•  
  •  
  •  
  •  
Index   ವಚನ - 326    Search  
 
ಭಕ್ತನ ಭಕ್ತಸ್ಥಲ - ಶರಣರು
ಮನೆ ನೋಡಾ, ಬಡವರು: ಮನ ನೋಡಾ, ಘನ; ಸೋಂಕಿನಲ್ಲಿ ಸುಖಿ: ಸರ್ವಾಂಗ ಕಲಿಗಳು. ಪಸಾರಕ್ಕನುವಿಲ್ಲ: ಬಂದ ತತ್ ಕಾಲಕ್ಕುಂಟು; ಕೂಡಲಸಂಗನ ಶರಣರು ಸ್ವತಂತ್ರಧೀರರು!
Transliteration Mane nōḍā, baḍavaru: Mana nōḍā, ghana; sōṅkinalli sukhi: Sarvāṅga kaligaḷu. Pasārakkanuvilla: Banda tat kālakkuṇṭu; kūḍalasaṅgana śaraṇaru svatantradhīraru!
Manuscript
Music Courtesy: Provided to YouTube by Mars Inc Manenoda Badavaru · Ambayya Nuli Vachana Sambrama ℗ Akash Audio Released on: 2022-05-21
English Translation 2 Look at their hearth, they're poor indeed: Look at their heart, they're great. Their simple touch is bliss; They're brave from top to toe; There's nothing they can spare, But only for the hour that comes: Kūḍala Saṅga's Śaraṇās Are brave and free! Translated by: L M A Menezes, S M Angadi
Hindi Translation घर देखें, तो निर्धन हैं मन देखें, तो महान स्पर्श सुखी हैं सर्वांग शूर हैं संग्रह की सुविधा नहीं तत्काल के लिए है, कूडलसंग के शरण स्वतंत्र धीर हैं। Translated by: Banakara K Gowdappa
Telugu Translation ఇల్లు చూడ బడుగు నుల్లము గన ఘనం బంటిన సుఖి సర్వాంగముల బల్లిదులు ప్రచారమునకనువు లేదు వచ్చు వేళకు సర్వము సిద్ధమై యుండు సంగని శరణులు స్వతంత్ర ధీరులయ్యా Translated by: Dr. Badala Ramaiah
Marathi Translation घरासी पाहता, गरीबाची जाण मन ते महान, शरणांचे समर्पनी सुखी, समाधानी वीर स्वतंत्र्य नि धीर, शरण ते कूडलसंगमदेवा ! ऐसे तुझे शरण निर्मळ ते जाण, भूमंडळी अर्थ - माझ्या कूडलसंगमदेवाच्या शरणांची घरे पाहिल्यास छप्पराची व गवताची दिसतील पण त्यात राहणाऱ्यांचे मन विशाल, धीर, गंभीर व शिवमय दिसेल, ते जे मिळवितात ते परमात्म्याचेच समजून जंगम दासोहास्तव समर्पण करतात. त्यातच त्यांना समाधान व परमानंद मिळतो. ते इहलोकात म्हणून असूनही मायाधीन नाहीत. वा परलोकात राहिल्यास पराधीन नाहीत. कारण इह व पर या दोन्ही गोष्टी त्यांनी आपल्या आधीन करुन घेतलेल्या आहेत. स्वतंत्र वृत्ती धीर गंभीरता व निर्मळ मन हेच त्यांच्या अंगी असलेले विशेष गुण होय. म्हणून ते या जगात सदैव समाधानी असतात. Translated by Rajendra Jirobe, Published by V B Patil, Hirabaug, Chembur, Mumbai, 1983 घर पहा गरीबाचे आहे, मन पाहिले तर महान. अर्पण करण्यात शुध्द, सर्वांग शूर, प्रदर्शन नाही. वेळ येता खर्च देतात. कूडलसंगाचे शरण स्वतंत्र धीर आहे. Translated by Shalini Sreeshaila Doddamani
ಶಬ್ದಾರ್ಥಗಳು ಕಲಿ = ; ಘನ = ; ಧೀರ = ; ಪಸಾರ = ; ಸೋಂಕು = ;
ಕನ್ನಡ ವ್ಯಾಖ್ಯಾನ ಶಿವಶರಣರು ನೆರಿಕೇ ಮನೆಯಲ್ಲೇ ಹುಲ್ಲುಗುಡಿಸಿಲಲ್ಲೇ ವಾಸಮಾಡುತ್ತಿರಬಹುದು-ಆ ದೃಷ್ಟಿಯಿಂದ ನಿರ್ಧನಿಕರಂತೆ ಕಂಡರೂ ಅವರು ಅತ್ಮೈಶ್ವರ್ಯಸಂಪನ್ನರು: ತಮಗೆ ಸಂಪತ್ತಾಗಬೇಕೆಂದು ಎಂದಿಗೂ ಯಾರನ್ನೂ ಆಶ್ರಯಿಸುವುದಿಲ್ಲ, ಅವರ ಮನಸ್ಸು ಮೃದು-ಪ್ರೀತಿಯಿಂದ ಮುಟ್ಟಿದರೆ ಪುಳಕಗೊಳ್ಳುವರು-ಅದರೆ ತಮ್ಮ ಅಭಿಮಾನಕ್ಕೆ ಚ್ಯುತಿ ಬಂತೆಂದರೆ ಅದರ ವಿರುದ್ಧ ನಿರ್ಭೀತಿಯಿಂದ ಹೋರಾಡುವರು. ಆ ಹೋರಾಟದಲ್ಲಿ ಬಲಗೈ ಕತ್ತರಿಸಿ ಬಿದ್ದರೆ ಎಡಗೈಯಿಂದ, ಎರಡೂ ಕೈ ಕತ್ತರಿಸಿ ಬಿದ್ದರೆ ಕಾಲಿಂದ, ತಮ್ಮೆಲ್ಲ ವೀರಾವೇಶದಿಂದ ಹೋರಾಡುವರು-ತಲೆ ಕತ್ತರಿಸಿಬಿದ್ದರೆ-ಧರ್ಮಕ್ಕೆ ಜಯವಾಗಲೆಂದು ಶಿವನಿಗೆ ಪ್ರಾಣಾರ್ಪಣ ಮಾಡುವರು, ಆದರೆ ತಮ್ಮ ಜೀವನ ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟು ದುಷ್ಟರಿಗೆ ಶರಣಾಗತರಾಗಿ ಬದುಕು ಸಾಗಿಸುವುದಿಲ್ಲ. ಇಂಥ ಕಡುಗಲಿಗಳಿಗೆ ಪ್ರದರ್ಶನ ಮಾಡುವಷ್ಟು ಐಶ್ವರ್ಯವಿಲ್ಲದಿದ್ದರೇನು-ಮನೆಗೆ ಬಂದ ಅತಿಥಿಗಳಿಗೆ ಸಮಯೋಚಿತವಾಗಿ ಯಥಾಶಕ್ತಿ ಸತ್ಕಾರವನ್ನು ಮಾಡುವುದಕ್ಕುಂಟು. ಈ ವಿಧವಾದ ಸೇವಾ ಜಿವನಕ್ಕಾಗಿಯೇ ಶರಣರು ಕುತ್ಸಿತರನ್ನು ಆಶ್ರಯಿಸದೆ.ತಮ್ಮ ಬಡತನವನ್ನು ಲೆಕ್ಕಿಸದೆ ವೀರದಿಂದ ಮತ್ತು ದಾನಗುಣದಿಂದ ನಮಗೆ ಪೂಜ್ಯರಾಗಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು