ಆ ಮಿಹಿಲಾಳು ಭೋಜ ದೇವುಲಾಳು:
ಆನು ಸೂಳೆ, ನಮ್ಮಕ್ಕನೂ ಸೂಳೆ!
ಬೆಳ್ಳಿಗೆ ಆವಿನ ಕರುವೆಂದೊಡೆ ಬಳ್ಳವಾಲ ಕರೆವುದೆ?
ಕೂಡಲಸಂಗನ ಶರಣರ ಮುಂದೆ ನಾನು ಕಾದಹೆ ಬಾಬಿಸಿಲೆ?
Transliteration Ā mihilāḷu bhōja dēvulāḷu:
Ānu sūḷe, nam'makka sūḷe!
Beḷḷigeyāvina karuvendoḍe baḷḷavaḷa karevude?
Kūḍalasaṅgana śaraṇara munde nānu kādahe bābisile?
Manuscript
English Translation 2 King Bhoja's servant, Mihil, am I
I am a harlot, so's my sister too!
What if it be
A white cow's calf, does it yield milk?
Upon Kūḍala Saṅga's Śaraṇās
I wait, to do their will
Translated by: L M A Menezes, S M Angadi
Hindi Translation अमिहिलाळु भोज देवुलाळु,
मैं वेश्या हूँ, मेरी बहन भी वेश्या है,
श्वेत गाय की बछिया हो,
तो सेरों दूध देगी?
कूडलसंग के शरणों के समक्ष
मैं प्रतीक्षा करती हूँ॥
Translated by: Banakara K Gowdappa
Telugu Translation నే నా భోజ దేవుని భటుడ మహిళుడ
నే నొక వేశ్య మాయక్కయూ వేశ్య
వెల్లావు దూడయన బళ్ళెడు పాలిచ్చు నే?
కాతురని సంగని శరణుల ముందు కాచుకొని యుంటి.
Translated by: Dr. Badala Ramaiah
Marathi Translation
आमिहिलाळ वंचक आहे, भोजदेवल प्रामाणिक आहे.
मी वेश्या, माझी मोठी बहिण वेश्या
जातीवंत पांढरी गाय म्हणण्याने भांडेभर दूध देईल?
कूडलसंगमदेवाच्या शरणांच्या प्रतिक्षेत मी आहे, ये लवकर.
Translated by Shalini Sreeshaila Doddamani
ಶಬ್ದಾರ್ಥಗಳು ಒಳ್ಳಿವಾಲ = ; ಕಾದಹೆ = ; ಮಿಹಿ = ;
ಕನ್ನಡ ವ್ಯಾಖ್ಯಾನ ಈ ವಚನದ ಪಾಠ ಕೆಟ್ಟಿದೆ –ಕುಲಗೆಟ್ಟಿದೆ. ಹಳೆಯ ವಾಖ್ಯಾನಕಾರರೂ ತಮತಮಗೆ ತೋಚದಂತೆ ಪಾರಾಗಲು ಅರ್ಥೈಸಿದ್ದಾರೆ ನಾನು ? ಮಿಹಿಲನೆಂಬವನು ಒಬ್ಬ ಆಳು, ಅವನು “ನಾನೂ ಆಳೂ, ಭೋಜದೇವನ ಬಳಿಯಿದ್ದ ದೇವುಲು ಎಂಬವನೂ ಒಬ್ಬ ಆಳು” ಎಂದರೆ-ಇಬ್ಬರೂ ಒಂದಾದೀತೆ ? ಭೋಜದೇವನ ದೇವುಲು ಎಂಬ ಆಳು ಒಡೆಯರಿಗಾಗಿ ಪ್ರಾಣ ಕೊಟ್ಟವನು-ಇನ್ನೊಬ್ಬ(ಮಿಹಿಲ)ನು ಜೀವಗಳ್ಳ. ಅವರಿಬ್ಬರೂ ಆಳು ಎಂಬ ಉಪಾಧಿಯಿಂದ ಒಂದೇ ಹೊರತು-ಸ್ವಭಾವಸತ್ತ್ವದಿಂದ ಅಜಗಜಾಂತರದವರು.
ಹೆದ್ದಾರಿಯ ಗುಡಿಸಿಲ ಸೂಳೆಯೊಬ್ಬಳು “ನಾನೂ ಸೂಳೆ, ನಿಂಬಕ್ಕನೂ ಸೂಳೆ” ಎಂದರೆ-ಇಬ್ಬರೂ ಒಂದಾದೀತೆ ? ನಿಂಬಕ್ಕನು (ನೋಡಿ ವಚನ
353) ಕಲ್ಯಾಣದಲ್ಲಿ ಬಿಜ್ಜಳನ ಕಾಲಕ್ಕೆ ಮಹಾ ಶಿವಶರಣೆಯಾಗಿದ್ದವಳು. ಅವಳು ಸಾಂದರ್ಭಿಕವಾಗಿ ಒಬ್ಬ ಸೂಳೆಯಾಗಿದ್ದಳಾಗಬಹುದು-ಅದರೆ ಸ್ಥಾಯಿಯಲ್ಲಿ ಆಕೆ ಮಹಾ ದೈವಭಕ್ತಳು. ಇನ್ನೊಬ್ಬಳಾದರೋ ನಿತ್ಯಮಯಾಂಗನೆ. ಅವರಿಬ್ಬರೂ ವೃತ್ತಿಯಿಂದ ಒಂದೇ ಹೊರತು ಪ್ರವೃತ್ತಿಯಿಂದ ಭಿನ್ನ ಭಿನ್ನ.
ಹಾಗೆ ನಾನೂ ಉಪಾಧಿಯಿಂದ ಭಕ್ತನೆನಿಸಿದ ಮಾತ್ರಕ್ಕೇ ಶಿವಬೀಜದ ಶಿವಭಕ್ತರಿಗೆ ಸಮಾನವಾದೇನೆ? ಇಲ್ಲ! ಬೆಳ್ಳಿಗೆ ಎನ್ನುವ ತಳಿಯ ಹಸುವಿನ ಕರುವೊಂದು-ಬೆಳ್ಳಿಗೆಗೂಳಿಯ ಬೀಜಕ್ಕೆ ಹುಟ್ಟಿದ್ದಾಗಿರದೆ-ಬಳ್ಳ ಹಾಲು ಕರೆದೀತೇನು-ಎಂದು ಬಸವಣ್ಣನವರು ಪ್ರಶ್ನಿಸುತ್ತಿರುವಂತಿಗೆ. ನೋಡಿ ವಚನ860.
ಈ ಎಲ್ಲ ವಿವರಣೆಗೆ ಊಹೆ ಮತ್ತು ಯುಕ್ತಿಯೇ ಆಧಾರವೆಂಬುದನ್ನು ಗಮನಿಸಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು