ಭಕ್ತನ ಭಕ್ತಸ್ಥಲ - ನಿರಹಂಕಾರ
ಮೂಗಿಲ್ಲದ ಮುಖಕ್ಕೆ ಶೃಂಗಾರವೇ?
ವಿಕೃತವೇಷಧಾರಿಯಾನು: ಭಂಡನು! ಲಜ್ಜೆಭಂಡನು!
ಕೂಡಲಸಂಗನ ಶರಣರಲ್ಲಿ
ಹಾವ ತೋರಿ ಹವಿಯ ಬೇಡುವಂತೆ.
Transliteration Mūgillada mukhakke śr̥ṅgārave?
Vikr̥tavēṣadhāriyanu: Bhaṇḍanu! Lajjebhaṇḍanu!
Kūḍalasaṅgana śaraṇaralli
hāva tōri haviya bēḍuvante.
Manuscript
English Translation 2 What boots it for a noseless face
To be bedecked?
A worthless hypocrite am I:
A clown! A shameless clown!
Exhibiting a snake
To Kūḍala Saṅga's Śaraṇās,
To beg for milk!
Translated by: L M A Menezes, S M Angadi
Hindi Translation नकटे मुख का क्या श्रृंगार?
मैं हूँ विकृत वेषधारी, पाखंडी, निर्लज्ज!
कूडलसंग के शरणों से सांप दिखाकर
दूध माँगने की भाँति है यह॥
Translated by: Banakara K Gowdappa
Telugu Translation ముక్కు లేని ముఖమునకు సింగారమే?
వికృత వేషధారి నేను! సిగ్గులేని
మొండి పీనుగ! సంగని శరణులందు
పాము జూపి పాలు వేడినట్లే!
Translated by: Dr. Badala Ramaiah
Marathi Translation
नकटे करीती, भलता शृंगार
विकृत वेषधर, चाळेबाज
दुराचारी जाण, निर्लज्ज ते भारी
थोर दंभाचारी, मिरविती
कूडलसंगमदेवा ! शरणात राहोनी
सर्प दाखवोनी, तूप मागे
अर्थ - आचाराशिवाय भाळी त्रिपुंड भस्म लावून गळ्यात रूद्राक्ष माळ घालून, अंगावर लिंग धारण करून, भगवे कपडे घालून सद्भक्त शिवशरण असल्याचा आव आणणारे म्हणजे जसे नाकाशिवाय शृंगार करणे वा विकृत वेषभूषा करून ऐटीत चालणे यासारखे होय. असले निर्लज्ज, दंभाचारी लोक माझ्या कूडलसंगमदेवाच्या (परमेश्वराच्या ) सदभक्तात, शिवशरणांच्या सानिध्यात राहून गारुड्याप्रमाणें साप दाखवून तूप साखर खाणारे होत. स्वतःला महान सिद्ध पुरुष म्हणवून घेऊन सापाची वा हातचलाखीने भीती दाखवून पैसे मागणारे, उकळणारें व स्वतःला पालखीत मिरवून घेणारे, निर्लज्ज लोकांच्या दंभाचाराला शिवशरण कधीही भीक तर घालणार नाहीतच उलट अशांना तांदळातून खडा वेचून फेकावा तसे ते त्यांना बाहेर फेकून देतात. सावधान, दंभाचार, सिद्धी, हात चालाखी, धाक इत्यादी गोष्टी येथे खपवून घेतल्या जाणार नाहीत. महात्मा बसवेश्वर आपल्या वरील वचनात देवाच्या नावाने लोकांना फसविणाऱ्यांना इशारा देत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
नाकाविन मुखाला श्रृंगारता येईल?
विकृत वेषधारी मी, दांभिक मी, लज्जाहीन मी.
कूडलसंगमदेवाच्या शरणला सर्प दाखवून तूप मागणारा.
Translated by Shalini Sreeshaila Doddamani
ಶಬ್ದಾರ್ಥಗಳು ಭಂಡ = ; ಲಜ್ಜೆ = ; ವಿಕ್ರೃತ = ; ಹವಿ = ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಬಂದಿರುವ ಮೂಕೊರತಿಯ ಶೃಂಗಾರ ನಗೆಗೆಡೆಯಾಯಿತು-ಎಂಬ ಮಾತನ್ನೆತ್ತಿ ಕೊಂಡು ಭಕ್ತಿಯೇ ಇಲ್ಲದವನಿಗೆ ವಿಭೂತಿ ಮುಂತಾದ ಶೈವಲಾಂಛನವು ವಿಕಾರವೇ ಹೊರತು ಅಲಂಕಾರವಲ್ಲ ವೆಂಬುದನ್ನು ಮತ್ತೆ ವಿವರಿಸುತ್ತಿರುವರು ಈ ವಚನದಲ್ಲಿ.
ಅಂತರಂಗದಲ್ಲಿ ಭಕ್ತನಾಗಿರದೆ ಹೊರಗೆ ಭಕ್ತನೆಂಬಂತೆ ವೇಷವನ್ನು ಧರಿಸುವುದೇಕೆ ? ನೀಡುವವರ ಅಥವಾ ಮನ್ನಿಸುವವರ ಧರ್ಮಬುದ್ದಿಯನ್ನು ದುರುಪಯೋಗಮಾಡಿಕೊಂಡು ಹೊಟ್ಟೆಹೊರೆಯಲಿಕ್ಕಾಗಿ ! ಹಾವಾಡಿಗನು ಹಾವನ್ನು ತೋರಿಸಿ-ಹಾಲು ತುಪ್ಪ ಹಾವಿಗೆ ಬೇಕೆಂದು ಕೇಳಿ ತಾನು ತಿನ್ನುವಂತೆ-ಲಿಂಗವನ್ನು ತೋರಿ ಲಿಂಗಪೂಜೆಗೆ ಲಿಂಗನೈವೇದ್ಯಕ್ಕೆ ಬೇಕೆಂದು ಪಡಿಪದಾರ್ಥವನ್ನು ಜನರಿಂದ ಎತ್ತಿ ಒಡಲು ಹೊರೆಯುತ್ತಿದ್ದ ಭಂಡರನ್ನು ಬಸವಣ್ಣನವರು ಕಟುವಾಗಿ ಟೀಕಿಸುತ್ತಿರುವರಲ್ಲದೆ-ಆ ನಿಟ್ಟಿನಲ್ಲಿ ನಮ್ಮನ್ನು ತಾವೇ ತಲಸ್ಪರ್ಶಿಯಾದ ವಿಮರ್ಶೆಗೆ ಒಳಪಡಿಸಿಕೊಳ್ಳತ್ತಲೂ ಇರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು