ಭಕ್ತನ ಭಕ್ತಸ್ಥಲ - ಸತ್ವಪರೀಕ್ಷೆ
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ;
ಬಡವನೆಂದೆನ್ನ ಕಾಡದಿರಯ್ಯಾ:
ಎನಗೆ ಒಡೆಯರುಂಟು ಕೂಡಲಸಂಗನ ಶರಣರು.
Transliteration Aḍigaḍige enna manava jaḍidu nōḍadirayya;
baḍavanendenna kāḍadirayyā:
Enage oḍeyaruṇṭu kūḍalasaṅgana śaraṇaru.
Manuscript
English Translation 2 Do not, O Lord, at every step
Tap at my heart by way of test;
Do not, O Lord. plague me
Because I am a waif
I have my masters too;
Kūḍala Saṅga's Śaraṇās.
Translated by: L M A Menezes, S M Angadi
Hindi Translation पग पग पर मेरे मन को ठोंककर, मत देखो,
अनाथ समझ मुझे मत सताओ,
मेरे नाथ हैं कूडलसंग के शरण ॥
Translated by: Banakara K Gowdappa
Telugu Translation అడుగడుగున నా మనసు
నడలించి చూడకయ్యా!
బడుగని నను బాధపెట్టకయ్యా!
ఒడయులుగలరు నాకు సంగని శరణులు!
Translated by: Dr. Badala Ramaiah
Marathi Translation
पावला पावलाला माझ्या मनाची परीक्षा पाहू नका देवा.
गरीबाला त्रास देवू नका.
माझे मालक कूडलसंगमदेवाचे शरण.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾವನಾದರೊಬ್ಬನನ್ನು ತಡೆದು ನಿಲ್ಲಿಸಿ ಬೈದು ಬೆದರಿಸುತ್ತಿದ್ದರೆ-ದಿನದಿನವೂ ಇದೇ ಗತಿಯಾದರೆ-ಅವನಿಗೆ ಯಾರೂ ರಕ್ಷಕರಿಲ್ಲ. ಅವನನ್ನು ಕೊಂದರೂ ಕೇಳುವವರಿಲ್ಲವೆಂಬುದು ಸ್ಪಷ್ಟ ತಾನೆ ? ಸ್ಪಷ್ಟ !
ಶಿವನೂ ಬಸವಣ್ಣನವರನ್ನು ವಿಧವಿಧವಾಗಿ ಕಷ್ಟಗಳಿಗೆ ಒಡ್ಡುತ್ತಿದ್ದಾನೆ. ಅವರ ಮನಸ್ಸು ಗಟ್ಟಿಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲೇ ಆಗಲಿ ಹಿಗ್ಗಾಮುಗ್ಗಾ ಹಿಡಿದು ಜಗ್ಗುತ್ತಿದ್ದಾನೆ. ಈ ನಿತ್ಯಾಗ್ನಿ ಪರೀಕ್ಷೆಗಳಿಂದ ಬೆಂದ-ಆದರೂ ಚಿನ್ನವಾದ ಬಸವಣ್ಣನವರು ದೇವರನ್ನು ಎದುರಿಸಿ ನಿಂತು-ನನ್ನನ್ನು ನೀನು ಯಾರೂ ಇಲ್ಲದ ಪರದೇಶಿಯೆಂದು ತಿಳಿದು ಕಾಡುತ್ತಿರುವೆಯೇನು ?ನನಗೆ ಶರಣೆರೆಂಬ ಒಡೆಯರಿದ್ದಾರೆ.ಅವರು ತಮ್ಮ ಆಳಾದ ನನಗೆ ಹಿಂಸೆಯಾದರೆ ಸಹಿಸುವರಲ್ಲ ಜೋಕೆ ಎಂದು ಶಿವನಿಗೆ ಎಚ್ಚರಿಸಿದರೆಂಬಂತೆ ಈ ವಚನದ ಧೋರಣೆಯಿದ್ದು-ಶಿವನಿಗಿಂತಲೂ ಶಿವಶರಣರೇ ಪ್ರಬಲರೆಂಬ, ಅವರಿಗೆ ಶಿವನೂ ಸಗ್ಗುವನೆಂಬ ಆಶಯ ಅಲ್ಲಿ-ಅಡಗಿದೆ.
ಸಾಧಕನಿಗೆ ಶಿವನನ್ನು ತೋರಿದವರೂ ಶಿವಶರಣರೇ.ಆ ಸಾಧಕನಿಗೂ ಶಿವನಿಗೂ ಗಂಟುನಂಟು ಹಾಕಿದವರೂ ಶಿವಶರಣರೇ. ಇಬ್ಬರ ನಡುವೆ ಘರ್ಷಣೆಯೇರ್ಪಟ್ಟರೆ ಸುಗಮ ಮಾಡಬಲ್ಲವರು ಶಿವಶರಣರೆ, ಅವಶ್ಯಬಿದ್ದರೆ-ಶಿವಶರಣರು ಶಿವನ ಸವಾಲಿಗೆ ಪ್ರತಿಸವಾಲಾಗಿ ನಿಲ್ಲಬಲ್ಲರು-ಶಿವಭಕ್ತರ ಪರವಾಗಿ ಭಕ್ತರ ದಿವ್ಯ ಜೀವನದಲ್ಲಿ ಶರಣರಿಗೆ ಬಸವಣ್ಣನವರು ಕೊಡಮಾಡಿರುವ ಸ್ಥಾನಮಾನ ಅಸದೃಶವಾದುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು