ಭಕ್ತನ ಭಕ್ತಸ್ಥಲ - ನಿರಹಂಕಾರ
ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ?
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ?
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ?
ಆನು ಭಕ್ತನೆಂಬ ನುಡಿ ಸುಡದೆ, ಕೂಡಲಸಂಗಮದೇವಾ?
Transliteration Marada neḷalaliddu tanna neḷalanarasabahude?
Nim'ma śaraṇara munde nānētara bhaktanayyā?
Nim'ma śaraṇara munde nānētara yuktanayyā?
Ānu bhaktanemba nuḍi suḍade, kūḍalasaṅgamadēvā?
Manuscript
English Translation 2 Could you, while standing in a tree's shade,
Seek your own shadow?
What sort of bhakta am I, O Lord,
Before Thy Śaraṇās?
What sort of righteous man, O Lord,
Before Thy Śaraṇās?
Sure, the claim, I am a bhakta'
Must scorch me, Lord
Kūḍala Saṅgama!
Translated by: L M A Menezes, S M Angadi
Hindi Translation वृक्ष-छाया में रहकर
अपनी छाया खोज सकता हूँ?
तव शरण समक्ष मैं कैसा भक्त हूँ?
तव शरण समक्ष मैं कैसा युक्त हूँ?
मैं भक्त हूँ यह कथन मुझे नहीं जलायेगी कूडलसंगमदेव?
Translated by: Banakara K Gowdappa
Telugu Translation చెట్టునీడ నిలచి తన నీడ తా చూడ సాధ్య మే?
నీ శరణుల ముందు నే నేపాటి భక్తుడనయ్యా
నీ శరణుల ముందు నే నేపాటి యోగ్యుడనయ్యా
నేను భక్తుడనుమాట కాల్ప నే? సంగమదేవా!
Translated by: Dr. Badala Ramaiah
Marathi Translation
वृक्षाच्या सावलीत राहणाऱ्यांना आपली सावली शोधता येईल?
तुमच्या शरणांच्यासमोर मी कसला भक्त देवा?
तुमच्या शरणांच्यासमोर मी कसला युक्त देवा.
मी भक्त असे म्हणणे जाळणार नाही का कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಅರಸೋತ್ತಿಗೆ; ಯುಕ್ತ = ;
ಕನ್ನಡ ವ್ಯಾಖ್ಯಾನ ವೃಕ್ಷವೊಂದು ಶಾಖೋಪಶಾಖೆಯಾಗಿ ಹರಡಿರುವುದು ಎಲ್ಲರನ್ನೂ ಒಗ್ಗೂಡಿಸುವುದಕ್ಕಾಗಿ-ಅವರನ್ನೆಲ್ಲಾ ಬಿಸಿಲ ಬೇಗೆಯಿಂದ ರಕ್ಷಿಸುವುದಕ್ಕಾಗಿ. ಒಂದು ಸಲ ಅದರಡಿಯಲ್ಲಿ ನಿಂತಮೇಲೆ-ಹಾಗೆ ನಿಂತವರೆಲ್ಲರ ನೆರಳೂ ಆ ಮರದ ನೆರಳಲ್ಲಿ ಲೀನವಾಗಿ ಏಕವಾಗುವುದು. ಆಮೇಲೆ ಪ್ರತಿಯೊಬ್ಬನೂ ತನ್ನ ಪ್ರತ್ಯೇಕತೆಯ ಭಿನ್ನಭಾವವನ್ನೇ ಪರಿಭಾವಿಸುವುದು-ಆ ಮರದ ಆಮೂಲಚೂಲ ಹಬ್ಬಿರುವ ಅಖಂಡ ಶೀತಲ ವೈಶಾಲ್ಯಕ್ಕೇ ವಿರೋಧ ವೆಸಗಿದಂತಾಗುವುದು ಎಂಬ ಈ ಹಿನ್ನೆಲೆಯಲ್ಲಿ ಬಸವಣ್ಣನವರು ಶಿವಶರಣರನ್ನು ಒಂದು ಮಹಾವೃಕ್ಷಕ್ಕೆ ಉಪಮಿಸಿ-ಅದರ ಪಾದ ಪ್ರಾಂತ್ಯದಲ್ಲಿ ಆಶ್ರಯ ಪಡೆದಿರುವ ತಮಗೆ ಆ ಶರಣರಿಗಿಂತ ವಿಶಿಷ್ಟವಾದ ಗಣನೆ ಸಲ್ಲದೆಂದು ಭಕ್ತರಿಗೆ ಮನಗಾಣಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು