•  
  •  
  •  
  •  
Index   ವಚನ - 333    Search  
 
ಭಕ್ತನ ಭಕ್ತಸ್ಥಲ - ಭಕ್ತ
ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನಯ್ಯಾ: ಆನು ಭಕ್ತನೆಂತೆಂಬೆ, ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ? ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ?
Transliteration Māvina kāyoḷagondu ekkeya kāyi nānayyā: Ānu bhaktanentembe, nim'ma śaraṇara munde nācikeyillade? Kūḍalasaṅgana śaraṇara munde nānentu bhaktanappenayyā?
Manuscript
English Translation 2 Mid mangoes I am a manure-fruit: How can I, without shame, Reckon myself a devotee Before Thy Śaraṇās? Before Kūḍala Saṅga's Śaraṇās How can I be A devotee? Translated by: L M A Menezes, S M Angadi
Hindi Translation आमों में मैं एक अर्क -फल हूँ। तव शरण-समक्ष बिना लज्जित हुए अपने को भक्त कैसे कह सकता हूँ? कूडलसंग के शरण-सम्मुख मैं कैसे भक्त बन सकता हूँ? Translated by: Banakara K Gowdappa
Telugu Translation మామిడికాయలో నొక జిల్లేడికాయ నేనయ్యా సిగ్గులేక నే నెట్లు భక్తుడందు నీ శరణుల ముందు సంగని శరణుల ముందు నే నేపాటి భక్తుడనయ్యా! Translated by: Dr. Badala Ramaiah
Marathi Translation आंब्याच्या फळात एक रुईचे फळ मी आहे देवा. मी भक्त म्हणून तुमच्या शरणांच्यासमोर निर्लज्ज होऊ ? कूडलसंगमदेवाच्या शरणांच्या समोर मी कसला भक्त ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶಿವಶರಣರ ಮಧ್ಯೆ ತಮ್ಮನ್ನು-ಮಾವಿನಕಾಯ ರಾಶಿಯ ಮಧ್ಯೆ ಬಿದ್ದಿರುವ ಒಂದು ಎಕ್ಕೆಯ ಕಾಯಿಗೆ ಹೋಲಿಸಿಕೊಂಡಿರುವರು. ಎಕ್ಕೆಯ ಕಾಯಿ ಮಾವಿನ ಕಾಯನ್ನೇ ಹೋಲುವುದು ನಿಜ. ಅದನ್ನು ಯಾರಾದರೂ ಸಾದೃಶ್ಯಮಾತ್ರದಿಂದ ಮಾವಿನಕಾಯೆಂದೇ ಎತ್ತಿ ತಿಂದರೆ ಭೇದಿ ಹತ್ತಿ ಸಾಯುವುದೂ ನಿಜ. ಹೀಗೆ ವೇಷಧಾರೀ ಭಕ್ತರಿಂದ ಸಮಾಜದ ಸ್ವಾಸ್ಥ್ಯದ ಮೇಲಾಗುವ ದುಷ್ಪರಿಣಾಮವನ್ನು ಸೂಚಿಸುತ್ತ, ಸಾಚಾ ಶಿವಭಕ್ತರಾಗಬೇಕೆಂದು ಜನರಲ್ಲಿ ವಿನಂತಿಸಿಕೊಳ್ಳುತ್ತ-ಕಡೆಯ ಪಕ್ಷ ಅವರು ಶಿವಭಕ್ತರಂತೆ ನಟಿಸುವುದನ್ನಾದರೂ ಬಿಡಬೇಕೆಂದು ಒತ್ತಾಯಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು