•  
  •  
  •  
  •  
Index   ವಚನ - 331    Search  
 
ಭಕ್ತನ ಭಕ್ತಸ್ಥಲ - ನಿರಹಂಕಾರ
ಮೋಟನ ಮೌಳಿ, ಮೂಕೊರತಿಯ ಶೃಂಗಾರ, ಬೇಟ ಕುರುಡಂಗೆ ನಗೆಗೆಡೆಯಾಯಿತ್ತು! ನಮ್ಮ ಕೂಡಲಸಂಗನ ಶರಣರ ಮುಂದೆ ಆನು ಭಕ್ತನೆಂಬ ನಾಚಿಕೆ ಸಾಲದೆ?
Transliteration Mōṭana mauḷi, mūkoratiya śr̥ṅgāra, bēṭa kuruḍaṅge nagegeḍeyāyittu! Nam'ma kūḍalasaṅgana śaraṇara munde ānu bhaktanemba nācike sālade?
Manuscript
English Translation 2 The dwarf's crown, or the ornaments Of noseless woman, or Love-gestures to a man who's blind Become a laughing-stock! Is,t not enough That before the Śaraṇās Of our Lord Kūḍala Saṅga , I blush to call myself A devotee? Translated by: L M A Menezes, S M Angadi
Hindi Translation अंगहीन बौने का मुकुट, नकटी का श्रृंगार अंधे के आगे श्रृंगार चेष्टाएँ हास्यास्पद है । मम कूडलसंग के शरण-सम्मुख अपने को भक्त कहने की लाज प्रर्याप्त नहीं? Translated by: Banakara K Gowdappa
Telugu Translation మరుగుజ్జుమౌళి ముక్కిడితి సింగారము. గ్రుడ్డివాని వలపు నవ్వులపాలయ్యె! కూడల సంగని శరణుల ముందు భక్తుడన నన్ను నాకు సిగ్గగునయ్యా! Translated by: Dr. Badala Ramaiah
Marathi Translation खुळ्याचे मस्तकी, मुकूट राजाचा विषय हास्याचा, जना माजी नकटीने शृंगार, करोनी मिरवावे हास्यास्पद व्हावे, जना माजी चेष्टा प्रणयाची, अंधानी करावी हास्यास्पद व्हावी, जना माजी कूडलसंगमदेवा! शरण सन्मुख म्हणविणे देख, भक्त तैसे अर्थ - समाजात मोठा गुन्हा करून दोन्ही हात, दोन्ही पाय गमावलेला अशा एखाद्याने आपत्याला लोकांनी मोठे श्रेष्ठ म्हणावे या उद्देशाने डोक्यावर भरजरीचा मुकूट घालावा. अशांना रस्त्यात फिरतांना पाहून कोण त्यांना मोठे म्हणणार? उलट त्यांचे वागणे हास्यास्पद ठरेल. चोरी व परपुरुष संग केलेली व नाक नसलेल्या अशा स्त्रीने साज शृंगार करून भटकत टुमकत रस्त्यात फिरत असताना पाहून लोक तिला सुंदर म्हणणार तर नाहीतच उलट तिचे हे फिरणे हास्यास्पद ठरेल. दोन्ही डोळे नसलेल्यांनी पाणी आणणाऱ्या स्त्रियांच्या वाटेत थांबून आपल्या भुवया उडवीत भेसूर आवाजात गुणगुणत, मध्येच खाकरत थांबल्यास त्यांच्या प्रणयलीलेकडे कोणी आकर्षित तर होणार नाहीतच उलट ते उपहासाचे विषय बनतील. त्याच प्रमाणे तनाने व मनाने भक्ती न करता, कपाळी त्रिपुंड भस्म लावून गळयात रुद्राक्ष माळा घालून, अंगांवर इष्टलिंग इत्यादी घालून भक्ताचा वेष धारण करणाऱ्या वेषधारी, सद्भक्तीचा आव आणला तर माझा कूडलसंगमदेव (परमेश्वर ) त्यांच्यावर प्रसन्न होणार नाही. उलट त्यांचे प्रत्येक कर्म हास्यास्पद ठरेल. म्हणून दाखविण्यासाठी, मोठेपणा मिळावा या उद्देशाने भक्ती करू नये तर ती अंतरमनाने करावी. Translated by Rajendra Jirobe, Published by V B Patil, Hirabaug, Chembur, Mumbai, 1983 लुळ्याचा मुकुट, नकटीचा श्रृंगार, आंधळ्याची प्रणय लीला हास्यास्पद आहे. आमच्या कूडलसंगमदेवाच्या शरणासमोर भक्त म्हणवून घेणे माझ्यासाठी लज्जास्पद नाही का ? Translated by Shalini Sreeshaila Doddamani
ಶಬ್ದಾರ್ಥಗಳು ಮೂಕೊರತಿ = ; ಮೋಟು = ; ಮೌಳಿ = ;
ಕನ್ನಡ ವ್ಯಾಖ್ಯಾನ ಮಾಡಿದ ಅಪರಾಧಕ್ಕೆ ಶಿಕ್ಷೆಯಾಗಿ ಕೈಕತ್ತರಿಸಿದವನು ಮೋಟ, ಮೂಗು ಕತ್ತರಿಸಿದವಳು ಮೂಕೊರತಿ ಇವರಿಬ್ಬರೂ ಇದ್ದ ರೀತಿಯಲ್ಲೇ ಲಜ್ಜಾಸ್ಪದರು. ತಮ್ಮ ಇಂಥ ಪಾಪಜೀವನದ ಪರಿವೆಯಿಲ್ಲದೆ ಮೋಟನೇನಾದರೂ ಕಿರೀಟವನ್ನು ಧರಿಸಿದರೆ, ಮೂಕೊರತಿಯೇನಾದರೂ ಕಣ್ಣಿಗೆ ಕಾಡಿಗೆ ಹಚ್ಚಿ. ಕೆನ್ನೆಗೆ ತುಟಿಗೆ ಬಣ್ಣ ಹಚ್ಚಿದರೆ ಅದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುವುದು. ಭಕ್ತನೆನಿಸಿಕೊಳ್ಳಬೇಕಾದವನಿಗಾದರೂ ಉದಾತ್ತವಾದೊಂದು ನಿಲವು, ಸದ್ವಾಸನೆಯ ಮೂಗು, ಆತ್ಮಜ್ಞಾನದ ಮುಖಮಾಟವಿರಬೇಕು. ಇವಿಲ್ಲದವನು ತಲೆಯಲ್ಲಿ ರುದ್ರಾಕ್ಷಿಯನ್ನು ಹಣೆಯಲ್ಲಿ ವಿಭೂತಿಯನ್ನು ಧರಿಸಿದರೆ ಅದೂ ಅತ್ಯಂತ ಲಜ್ಜಾಸ್ಪದ ಹಾಸ್ಯಾಸ್ಪದ. ಲಿಂಗಜ್ಞಾನವೇ ಇಲ್ಲದವನಿಗೆ ರುದ್ರಾಕ್ಷಿಯೇಕೆ? ತ್ರಿವಿಧದಾಸೋಹವೇ ಇಲ್ಲದವನಿಗೆ ಭಸ್ಮ ತ್ರಿಪುಂಡ್ರ ಧಾರಣೆಯೇಕೆ ? ಕುರುಡನು ರತಿಕ್ರೀಡೆಯಾಡುವಲ್ಲಿ ಎಷ್ಟು ಅವಮಾನಿತನಾಗುವನೆಂಬುದನ್ನು ಯಾರಾದರೂ ಕಲ್ಪಿಸಿಕೊಳ್ಳಬಹುದು, ಬಸವಣ್ಣನವರನ್ನು ಇತರರು ಭಕ್ತಿ ಭಂಡಾರಿ ಎಂಬುದಿರಲಿ-ಅವರು ತಮಗೆ ತಾವೇ ಭಕ್ತನೆಂದು ಕೊಳ್ಳಲೂ ಹಿಂಜರಿಯುತ್ತಿದ್ದರು-ಶರಣರ ಮುಂದೆ ತಾನೆಷ್ಟರವನೆಂಬುದು ಅವರ ವಿನಯ. ಇದು ಬಸವಣ್ಣ ನವರ ಗುಪ್ತಭಕ್ತಿಯ ಷರಾಕಾಷ್ಮೆಯಲ್ಲದೆ ಮತ್ತೇನು ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು