ಭಕ್ತನ ಭಕ್ತಸ್ಥಲ - ನಿರಹಂಕಾರ
ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ?
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲು ಬಹುದೆ?
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ?
ಹೇಳಾ, ಕೂಡಲಸಂಗಮದೇವಾ.
Transliteration Āneyū ā dāriyalli hōyittendaḍe,
āḍū ā dāriyalli hōyittennabahude?
Saṅgana śaraṇarige ānu sariyendu gaḷahalu bahude?
Jaṅgamakke māḍuva bhaktarige ānu sariye?
Hēḷā, kūḍalasaṅgamadēvā.
Manuscript
English Translation 2 Can a hoat go
The way an elephant has gone?
Can I prate that I am a peer
Of Sanga’s Śaraṇās?
Am I a much for devotees
Who worship Jaṅgama?
Tell me, Kūḍala Saṅgama Lord!
Translated by: L M A Menezes, S M Angadi
Hindi Translation यदि कहें, हाथी उस मार्ग से गया,
तो कह सकते हैं, बकरा भी उस मार्ग से गया?
यह बकवाद कर सकते हैं
कि मैं संगनबसव के शरणों के समान हूँ?
जंगम सेवी भक्त सम हो सकता हूँ?
कहो कूडलसंगमदेव ||
Translated by: Banakara K Gowdappa
Telugu Translation కరి ఆ దారి బడిపోయెనన
మేకయూ అటుపోయె ననవచ్చునే!
శరణులతో సరిగా కలహింపవచ్చునే?
జంగముల గొల్చు భక్తులకు నేను సరియే?
తెల్పు మో కూడల సంగమదేవా!
Translated by: Dr. Badala Ramaiah
Marathi Translation
हत्ती त्या मार्गाने जातो म्हणून शेळी त्या
मार्गाने जाऊ शकेल असे म्हणता येईल?
संगनशरणांची बरोबरी मी करु शकेन?
जंगमांची सेवा करणाऱ्या भक्तांच्या समान
मी आहे सांगा कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಗಳಪಲು = ; ಜಂಗಮ = ;
ಕನ್ನಡ ವ್ಯಾಖ್ಯಾನ ಅರಣ್ಯದಲ್ಲಿ ಆನೆ ನಡೆದುದೇ ಹಾದಿ-ಬೆಟ್ಟಗುಡ್ಡಗಳನ್ನು ದಾಟಿ, ನಡುವೆ ಸಿಕ್ಕಿದ ನದಿಗಳಲ್ಲಿ ನೀರಧಿಗಳಲ್ಲಿ ನೀರಾಟವಾಡಿ ಅದು ವಿಹರಿಸುವುದನ್ನು ನೋಡುವುದೇ ಒಂದು ಅದ್ಭುತರಮ್ಯ ಅನುಭವ. ಗೊಲ್ಲನ ಕೋಲಿಗೆ ಆಡುವ ಆಡಿಗೆಲ್ಲಿ ಬಂತು ಆ ಗಮನವೈಭವ ? ಎನ್ನುತ್ತ ಬಸವಣ್ಣನವರು-ಶಿವಶರಣರು ನಡೆದ ಮಹಾಮಾರ್ಗವನ್ನು.ಅವರ ಧೀರೋದಾತ್ತ ಆಚರಣೆಗಳನ್ನೂ ಸ್ಮರಿಸಿಕೊಂಡು ಪುಲಕಿತರಾಗುತ್ತಿರುವರ.
ಮತ್ತು ತಮ್ಮನ್ನು ಆಡಿಗೆ ಹೋಲಿಸಿಕೊಂಡು ತಮ್ಮ ಪರಿಮಿತಿಗಳನ್ನು ಗುರುತಿಸಿಕೊಳ್ಳತ್ತಿರುವರು: ಆದುದರಿಂದಲೇ ಅವರು ತಾವೊಬ್ಬ ಶರಣನೆಂಬ ಮಾತನ್ನಿರಲಿ, ತಾವೊಬ್ಬ ಆದರ್ಶ ಭಕ್ತನೆಂಬ ಮಾತನ್ನೂ ಒಪ್ಪುವುದಿಲ್ಲ.
ವಿ: ಈ ವಚನದಲ್ಲಿನ ಭಕ್ತ-ಶರಣ-ಜಂಗಮಪದಗಳ ನಡುವೆಯಿರುವ ಆಧ್ಯಾತ್ಮಿಕ ಅನುಶ್ರೇಣಿಯನ್ನೂ ಗಮನಿಸಬಹುದು. ಇದು ಒಂದು ಧರ್ಮದಲ್ಲಿರುವ ಜಾತಿಗಳ ಅನುಶ್ರೇಣಿಯಲ್ಲವೆಂಬುದನ್ನು ಮರೆಯಬಾರದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು