ಭಕ್ತಿವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು;
ಹಾಸಿ ದುಡಿದರೆ ತನಗುಂಟು, ತನ್ನ ಪ್ರಮಥರಿಗುಂಟು.
ಮಾರಿತಂದೆಗಳಂತೆ ಎನಗೇಕಹುದಯ್ಯಾ?
ರತ್ನದ ಸಂಕಲೆಯನಿಕ್ಕಿ ಕಾಡಿಹೆ
ಕೂಡಲಸಂಗಮದೇವಾ, ಶಿವಧೋ! ಶಿವಧೋ!!
Transliteration Bhaktiviśēṣava māḍidare hattu beraḷugaḷuṇṭu;
hāsi duḍidare tanaguṇṭu, tanna pramathariguṇṭu.
Māritandegaḷante enagēkahudayyā?
Ratnada saṅkaleyanikki kāḍ'̔ihe
kūḍalasaṅgamadēvā, śivadhō! Śivadhō!!
Manuscript
English Translation 2 For doing plenty acts of piety
I have ten fingers on my hands:
It is enough for me
And for the Pioneers
That I do not restrain
Myself in deeds of work....
How can it be for me
Even as for Father Mārayya ?
O Kūḍala Saṅgama Lord,
You vex me with these jewelled chains:
Alack, alack for me, my God !
Translated by: L M A Menezes, S M Angadi
Hindi Translation विशिष्ट भक्ति करना चाहूँ तो दस उँगलियाँ हैं।
बुनकर कमाऊँ तो मेरे लिए है, मेरे प्रमथों के लिए हैं।
पिता मारय्या की भाँति मुझे क्यों होगा?
रत्न-शृंखलाएँ डालकर सताते हैं, कूडलसंगमदेव,
पाहि पाहि देवदेव ॥
Translated by: Banakara K Gowdappa
Telugu Translation భక్తి విశేషము సేయ పది వేళ్ళు నాకుండె;
ఒడలు వంచి కష్టింప నాకు నా ప్రమథులకూ
గలదు మారయ్య వలె నా కెట్ల గునయ్యా
రత్న సంకెళ్ళు వైచిబాధింతువే దేవ! శివధో శివధో!
Translated by: Dr. Badala Ramaiah
Marathi Translation
भक्तिसाठी दहा बोटाची मेहनत
गणना महाभक्त होण्यासाठी
परी तुझे पोट नाही भरणार
भार तू होणार, भूमंडळी
त्या दोन्ही हाताने परिश्रम तू करी
मिळेल भाकरी, सर्वालागी
मोळी मारय्या हा राजा असुनि थोर
श्रम भरपूर, केले त्याने
कूडलसंगमदेव! कायक जो राहील
तयाला तारील, देव माझा
अर्थ - दहा बोटानी जपमाळाने तुझे नामस्मरण मोजीत राहील त्याची भक्ति समाजात विशेष उठून दिसेल. आणि हे करणे सर्वानाच शक्य आहे. पण त्यामुळे स्वतःचेही पोट भरणार नाही किंवा इतराचेही भले होणार नाही. म्हणून त्याच हाताने परिश्रम (कायक) केल्यास त्याला कैलास प्राप्त होईल व इतराचेही भले होईल. हीच खरी इश्वराची भक्ति होय. काश्मिरचा राजा मोळी मारय्या राजपद त्याग करून महात्मा बसवेश्वरांच्या सत्संगात राहिला व दररोज जंगलतील लाकूड फाटे तोडून त्यातून मिळविलेल्या उत्पन्नातून गुरु लिंग जंगम दासोह करीत शिवशरणासारखे जीवन जगू लागला म्हणून धन संचय न करता शरणांचा सत्संग व शरणमार्शरणमार्ग धरील अशा भक्ताचे रक्षण माझा कुडलसंगमदेव अर्थात परमेश्वर निश्चित करील. महात्मा बसवेश्वर यांनी ( कायक ) श्रम हेच कैलास अशी उदघोषणा करुन जगाला जनकल्याण साधणारा महामंत्र दिला व आपल्या कृतीतून सिद्ध करुन दाखविला.
Translated by Rajendra Jirobe, Published by V B Patil, Hirabaug, Chembur, Mumbai, 1983
भक्ती विशेष करण्यासाठी दहा बोटे आहेत.
श्रम केले तर मलाही होईल.
माझ्या प्रमथांनाही होईल.
मोळगी मारय्यापित्यासम मी कसा होईन देवा?
सुवर्ण साखळीने बांधून त्रास देतात.
कूडलसंगमदेवा रक्षणकरा, रक्षणकरा.
Translated by Shalini Sreeshaila Doddamani
ಶಬ್ದಾರ್ಥಗಳು ಪ್ರಮಥರು = ; ರತ್ನ = ; ಶಿವಧೋ = ; ಸಂಕಲೆ = ;
ಕನ್ನಡ ವ್ಯಾಖ್ಯಾನ ಭಕ್ತಿಯನ್ನು ಮಾಡಿಕೊಂಡು ಹೋಗಲು ಎರಡು ಕೈಯಿವೆ. ಒಂದೊಂದು ಕೈಯಲ್ಲೂ ಐದೈದು ಬೆರಳಿವೆ. ನೆಯ್ದು ದುಡಿಯುವುದಾದರೆ ನನಗೆ ಮತ್ತು ನಮ್ಮ ಪ್ರಮಥ(ಶರಣ)ರಿಗೆ ಸಾಕಾಗುವಷ್ಟು ಸಂಪಾದಿಸಬಹುದು. ಆದರೆ ನಾನು ಬಿಜ್ಜಳನ ಬಳಿ ಭಂಡಾರಿ ಎಂಬ ಬಡಾಯಿಗೆ ಸಿಕ್ಕಿಬಿದ್ದು ಹಲವೊಮ್ಮೆ ಅವಮಾನಗೊಂಡಿರುವೆನಲ್ಲದೆ-ದಾಸೋಹ ಜೀವನವನ್ನು ಪೂರ್ಣಕಾಲ ನಡೆಸಲೂ ಅಸಮರ್ಥನಾಗಿದ್ದೇನೆ. ಎಲೆ ದೇವರೆ, (ನೀನು) ನನ್ನನ್ನು ರತ್ನದ ಸಂಕೋಲೆಯಲ್ಲಿ ಕಟ್ಟಿಹಾಕಿದರೇನು-ನಾನು ಬಂದಿಯಲ್ಲವೆ? ನಾನು ಭಂಡಾರಿಯಾದರೇನು-ರಾಜನ ಚಾಕರನಲ್ಲವೆ?ಎಂದು ಬಸವಣ್ಣನವರು ತಾವು ಶಿವಶರಣರ ಆಳಾಗಿಯೂ ಪ್ರಾಪಂಚಿಕರ ಮರ್ಜಿಯನ್ನು ಹಿಡಿಯಬೇಕಾದ ಉದ್ಯೋಗವೊಂದರಲ್ಲಿ ಸಿಕ್ಕಿಬಿದ್ದುದದಕ್ಕೆ ದುಃಖಿಸುತ್ತಿರುವಂತಿದೆ. ಈ ವಚನದಲ್ಲಿ ಬಸವಣ್ಣನವರು ನೆಯ್ಗೆ ಕಾಯಕ ಮಾಡಿ ತಾವು ಸ್ವತಂತ್ರವಾಗಿ ಬದುಕುವುದಲ್ಲದೆ-ದಾಸೋಹವನ್ನು ಮಾಡಲೂ ತಮಗೆ ಸಾಧ್ಯವಿದೆ ಎಂಬಂತೆ ಮಾತನಾಡುವುದನ್ನು ನೋಡಿದರೆ-ಅವರು ನೆಯ್ಗೆಯ ಕೆಲಸದಲ್ಲೂ ಪರಿಣತರಿದ್ದರೆನಿಸುವುದು.
ಇದೇ ವಚನಸಂದರ್ಭದಲ್ಲಿ ಬಸವಣ್ಣನವರು ಮಾರತಂದೆಯೆಂಬೊಬ್ಬ ಶಿವಶರಣನನ್ನು ನೆನೆದು, ಅವನಂತಾಗಲು ತಮಗಾಗಲಿಲ್ಲವೆಂದು ಮರುಗುತ್ತಲೂ ಇರುವರು. ಈ ಮಾರತಂದೆ ಯಾರೋ ಖಚಿತವಾಗಿ ಹೇಳಲಾಗುತ್ತಿಲ್ಲ. ಮಾರ ಎಂಬ ಹೆಸರಿನ ಹಲವು ಶರಣರಿದ್ದರು : ಮೋಳಿಗೆ ಮಾರತಂದೆ, ತಂಗಟೂರ ಮಾರಯ್ಯ (ನೋಡಿ ವಚನ 810), ಢಕ್ಕೆಯ ಮಾರಯ್ಯ, ಅರಿವಿನ ಮಾರಿತಂದೆ, ಕನ್ನದ ಮಾರಯ್ಯ, ಕಂಭದ ಮಾರಯ್ಯ, ಕೂಗಿನ ಮಾರಯ್ಯ, ನಗೆಯ ಮಾರತಂದೆ, ಮನಸಂದ ಮಾರಯ್ಯ, ಸತ್ತಿಗೆ ಕಾಯದ ಮಾರಯ್ಯ ಎಂದು ಮುಂತಾಗಿ ಇದರಲ್ಲಿ ನಯ್ಗೆಯ ಕಾಯಕದ ಮಾರಯ್ಯ ಯಾರು ?
ಹಾಸು ಎಂದರೆ ಹಾಸಿದ ನೂಲು, ಸಾಲಿಗ ಎಂದರೆ ನೆಯ್ಗೆಯವ ಮತ್ತು ಹಾಸು(ಹಾಸ ಪಾಶ) ಎಂದರೆ ಹಗ್ಗವೆಂದು ಹಗ್ಗವನ್ನು ಹಾಸು ಎಂದೂ ಅರ್ಥವಾಗಬಲ್ಲುದು. ಆ ಪಕ್ಷಕ್ಕೆ ಕಾಡು ಕಟ್ಟಿಗೆಯನ್ನು ಹಗ್ಗದಲ್ಲಿ ಕಟ್ಟಿ ಮಾರುತ್ತಿದ್ದ ಮೋಳಿಗೆ ಮಾರಯ್ಯನನ್ನೇ ಬಸವಣ್ಣನವರು ನೆನೆದಿರುವರೆಂದೂ ಆಗುವುದು. ವಚನದಲ್ಲಿ ಹತ್ತೂ ಬೆರಳಿನ ಪ್ರಸ್ತಾಪ ಮಾಡಿರುವುದರಿಂದ ಈ ಎರಡನೇ ಊಹೆಯೇ ಸರಿ(ಯೇನು?). ಬಸವಣ್ಣನವರು ತಮ್ಮ 810ನೇ ವಚನದಲ್ಲಿ “ಹಾಸನಿಕ್ಕಿಸಾಲಿಗನಾದ” ಎಂಬ ಮಾತಂತೂ ನೆಯ್ಗೆಯವನನ್ನು ಕುರಿತೇ ಹೇಳಿದ್ದಾಗಿದೆ. ಸಾಲಿಗನೆಂದರೆ ನೆಯ್ಗೆಯವ -ನೋಡಿ ಅಭಿಧಾನರತ್ನಮಾಲಾ-97. ನೋಡಿ ವಚನ 472.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು