್ನು ದಾನ ಮಾಡುತ್ತಾನೆ. ಆ ಜಂಗಮ ಆ ವಸ್ತ್ರವನ್ನು ಉಡುವುದೂ ಇಲ್ಲ-ಹರಿದು ಚಿಂದಿ ಮಾಡುತ್ತಾನೆ. ಆದರೂ ಅವನನ್ನು ದಾಸಿಮಯ್ಯ ಪ್ರಶ್ನಿಸಿ ವಾದ ಮಾಡುವುದಿಲ್ಲ. ಅದು ಅವನ ಒಡವೆ-ಅದನ್ನು ಬೇಕಾದಂತೆ ಮಾಡಲು ಅವನಿಗೆ ಹಕ್ಕಿದೆಯೆಂದು ಸೋಲುತ್ತಾನೆ. ಸಿರಿಯಾಳನ ಸೇವಾರೀತಿಯಾದರೋ ಇನ್ನೂ ಹೃದಯ ವಿದ್ರಾವಕ(ನೋಡಿ ವಚನ 148)
ಈ ದಾಸಿಮಯ್ಯ ಸಿರಿಯಾಳ ಮುಂತಾದ ಮಹನೀಯರು ಕೇವಲ ಉಪಚಾರದ ಮಾತನಾಡಿ-ತನುಮನಧನವನ್ನು ಬಿಗಿಹಿಡಿದವರಲ್ಲ. ಅದೇ ರೀತಿ ಬಸವಣ್ಣನವರಿಗೆ ತಮ್ಮ ತನುಮನಧನವನ್ನು ಸೂರೆಗೊಟ್ಟು ಶಿವಭಕ್ತರಲ್ಲಿ ವಿಧೇಯವಾಗಿರುವುದೆಂದರೆ ಬಹಳ ಮೆಚ್ಚುಗೆ. ಕೇವಲ ಉಪಚಾರದ ಆತ್ಮವಂಚನೆಗೆ ಹೇಸುವ ಬಸವಣ್ಣನವರ ಭಕ್ತಿ ಮಾತಿನಲ್ಲಿ ಮುಗಿಯದೆ-ಸಮಪರ್ಣ ಕೃತಿಯಲ್ಲಿ ಮುಗಿಯುತ್ತಿತ್ತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು