•  
  •  
  •  
  •  
Index   ವಚನ - 335    Search  
 
ಭಕ್ತನ ಭಕ್ತಸ್ಥಲ - ನಿರಹಂಕಾರ
ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲಾ- ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ! ಕೂಡಲಸಂಗಮದೇವಾ, ಎನಗಿದೇ ದಿಬ್ಯ.
Transliteration Enninda kiriyarilla, śivabhaktarinda hiriyarilla- nim'ma pāda sākṣi, enna mana sākṣi! Kūḍalasaṅgamadēvā, ēnagide dibya.
Manuscript
Music Courtesy: Provided to YouTube by [Simca] Sangeeth Sagar Appanu Namma · Ambayya Nuli, Vachana Vaani ℗ 1998 Sagar Music Released on: 1998-06-23
English Translation 2 A lesser man than I No, there is none; Greater than Śiva's devotees No, there is none. Witness Thy feet, Witness my mind: This is a test for me, Lord Saṅgama! Translated by: L M A Menezes, S M Angadi
Hindi Translation मुझसे कोई छोटा नहीं, शिवभक्तों से कोई बडा नहीं । तव चरण साक्षी है, मेरा मन साक्षी है, कूडलसंगमदेव मेरे लिए यही प्रमाण है ॥ Translated by: Banakara K Gowdappa
Telugu Translation నాకన్న పిన్నలు లేరు శివభక్తులకన్న పెద్దలు లేరు నీ పాదమే నా మనసే సాక్షి కూడల సంగమదేవా నాకిదే దివ్యము. Translated by: Dr. Badala Ramaiah
Marathi Translation मजविणा नाही, अन्य कोणी लहान शरणाविण महान, नाही कोणी यासि एकमेव, साक्ष तव चरण साक्ष माझे मन, यासी एक कूडलसंगमदेवा! हेचि मज दिव्य तोचि मज सेव्य, सर्वकाळ अर्थ - माझ्यापेक्षा कोणीही लहान नाही आणि शिवशरणापेक्षा थोर असाही या जगी कोणी नाही. हे मी तुमच्या चरणांच्या ( कूडलसंगमाच्या ) साक्षीभावाने सांगतो आहे. माझ्या अंतरात्म्याच्या साक्षीने सांगतो आहे. कूडलसंगमदेवा हेच माझे दिव्य जाणावे. सर्व शिवशरणांना परमेश्वररुपी समजूनच त्यांचे दास्यत्व हेच बसवेश्वरांचे दिव्यत्व. दिव्य म्हणजे हातात तापलेला लाल लोहगोल घेऊन परमेश्वराची शपथ घेणे होय. अर्थात भयंकर जिवावरची कसोटी व कडक परीक्षा होय. Translated by Rajendra Jirobe, Published by V B Patil, Hirabaug, Chembur, Mumbai, 1983 माझ्याहून लहान कोणी नाही, शिवभक्ताहून मोठा कोणी नाही. तुमचे चरण साक्षी, माझे मन साक्षी. कूडलसंगमदेवा, माझ्यासाठी हेच प्रमाण, Translated by Shalini Sreeshaila Doddamani
Urdu Translation تمھارا پاؤں بھی اورمیرادل بھی شاہد ہے نہیں ہے مجھ سا زمانے میں کوئی کم مایہ نہیں ہےشیوکےشیدائی سےبڑا کوئی مِرےعزیزمرے دیوا کوڈلا سنگم یہی وہ بات ہےجس پہ میں فخرکرتا ہوں Translated by: Hameed Almas
ಶಬ್ದಾರ್ಥಗಳು ದಿಬ್ಯ = ; ಸಾಕ್ಷಿ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಎಲ್ಲ ಭಕ್ತರನ್ನೂ ತಮಗಿಂತ ಹಿರಿಯರೆಂದೂ, ಅವರೆಲ್ಲರಿಗಿಂತ ತಾವೇ ಕಿರಿಯರೆಂದೂ ಹೇಳಿಕೊಳ್ಳುತ್ತಿರುವುದು ಸಾರ್ವಜನಿಕರ ಮನವನ್ನು ಸೂರೆಗೊಳ್ಳಲು ಅಳವಡಿಸಿಕೊಂಡ ಒಂದು ತಂತ್ರವಲ್ಲ. ಅದು ಅವರ ಅಹಂಕಾರನಿರಸನದ ಮಂತ್ರ. ಅನುಯಾಯಿಗಳು ನಾಯಕನನ್ನು ಮಹನೀಯನೆನ್ನಬೇಕು-ನಾಯಕನು ತನ್ನ ಮಹನೀಯತೆಯನ್ನು ಮನಃಪೂರ್ವಕವಾಗಿ ಅಲ್ಲಗಳೆದುಕೊಳ್ಳಬೇಕು. ಆಗ ಧರ್ಮಸಾಮ್ರಾಜ್ಯದಲ್ಲಿ ವ್ಯಕ್ತಿವ್ಯಕ್ತಿಗಿರಬೇಕಾದ ಸಮರಸತೆ ಏರ್ಪಡುವುದು. ಆದುದರಿಂದ ಬಸವಣ್ಣನವರಾಡುವ-ಎನಗಿಂತ ಕಿರಿಯರಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಮಾತು ನೈಜವೇ ಆಗಿದೆ. ಆದುದರಿಂದಲೇ ಆ ಮಾತನ್ನು ಅವರು ಶಿವನ ಪಾದವನ್ನು ದಿವ್ಯಸಾಕ್ಷಿಮಾಡಿ ಆಡುತ್ತಿರುವರು-ಒಂದು ಪಕ್ಷ ತಾವಾಡುವ ಮಾತಿಗೆ ತಕ್ಕ ದಾಸೋಹಂಭಾವ ತಮ್ಮಲ್ಲಿಲ್ಲದಿದ್ದರೆ-ತಾವು ನಮಸ್ಕರಿಸಲೆಂದು ಮುಟ್ಟುವ ಶಿವನ ಪಾದ ಕಾದ ಕಬ್ಬಿಣವಾಗಿ ತಮ್ಮ ಕೈಯನ್ನು ಸುಡಲಿ ಎಂದು ಶಪಥ ಮಾಡುತ್ತಿರುವರು ಕೂಡ. ನೋಡಿ ವಚನ-324. ದಿಬ್ಯ<ದಿವ್ಯ. ದಿಬ್ಯವೆಂದರೆ-ಆಡಿದ ಮಾತನ್ನು ಪ್ರಮಾಣಿಸಲು ಬಳಸುತ್ತಿದ್ದ ಕಾದ ಕಬ್ಬಿಣದ ತುಂಡು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು