•  
  •  
  •  
  •  
Index   ವಚನ - 319    Search  
 
ಭಕ್ತನ ಭಕ್ತಸ್ಥಲ - ನಡೆ-ನುಡಿ
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ, ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಬಾರದು; ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು, ಲಿಂಗಮುಖದಲ್ಲುದಯವಾದ ಶರಣಂಗಲ್ಲದೆ, ಅಯ್ಯಾ. ಕೂಡಲಸಂಗನ ಶರಣರ ಭಕ್ತಿಭಾಂಡಾರವು ಎನಗೆಂತು ಸಾಧ್ಯವಪ್ಪುದು? ಹೇಳೆನ್ನ ತಂದೇ.
Transliteration Mātinalli śrōtrasukhava nuḍiyabahudallade, māḍuva satkriyeyinda bhaktanenisabāradu. Arthaprāṇābhimānavarigeyū samanisadu, liṅgamukhadaludayavāda śaraṇaṅgallade, ayyā. Kūḍalasaṅgana śaraṇara bhaktibhāṇḍāravu; enagentu sādhyavappudu? Hēḷenna tandē.
Manuscript
English Translation 2 One can talk in words to joy the ear: You cannot claim to be A bhakta in righteous deeds. Wealth, life and honour come to none Save to a Śaraṇa born, good Sir, Of Liṅga's mouth.... How can devotion's treasury O Kūḍala Saṅga's Śaraṇās Be possible for me? Tell me, O Father, tell! Translated by: L M A Menezes, S M Angadi
Hindi Translation वचनों से श्रोत्रानंद कर सकते हो, सत्क्रियाओं से भक्त कहना कठिन है । लिंगमुख-संजात शरण को छोड किसी को अर्थप्राणाभिमान प्राप्त नहीं होते। कूडलसंग के शरणों का भक्ति-भंडार, कहो मेरे पिता, कैसे साध्य होगा? Translated by: Banakara K Gowdappa
Telugu Translation శ్రవణసుఖంబుగ పల్కవచ్చుగాని చేయు మంచి పనుల భక్తి దలపరాదు అర్ధ ప్రాణాభిమానము లెవరికీ సరిగావు లింగ ముఖోద్భవుడగు శరణునకు గాని సంగని శరణుల భక్తి భండారము నా కెట్లు సాధ్యము తెల్పుమో తండ్రీ! Translated by: Dr. Badala Ramaiah
Marathi Translation मोठ-मोठ्या गोष्टी बोलून ऐकणाऱ्यांना सुखी करता येते. सत्क्रिया करुन भक्त म्हणवून घेणे सोपे नाही. अर्थ, प्राण, अभिमान यांना कोणी सोडू शकत नाही. लिंगमुखात उदय झालेल्या शरणाविना. कूडलसंगमदेवांच्या शरणांचे भक्ती भांडार मला कसे प्राप्त होईल हे सांगावे माझे पिता. Translated by Shalini Sreeshaila Doddamani
ಶಬ್ದಾರ್ಥಗಳು ಅಡಕ = ಸೇರಿಸು; ಉದಯ = ; ಶ್ರೋತ್ರ = ; ಸತ್ಕ್ರಿಯೆ = ;
ಕನ್ನಡ ವ್ಯಾಖ್ಯಾನ ಧರ್ಮವನ್ನು ಕುರಿತು ರೋಚಕವಾಗಿ ಮಾತನಾಡುತ್ತ ಕಾಲ ಕಳೆಯುವುದು ಸುಲಭ-ಆಡಿದಂತೆ ಧರ್ಮಕಾರ್ಯಗಳನ್ನು ಮಾಡಿ ಭಕ್ತರೆನಿಸುವುದು ಸುಲಭವಲ್ಲ. ಈ ಸಂಬಂಧವಾಗಿ ಮಾರ್ಗದರ್ಶನ ಬೇಕಾದರೆ-ಶರಣರ ಜೀವನಕ್ರಮವನ್ನು ಅನುಸರಿಸಬೇಕು. ಲಿಂಗರಶ್ಮಿಯನ್ನು ಹಿಡಿದು ಬಂದವರು ಆ ಶರಣರು-ಮರಳಿ ಆ ಮೂಲಕವೇ ಅಲ್ಲಿಗೆ ತಲುಪುವ ದೃಢನಿರ್ಧಾರ ಉಳ್ಳವರವರು. ಅವರಂತೆ ಕಾಯಕದ ಖಡ್ಗ ಮತ್ತು ದಾಸೋಹಂಭಾವದ ಗುರಾಣಿ ಹಿಡಿದು ಸನ್ಮಾರ್ಗದಲ್ಲಿ ನುಗ್ಗಿದವರಿಗೆ ಮಾತ್ರ ಭಕ್ತಿಭಂಡಾರ ಸೂರೆಯಾಗುವುದು-ಆ ಮೂಲಕವೇ ಯಾವನಿಗಾಗಲಿ ಅರ್ಥ-ಪ್ರಾಣ-ಅಭಿಮಾನ ಶೋಭಿಸುವುದು ಕೂಡ-ಎಂಬುದು ಬಸವಣ್ಣನವರ ಅಭಿಪ್ರಾಯ. ಅವರು ತಮ್ಮನ್ನು ಜನ ಭಕ್ತಿಭಂಡಾರಿಯೆಂದು ಕೊಂಡಾಡುವುದನ್ನು ಒಪ್ಪದೆ-ತಾವಿನ್ನೂ ಹೆಚ್ಚು ಹೆಚ್ಚಾಗಿ ಸಾಧನೆ ಮಾಡಬೇಕಾಗಿದೆಯೆಂದೂ, ತಾವಿನ್ನೂ ಮಾತಿನ ನೆಲೆಯಲ್ಲೇ ನಿಂತಿರುವುದಾಗಿಯೂ ಶಿವ ಭಕ್ತರಲ್ಲಿ ವಿನಂತಿಸಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು