•  
  •  
  •  
  •  
Index   ವಚನ - 323    Search  
 
ಭಕ್ತನ ಭಕ್ತಸ್ಥಲ - ಸಂಕಲ್ಪ
ಎನ್ನ ತಪ್ಪು ಅನಂತಕೋಟಿ: ನಿಮ್ಮ ಸೈರಣೆಗೆ ಲೆಕ್ಕವಿಲ್ಲಾ! ಇನ್ನು ತಪ್ಪಿದೆನಾದರೆ ನಿಮ್ಮ ಪಾದವೇ ದಿಬ್ಯ! ಕೂಡಲಸಂಗಮದೇವಯ್ಯಾ, ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣನೆ ಸಾಕ್ಷಿ!
Transliteration Enna tappu anantakōṭi: Nim'ma sairaṇege lekkavillā! Innu tappidenādare nim'ma pādavē dibya! Kūḍalasaṅgamadēvayya, nim'ma pramathara munde kinnara bom'maṇṇane sākṣi!
Manuscript
Music Courtesy:
English Translation 2 Myriads without end are my sins, And of Thy patience there's no count! By Thy feet I swear I will not err again! O Kūḍala Saṅgama, Before Thy Pioneers Let Kinnarabommaṇṇa's feet Be witness, Lord! Translated by: L M A Menezes, S M Angadi
Hindi Translation मेरे अपराध अनंत कोटि हैं, तव सहनशीलता का लेखा नहीं । पुनः अपराध करुँ, तो तव चरण की साक्षी है कूडलसंगमदेव, तव प्रमथों के समक्ष किन्नर बोम्मण्णा साक्षी है ॥ Translated by: Banakara K Gowdappa
Telugu Translation నా తప్పులనంతకోటి నీ సైరణలు లెక్క లేవు ఇక తప్పితినా నీ పాదమే దివ్యము కూడల సంగమదేవా, మీ ప్రమథుల ముందు కిన్నర బొమ్మయ్య యేసాక్షి Translated by: Dr. Badala Ramaiah
Marathi Translation माझ्या चूका अनंत कोटी, तुमची सहनशीलता अपार. पुन्हा चूकलो तर आपले चरण साक्षी आहे. कूडलसंगमदेवा, तुमच्या प्रमथांच्या समोर किन्नरी बोमण्णा साक्षी आहे. Translated by Shalini Sreeshaila Doddamani
ಶಬ್ದಾರ್ಥಗಳು ಅನಂತ = ಅಂತ್ಯವಿಲ್ಲದ; ಕಿನ್ನರ = ; ದಿಬ್ಯ = ; ಪ್ರಮಥರು = ; ಸಾಕ್ಷಿ = ; ಸೈರಣೆ = ;
ಕನ್ನಡ ವ್ಯಾಖ್ಯಾನ ನಾನು ಮಾಡಿದ ತಪ್ಪಿಗಾಗಲಿ, ನೀನು ತೋರಿದ ಸೈರಣೆಗಾಗಲಿ ಲೆಕ್ಕವಿಲ್ಲ-ಅಷ್ಟು ಸತತಾಪರಾಧಿ ನಾನು, ನಿತ್ಯದಯಾಮಯ ನೀನು. ಇಷ್ಟು ದಿನವೂ ನನ್ನ ತಪ್ಪುಗಳನ್ನು ಗಣನೆ ಮಾಡದೆ ಕೇವಲ ಕರುಣೆಯಿಂದಲೇ ನೀನು ನನ್ನನ್ನು ಸಲಹಿಕೊಂಡು ಬಂದಿರುವೆ. ಇನ್ನು ಅಪರಾಧ ಮಾಡಲು ಹೆದರಿದೆ-ಹೇಸಿದೆ-ಮರಳಿಯೂ ಮಾಡಿದ್ದೇ ಆದರೆ-ನಾನು ಮುಟ್ಟಿ ನಮಸ್ಕಾರ ಮಾಡುವ ನಿನ್ನ ಪಾದವೇ ನನಗೆ ಕೆಂಪಗೆ ಕಾದ ಕಬ್ಬಿಣವಾಗಿ ಸುಡಲಿ-ಎನ್ನುತ್ತ ಬಸವಣ್ಣನವರು ತಾವು ಕಿನ್ನರಬೊಮ್ಮಣ್ಣನೆಂಬ ಶರಣನಿಗೆ ಮಾಡಿದ ಅಪಚಾರವನ್ನು ತಿದ್ದಿಕೊಂಡಿರುವುದನ್ನು ಸಾಕ್ಷಿಯಾಗಿ ಕೊಡುತ್ತಿರುವರು: ಬಸವಣ್ಣನವರು ಕಲ್ಯಾಣದಲ್ಲಿದ್ದಾಗ ಅವರ ಮಹಿಮೆಯನ್ನು ಕೇಳಿ ಕಿನ್ನರಿಬ್ರಹ್ಮಯ್ಯನೆಂಬ ಶರಣನು ಬಂದು ಸತ್ಕೃತನಾಗಿ ಅವರ ಮಹಾಮನೆಯಲ್ಲೇ ಸ್ವಲ್ಪ ಕಾಲವಿರುವನು. ಅವನಿಗೆ ಈರುಳ್ಳಿಯೆಂದರೆ ಬಹಳ ರುಚಿ. ಒಂದು ದಿನ ಅದರ ಹುಳಿ ಮಾಡಲು ಅದನ್ನು ಹಚ್ಚುತ್ತಿದ್ದ ವೇಳೆಗೆ ಸರಿಯಾಗಿ ಬಸವಣ್ಣನವರು ಆ ಸುತ್ತುಮುತ್ತಿಗೆ ಬರುತ್ತಾರೆ-ಈರುಳ್ಳಿಯ ನಾತವೆಲ್ಲಿಯದೆಂದು ಆಕ್ಷೇಪಿಸುತ್ತಾರೆ. ಕಿನ್ನರಿಬ್ರಹ್ಮಯ್ಯನಿಗೆ ಅವಮಾನವಾಗುತ್ತದೆ-ಮುನಿದು ಹೇಳದೆ ಕೇಳದೆ ಆ ಮನೆಯಿಂದ ಆ ಕಲ್ಯಾಣದಿಂದ ಆಚೆಗೆ ಹೊರಟು ಹೋಗುತ್ತಾನೆ. ಈ ವಿಚಾರವೆಲ್ಲಾ ತಿಳಿದಾಗ ಬಸವಣ್ಣನವರಿಗೆ ಕೆಂಡವನ್ನು ಮೆಟ್ಟಿದಷ್ಟು ಸಂಕಟವಾಗುತ್ತದೆ ಈರುಳ್ಳಿಯಿಂದಾದ ಮನಸ್ತಾಪವನ್ನು ಈರುಳ್ಳಿಯಿಂದಲೆ ಕಳೆಯಲೆಂದು ನಿಶ್ಚಯಿಸಿ-ಊರನ್ನೆಲ್ಲ ಈರುಳ್ಳಿಯಿಂದಲೇ ಶೃಂಗರಿಸಿ. ತಾನೂ ಈರುಳ್ಳಿಯನ್ನೇ ಉಟ್ಟು ತೊಟ್ಟು ಸುತ್ತಿ ಹೊದೆದು-ಈರುಳ್ಳಿಮಯವಾದ ಒಂದು ಮೆರವಣಿಗೆ ತೆಗೆದು ಕಿನ್ನರಯ್ಯನಿದ್ದಲ್ಲಿಗೆ ಹೋಗಿ ಅವನ ಮುನಿಸನ್ನು ಕಳೆದು ತರುತ್ತಾರೆ. ಅಲ್ಲಿಂದಾಚೆಗೆ ಬಸವಣ್ಣನವರು ಕಿನ್ನರಿ ಬೊಮ್ಮಯ್ಯನ ಹೆಸರಿನಲ್ಲಿ ಪ್ರತಿವರ್ಷವೂ ಈರುಳ್ಳಿಯ ಹಬ್ಬವನ್ನು ಆಚರಿಸುವುದಾಗಿ ನೇಮವನ್ನು ಕೈಗೊಂಡರೆಂದು ಹರಿಹರನು ತನ್ನ ಬಸವರಾಜದೇವರ ರಗಳೆಯಲ್ಲಿ ತಿಳಿಸಿರುವನು. (ನೋಡಿ 2ನೇ ಸ್ಥಳ) ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರು-ತಮ್ಮ ಚಿಕ್ಕಂದಿನ ಪರಿಸರದಿಂದಾಗಿ ತಮಗೆ ಮೈಗೂಡಿದ್ದ ಕೆಲವು ಆಹಾರ ವಿಧಾನಗಳನ್ನೂ-ಶರಣರ ಸಂಪ್ರೀತಿಗಾಗಿ-ತಿದ್ದಿಕೊಳ್ಳಬೇಕಾಯಿತು.ಅವರ ಅಪಾರ ಸಂಯಮ ಮತ್ತು ತ್ಯಾಗ ಇದರಿಂದ ವ್ಯಕ್ತವಾಗುತ್ತದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು