ಬಾಣ-ಮಯೂರನಂತೆ ಬಣ್ಣಿಸಬಲ್ಲೆನೆ?
ಸಿರಿಯಾಳನಂತೆ ಊಣಲಿಕ್ಕಬಲ್ಲೆನೆ?
ದಾಸಿಮಯ್ಯನಂತೆ ಉಡಕೊಡಬಲ್ಲೆನೆ?
ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು:
ಎನಗೆ ಕೊಟ್ಟರೆ ಧರ್ಮ! ಕೂಡಲಸಂಗಮದೇವಾ.
Transliteration Bāṇa-mayūranante baṇṇisaballene?
Siriyāḷanante ūṇalikkaballene?
Dāsimayyanante uḍakoḍaballene?
Uṇḍuṭṭu koṭṭare muyyige muyyenisittu:
Enage koṭṭare dharma! Kūḍalasaṅgamadēvā.
Manuscript
English Translation 2 Can I praise Thee
Like Bāṇa and Mayūra?
Can I feed Thee
Like Siriyāḷa ?
Can I give Thee to wear
Like Dāsimayya ?
When Thou gave'st them a grace
For food and cloth,
It was but exchange of gifts:
It would be real charity
If Thou just gave'st it to me,
O Kūḍala Saṅgama Lord!
Translated by: L M A Menezes, S M Angadi
Hindi Translation बाण मयूर की भाँति
स्तुति कर सकता हूँ?
सिरिताळ की भाँति
भोजन करा सकता हूँ?
दासिमय्या की भाँति
वस्त्र पहना सकता हुँ?
खा-पीकर दो, तो
उपहार का उपहार हुआ।
मुझे दो, तो दान होगा
कूडलसंगमदेव ॥
Translated by: Banakara K Gowdappa
Telugu Translation బాణమయూరుల వలె వర్ణింపనగునే?
సిరియాళుని వలె తినిపింపనగునే?
దాసయ్య వలె చీర కట్టింపగలనే?
తిన, కట్ట, పెట్టిన, సరికి సరిjైు పోయెగాని
నాకు పెట్టినచో నీకు ధర్మమయ్య సంగయ్యా!
Translated by: Dr. Badala Ramaiah
Marathi Translation
बाण मयुरापरी, न ये स्तुती मज
आळवू मी तुज, कैशापरी
श्रीयाळासमान, जे मी कैसे ?
कैसे दासय्यास, वस्त्र देऊ
खाऊनी लेऊनी, उरले अर्पिने
तैसे देणे घेणे, सम झाले
कूडलसंगमदेवा ! तव शरणां देता,
देणे घेणे तत्वता, तोचि धर्म
अर्थ - बाण व मयुर दोघाची परमेश्वरावर नितांत श्रद्धा होती. ते अनन्य भक्त होते. ते दोघे कंधारचा (जि. नांदेड) राजा नंदराज याच्याकडे दरबारी गवई होते. त्यांनी परमेश्वराचे स्तुती वर्णन करून देवाला प्रसन्न करून घेतले होते. परंतु हे प्रभो मला त्यांच्याप्रमाणे गाता येत नाही वा स्तुती वर्णनही करता येत नाही. शिवभक्त श्रीयाळशेठ यांनी आपल्या एकुलत्या एक मुलाला मारुन त्याचे मांस शिजवून व्रतधारी कापालिक जंगमगुरुना जेवण घातले. शिवभक्त दासिमय्या यानी आपल्या स्वहस्ते रेशमी तलम वस्त्र विणून जंगम गुरुना अर्पण केले. व परमेश्वर प्रसन्न करुन घेतले. माझ्यात त्याच्याप्रमाणे ती कला नाही. माझ्याकडे जे काही आहे हेही पोटासाठी ठेवून उरलेसुरले जंगमगुरूना अर्पण करीन, हेही मला मान्य नाही. कारण प्रथम धर्मासाठी व जंगम दासोहासाठी आपल्याजवळची धनसंपत्ती वेचावी व मग उरलेसुरलेले पोटासाठी खर्च करावे. यातच समाधान मानल्यास मी त्यासच धर्म समजेन. मी त्यासच जंगम दासोह समजेन. अन्यथा नाही.
Translated by Rajendra Jirobe, Published by V B Patil, Hirabaug, Chembur, Mumbai, 1983
बाण आणि मयूराप्रमाणे वर्णन करु शकेन का ?
सिरियाळाप्रमाणे जेवण वाढू शकेन का ?
दासिमय्याप्रमाणे वस्त्र-दान करु शकेन का?
खाऊन नेसून परत दिले तर देणे-घेणे सम झाले.
स्वतःलाच अर्पण केले तर धर्म म्हणतो
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಊಣ = ; ಧರ್ಮ = ; ಬಣ್ಣಿಸು = ; ಮಯೂರ = ; ಮುಯ್ಯಿ = ;
ಕನ್ನಡ ವ್ಯಾಖ್ಯಾನ ಇಟ್ಟ ಒಂದು ಊಟಕ್ಕೆ, ಕೊಟ್ಟ ಒಂದು ಬಟ್ಟೆಗೆ ಶಿವನು ಮುಕ್ತಿಯನ್ನು ಸಿರಿಯಾಳ ಮತ್ತು ದಾಸಿಮಯ್ಯಗಳಿಗೆ ಕರುಣಿಸಿದ, ಕಟ್ಟಿ ಹಾಡಿದ ಒಂದು ಸ್ತೋತ್ರಗದ್ಯಕ್ಕೆ ಮತ್ತು ಒಂದು ಭಕ್ತಿಶತಕಕ್ಕೆ ಬಾಣ ಮತ್ತು ಮಯೂರ ಕವಿಗಳಿಗೆ ಶಿವನು ಮುಕ್ತಿಯನ್ನು ಕರುಣಿಸಿದ-ಎನ್ನುತ್ತ ಆ ಶಿವಶರಣರಿಗೆ ಶಿವನು ಒಲಿದಿದ್ದು ಅವರ ಮೇಲಣ ಕೇವಲ ಕೃಪೆಗಾಗಿಯಲ್ಲ-ಅವರ ಅನ್ನಕ್ಕೆ ಬಟ್ಟೆಗೆ ಬಣ್ಣನೆಯ ಮಾತಿಗಾಗಿ-ಮುಯ್ಯಿಗೆ ಮುಯ್ಯೆಂಬಂತೆ ಒಲಿದ-ಎಂದು ಬಸವಣ್ಣನವರು ಶಿವನನ್ನು ಸರಸವಾಗಿ ಆಕ್ಷೇಪಿಸುವ ಮೂಲಕವೇ, ಶಿವಭಕ್ತರ ಅಲ್ಪ ಸೇವೆಗಾಗಿ ಅನಲ್ಪವಾದ ಮುಕ್ತಿ ಸೌಖ್ಯವನ್ನು ಕೊಟ್ಟ ಆ ಶಿವನ ಅಸೀಮ ಔದಾರ್ಯವನ್ನು ಭಕ್ತಿಯಿಂದ ಸ್ಮರಿಸುತ್ತ, ಉಣಿಸಲು ಉಡಿಸಲು ಸ್ಥಿತಿಗತಿಯಿಲ್ಲದ, ವರ್ಣಿಸಿ ಹಾಡಲು ಕವಿತಾ ಮತಿಯಿಲ್ಲದ ತಮಗೂ ಮುಕ್ತಿ ಪ್ರಸಾದವನ್ನು ಕರುಣಿಸಿದರೆ-ಮುಯ್ಯಿಗೆ ಮುಯ್ಯಾಗದೆ-ನಿಜಧರ್ಮವಾಗಿ ಇನ್ನೂ ಹೆಚ್ಚು ಭಕ್ತಿಪ್ರಿಯನೆನಿಸುವೆ ಎಂದು ಶಿವನನ್ನು ಮುದ್ದಾಗಿ ಕೇಳಿಕೊಳ್ಳುತ್ತಲೂ ಇರುವರು.
ಬಾಣ ಮತ್ತು ಮಯೂರ: ಗಾಂಧಾರವೆಂಬ ನಗರದಲ್ಲಿ ನಂದನೆಂಬ ರಾಜನಿದ್ದ. ಅವನ ಆಸ್ಥಾನದಲ್ಲಿ ಬಾಣ ಮಯೂರ ಕಾಳಿದಾಸ ಎಂಬ ಮೂವರು ಕವಿಗಳಿದ್ದರು: ಬಾಣ ಕಾಳಿದಾಸರೀರ್ವರೂ ಶಿವಭಕ್ತರು. ಮಯೂರನು ಮೊದಲಿಗೆ ಸೂರ್ಯೋಪಾಸಕನಾಗಿದ್ದು ಆಮೇಲೆ ಶಿವಭಕ್ತನಾದವನು, ಇವನು ಸೂರ್ಯನನ್ನು ಕುರಿತು ಶತಕವೊಂದನ್ನು ಬರೆದು ತನ್ನ ತೊನ್ನು ರೋಗವನ್ನು ಕಳೆದುಕೊಂಡನು. ಇವನೊಡನೆ ಸ್ಪರ್ಧಿಸಿ ಬಾಣನು ತನ್ನ ಕೈಯನ್ನು ಕತ್ತರಿಸಿಕೊಂಡು ಶಿವನ ಕೃಪೆಯಿಂದ ಅದನ್ನು ಮರಳಿ ಪಡೆದು ಪವಾಡವನ್ನು ಮೆರೆದು ಕೈಯಿಲ್ಲದವರಿಗೆ ಕೈಯನ್ನು ದಾನಮಾಡುವ ಕಾಯಕ ಮಾಡುತ್ತಿದ್ದನು. ಮಯೂರನ “ಶಿವ ಸ್ತೋತ್ರ”ವು ವೀರಶೈವಪುರಾಣ ಪ್ರಪಂಚದಲ್ಲಿ ಬಹುಶ್ರುತವಾಗಿದೆ. (ನೋಡಿ ಹರಿಹರನ ಬಾಣರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ್ರೆ 2-432).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು