ಭಕ್ತನ ಭಕ್ತಸ್ಥಲ - ನಿರಹಂಕಾರ
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ,
ಕಾಟುಗ, ಕೆತ್ತುಗ, ಪೋಲುಗನೆಂಬುದು ಎನ್ನ ಹೆಸರು!
ಕೂಡಲಸಂಗಮದೇವಾ,
ನಿಮ್ಮ ಶರಣರ ಮನೆಯ ಮಗ ನಾನಯ್ಯಾ.
Transliteration Ānu bhaktanallayya, ānu vēṣadhāriyayya,
kāṭuga, kettuga, poluganembudu enna hesaru!
Kūḍalasaṅgamadēvā,
nim'ma śaraṇara maneya maga nānayya.
Manuscript
English Translation 2 I am not a bhakta, Lord:
I wear the cloak of one!
A pest, a whittler, squanderer-
That is my name!
I am Thy Śaraṇās household slave,
O Kūḍala Saṅgama Lord!
Translated by: L M A Menezes, S M Angadi
Hindi Translation स्वामी, मैं भक्त नहीं हूँ, वेषधारी हूँ,
‘हिंसक, नाशक, स्वेच्छाचारी’ मेरे नाम हैं,
कूडलसंगमदेव मैं तव शरणों के घर का किंकर हूँ ॥
Translated by: Banakara K Gowdappa
Telugu Translation భక్తుడ గానయ్యా నేను వేషధారి
వేధించు బాధించు తుంటరినయ్యా నేను
నీ శరణుల యింటి పిల్లడనయ్యా నేను.
Translated by: Dr. Badala Ramaiah
Marathi Translation
मी भक्त नाही देवा, मी वेषधारी आहे देवा.
पिडादायक, नाशक, कलंकी माझे नाव.
कूडलसंगमदेवा तुमच्या शरणांच्या घरचा पुत्र मी आहे.
Translated by Shalini Sreeshaila Doddamani
ಶಬ್ದಾರ್ಥಗಳು ಕಾಟುಗ = ; ಕೇತುಗ = ; ಪೋಲುಗ = ;
ಕನ್ನಡ ವ್ಯಾಖ್ಯಾನ ನಾನು ಬಸವಣ್ಣನೆಂಬ ಪ್ರತಿಷ್ಠೆಯೂ ನನಗೆ ಬೇಡ, ಭಕ್ತಿ ಭಂಡಾರಿಯೆಂಬ ಬಿರುದೂ ಬೇಡ-ನಾನು ಶಿವಭಕ್ತರ ಮನೆಯ ಕೇವಲ ಒಬ್ಬ ಸೇವಕನಾಗಿರುವೆನು-ನನ್ನ ಹೆಸರು ಕಾಟುಗ ಕೇತುಗ ಪೋಲುಗನೆಂದೇನಾದರೊಂದಾಗಿರಲಿ, ತಮ್ಮನ್ನು ಯಾರೂ ಗುರುತಿಸದ ಗಣಿಸದ ಪ್ರಶಂಸಿಸದ ಸೇವಕವೃತ್ತಿ ಶರಣರ ಮನೆಯಲ್ಲಿ ನನಗೆ ಶಾಶ್ವತವಾಗಿರಲಿ-ಎನ್ನುತ್ತಿರುವರು ಬಸವಣ್ಣನವರು. ಅವರು ಜೀವಮಾನವಿಡೀ ಆಚರಿಸಿದ್ದೂ ಇಂಥ ಭೃತ್ಯಮಾರ್ಗದ ಗುಪ್ತಭಕ್ತಿಯನ್ನೇ.
ಕಾಟುಗ ಕೇತುಗ ಪೋಲುಗ ಎಂಬೀ ಮುಂತಾದ ಹೆಸರುಗಳು ದಲಿತರಲ್ಲಿ ಹಿಂದುಳಿದವರಲ್ಲಿ ರೂಢಿಯಿರುವುದನ್ನು ನಾವಿಲ್ಲಿ ನೆನೆಯಬೇಕು, ಈ ಮಾತನ್ನಾಡುವಾಗ ಬಸವಣ್ಣನವರು ಶಿವಶರಣರಲ್ಲಿ ಪ್ರಿಯರಾದ ಮೇದರ ಕೇತಯ್ಯ, ಕಾಟಕೋಟ(=ವೀರಗೊಲ್ಲಾಳ)ರನ್ನು ನೆನೆಯುತ್ತಿರಬಹುದು.(ಇವತ್ತಿನ ಹೊಸ ಅರ್ಥದಲ್ಲಿ)ಹೆಸರಿಂದಲೂ ತಾವೊಬ್ಬ ಶಿಷ್ಟನೆನಿಸಿಕೊಳ್ಳುವ ಆಸಕ್ತಿಯಿರಲಿಲ್ಲ, ಪರಿಶಿಷ್ಟನೆನಿಸಿಕೊಂಡರೆ ಸಾಕೆಂಬ ದಲಿತ ಪಕ್ಷಪಾತ ಬಸವಣ್ಣನವರಿಗಿತ್ತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು