•  
  •  
  •  
  •  
Index   ವಚನ - 337    Search  
 
ಭಕ್ತನ ಭಕ್ತಸ್ಥಲ - ಭಕ್ತ
ಡಂಬು ಡಳುಹು ಎನ್ನದಯ್ಯಾ! ಡಂಭಕನೆಂಬವ ನಾನಯ್ಯಾ. ನಿಮ್ಮ ನಂಬಿದ ಶರಣರ ಡಿಂಗರಿಗ ನಾನು, ಕೂಡಲಸಂಗಮದೇವಾ.
Transliteration Ḍambū ḍaḷuhū ennadayyā! Ḍambakanembava nānayyā. Nim'ma nambida śaraṇara ḍiṅgariga nānu, kūḍalasaṅgamadēvā.
Manuscript
English Translation 2 Hollow this show of mine, O Lord; I am a hypocrite! I am a servant of Thy Śaraṇās Who trust in Thee, O Kūḍala Saṅgama Lord! Translated by: L M A Menezes, S M Angadi
Hindi Translation आडंबरी और अहंकारी हूँ पाखंडी हूँ, मुझमें क्या ढूँढते हो? तुम पर अपूर्ण विश्वास रखनेवाला दांभिक हूँ, साँप दिखाकर दूध माँगने की भाँति है मेरी भक्ति, कूडलसंगमदेव ॥ Translated by: Banakara K Gowdappa
Telugu Translation డబ్బు డంబము నాది డాంబికు డనువాడ నేను నిన్ను నమ్మిన శరణుల డిరగరి నేనయ్యా కూడల సంగమదేవా! Translated by: Dr. Badala Ramaiah
Marathi Translation ढोंगी दिखावू मी देवा, दांभिक मी देवा. तुमच्यावर विश्वास ठेवणाऱ्या शरणांवर विश्वास न ठेवणारा दांभिक मी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಡಂಬಕ = ; ಡಂಬು = ; ಡಳುಪು = ; ಡಿಂಗರಿ = ;
ಕನ್ನಡ ವ್ಯಾಖ್ಯಾನ ನನ್ನ ಅಹಂಕಾರದ ವಿಷವನ್ನು ಇಳಿಸಿಕೊಳ್ಳಲೆಂದು-ನಾನು ಜಂಗಮವಲ್ಲವೆಂದು ನಿರಾಕರಿಸಿಕೊಂಡೆ. ನಾನು ಶರಣನಲ್ಲವೆಂದು ನಿರಾಕರಿಸಿಕೊಂಡೆ-ಕೇವಲ ಭಕ್ತನೆಂದುಕೊಂಡೆ. ಆದರೂ ನನ್ನ ಅಹಂಕಾರ ತಗ್ಗಲಿಲ್ಲ. ನಾನೊಬ್ಬ ಭಕ್ತನೆಂದುಕೊಳ್ಳುವುದೂ ನನ್ನಲ್ಲಿ ಅಹಂಭಾವನೆಯನ್ನು ಉಂಟುಮಾಡುತ್ತಿದೆ. ಆದ್ದರಿಂದ ನನಗೆ ಆ ಭಕ್ತನೆಂಬ ಪಟ್ಟವೂ ಬೇಡ. ನಾನು ಶಿವಶರಣರ ಮನೆಯ ಒಬ್ಬ ಸೇವಕನಷ್ಟೇ-ಎಂದು ಬಸವಣ್ಣನವರು ಶುದ್ಧಭಕ್ತಿಯನ್ನು ಆಚರಿಸುವ ಪರಿಯನ್ನು ಕುರಿತು ಈ ವಚನದಲ್ಲಿ ಹೇಳುತ್ತಿರುವಂತಿವೆ. (ಡಂಬು<ಡಂಬ, ಡಳುಹು: ವಂಚನೆ, ಡಂಬಕನೆಂಬವ ನಾನು: ನನ್ನ ಅಂಕಿತ ನಾಮ ಬಸವನಾದರೂ-ಡಂಬಕನೆಂಬುದು ನನಗೆ ಅನ್ವರ್ಥನಾಮ. ಡಿಂಗರಿಗ : ಕೀಳಾಳು)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು