ತತ್ತ್ವ ವನರಿದೆನೆಂದು ಮೃತ್ಯುವ ಕರಕೊಂಡೆನಯ್ಯಾ,
ನಾನೆತ್ತ ಬಲ್ಲೆ ನಿಮ್ಮ ಶರಣರಂತುವನು?
ನಾನೆತ್ತ ಬಲ್ಲೆ ನಿಮ್ಮ ಪ್ರಮಥರಂತುವನು?
ಸರ್ವಾಪರಾಧಿಯಾನು; ಎನ್ನ ಮನದ ಕೊನೆಯ ಸೂತಕ ಹಿಂಗದು,
ಕೂಡಲಸಂಗಮದೇವಾ.
Transliteration Tattva vanaridenendu mr̥tyuva karakoṇḍenayyā,
nānetta balle nim'ma śaraṇarantuvanu?
Nānetta balle nim'ma pramatharantuvanu?
Sarvāparādhi nānu; enna manada koneya sūtaka hiṅgadu,
kūḍalasaṅgamadēvā.
Manuscript
English Translation 2 Presuming that I know the Truth,
I welcome death, O Lord:
How can I know
The secret of Thy Śaraṇās ?
How can I know
The secret of Thy pioneers?
I am a sinner at all points:
Upon the summit of my mind
The infection still persists,
O Kūḍala Saṅgama Lord!
Translated by: L M A Menezes, S M Angadi
Hindi Translation अपने को तत्वज्ञ मान
मैंने मृत्यु का स्वागत किया।
मैं क्या जानूँ
तव शरण मर्म?
मैं क्या जानूँ
तव प्रमथों का मर्म?
मैं सर्वापराधी हूँ,
मेरे चित्ताग्र का सूतक दूर नहीं होता
कूडलसंगमदेव ॥
Translated by: Banakara K Gowdappa
Telugu Translation తత్త్వము తెలిసెనంచు మృత్యువును పిలుతునయ్యా
నీ శరణుల గుట్టు నా కెట్లు తెలియును?
నే నెట్లు తెలియగలనయ్య నీ ప్రమధుల పట్టు
అన్నిట నపరాధి నేను నా యాత్మ
తుది సూతకమింకదు కూడల సంగమదేవా!
Translated by: Dr. Badala Ramaiah
Marathi Translation
तत्त्वज्ञान जाणले म्हणून मृत्यूला बोलविले देवा.
मी कसे जाणू आपल्या शरणांचे महिमा?
मी कसे जाणू आपल्या प्रमथांचे महिमा?
सर्वांचा अपराधी मी आहे.
माझ्या मनाचे सूतक नष्ट होत नाही कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಪರಾಧಿ = ತಪ್ಪು ಎಸಗಿದ; ತತ್ವ = ; ಪ್ರಮಥರು = ; ಮೃತ್ಯು = ; ಸೂತಕ = ; ಹಿಂಗು = ;
ಕನ್ನಡ ವ್ಯಾಖ್ಯಾನ ಶರಣರ ನಿಜವನ್ನು ಪರೀಕ್ಷಿಸಿ ನೋಡುವನೆಂದು ನುಗ್ಗಿ ನನ್ನಲ್ಲೇ ತುಂಬಿರುವ ಮಾಯೆಗೆ ನಾನು ಬಲಿ ಬಿದ್ದೆ. ನಿರಾಡಂಬರಿಗಳಾದ ಶಿವಶರಣರ ಗುಪ್ತಭಕ್ತಿಯೇನು ಗೊತ್ತು ನನಗೆ ?
ಶಿವನೇ, ನೀನು ಕಾಮಹರನಾಗಿ ಅರ್ಧನಾರೀಶ್ವರನು, ವಿಷಕಂಠನಾಗಿ ರೇಖಾಚಂದ್ರಧರನು, ಭಿಕ್ಷುಕನಾಗಿ ಜಗದೊಡೆಯನು-ನಿನ್ನ ಭಕ್ತರಿನ್ನೆಂಥವರೋ?
ನಿನ್ನನ್ನು ತಿಳಿದವನೆಂಬ ಅಹಂಕಾರದಿಂದ ನಿನ್ನ ಭಕ್ತರನ್ನು ಪರೀಕ್ಷಿಸಿ ತಿಳಿಯುವೆನೆಂಬುದು ಸಲ್ಲದು. ಶಿವಭಕ್ತರು ಸಾಕ್ಷಾತ್ ಶಿವಸ್ವರೂಪಿಗಳೆಂಬುದು ಸ್ವತಸ್ಸಿದ್ಧವಿಚಾರ. ಇದನ್ನು ಅರಿಯದವನು ಶಿವನನ್ನೂ ಅರಿಯ
ವಿ: ಈ ವಚನದ ಅರ್ಥವನ್ನು ಖಚಿತವಾಗಿ ಗ್ರಹಿಸಲಾಗುತ್ತಿಲ್ಲ-ಕಾರಣ: ಇಲ್ಲಿ ತತ್ತ್ವವೆಂದರೇನು. ಬಸವಣ್ಣನವರು ಯಾವ ಶರಣರನ್ನು ಪರೀಕ್ಷಿಸುವ ಭರದಲ್ಲಿ ಸಾವಿನ ಅಪಾಯಕ್ಕೆ ಒಳಗಾಗಿದ್ದರು ಎಂಬುದು ತಿಳಿಯುತ್ತಿಲ್ಲ, ಮತ್ತು ತತ್ತ್ವವನರಿಹದೆ ಮತ್ತು ತತ್ತ್ವ ವನರಿದಿಹೆನೆಂಬೆರಡರಲ್ಲಿ ಯಾವುದು ಮೂಲ ಪಾಠವೆಂಬುದನ್ನೂ ನಿಶ್ಚಯಿಸಲಾಗುತ್ತಿಲ್ಲ. ಅದರೂ(ಶಿವ) ತತ್ತ್ವವನ್ನು ತಿಳಿದ ಮಾತ್ರಕ್ಕೇ ಶರಣರ (ಮತ್ತು ಪ್ರಮಥರ) ಚಿದಂಬರ ರಹಸ್ಯ ತಿಳಿಯಿತೆಂಬುದು ಸುಳ್ಳು-ಎಂಬುದನ್ನು ಮಾತ್ರ ಈ ವಚನದ ಅಭಿಪ್ರಾಯವೆಂದು ಸದ್ಯಕ್ಕೆ ಮಾನ್ಯ ಮಾಡಬಹುದು. ಅಲ್ಲಮ ಅಜಗಣ್ಣ ಮರುಳುಶಂಕರದೇವ ಮುಂತಾದವರ ಅಂತಸ್ಥವನ್ನು ಮಾಯಾಮೋಹಿತರು ತಿಳಿಯುವುದೇನೂ ಸುಲಭವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು