•  
  •  
  •  
  •  
Index   ವಚನ - 338    Search  
 
ಭಕ್ತನ ಭಕ್ತಸ್ಥಲ - ಶರಣಾಗತಿ
ಚೆನ್ನ-ಚೇರಮರ ಬಂಟ ನಾನಯ್ಯಾ, ಎನ್ನ ಚಾಗುಬೊಲ್ಲೆನ ಕಾವ ಗೋವನೆಂಬರು. ಕೂಡಲಸಂಗನ ಶರಣರೊಡೆಯರಾಗಿ ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು.
Transliteration Cenna-cēramara baṇṭa nānayya, enna cāgubollena kāva gōvanembaru. Kūḍalasaṅgana śaraṇaroḍeyarāgi tam'ma tottina maganendu olidante nuḍivaru.
Manuscript
English Translation 2 I am a servant, Lord, Of Cenna and of Cērama : They call me cowhard tending the dying bullock Being my masters, they- Kūḍala Saṅga's Śaraṇās Call me what name they please: Their servant's son. Translated by: L M A Menezes, S M Angadi
Hindi Translation चन्न चेरम का दास हूँ मैं, चरवाहा कहकर मेरी प्रशंसा करते हैं । कूडलसंगमेश के शरण, मेरे स्वामी चरवाह कहते हैं । अपने भृत्य का पुत्र समझ मनमाना बोलते हैं ॥ Translated by: Banakara K Gowdappa
Telugu Translation చెన్న చేరముల యింటి సేవకుడ నేను; నన్ను భళీ శువువులు మేపు గొల్ల డందురయ్యా! కూడల సంగని శరణులు నాకు దొరలై తమ తొ తు కొడుకని తలచినటు పిలుతురయ్యా. Translated by: Dr. Badala Ramaiah
Marathi Translation चेन्नचेरमन यांचा नोकर मी आहे देवा. मला त्यांच्या भाटाचा गुराखी म्हणतात. कूडलसंगाचे शरण माझे मालक होऊन आपला दासीपुत्र समजून पाहिजे तसे बोलतात. Translated by Shalini Sreeshaila Doddamani
ಶಬ್ದಾರ್ಥಗಳು ಕಾವ = ; ಚಾಗು = ; ಚೇರಮರ = ; ತೊತ್ತು = ; ಬಂಟ = ; ಬೊಲ್ಲ = ;
ಕನ್ನಡ ವ್ಯಾಖ್ಯಾನ ನನಗೆ ಒಡೆಯರು ಶಿವಶರಣರು-ನಾನು ಅವರ ಅಳು. ನನ್ನನ್ನು ಅವರು ಏನೆಂದಾದರೂ ಕರೆಯ(ಬೈಯ)ಬಹುದು-ಅವರಿಗೆ ನನ್ನ ಮೇಲೆ ಅಷ್ಟು ಹಕ್ಕಿದೆ. ಅವರು ನನ್ನನ್ನು-ನನ್ನ “ಬಸವ”ನೆಂಬ ಹೆಸರನ್ನು ಹಿಡಿದು ಗೋವ(<ಗೋಪ: ಗೂಳಿ ಅಥವಾ ದನಕಾಯುವ)ನೆಂದು ಮರ್ಮೋದ್ಘಾಟನೆಮಾಡಿ ಕರೆಯ ಬಹುದು. ಅದರಿಂದ ಅವರಿಗೆ ಸಂತೋಷವಾಗುವುದಾದರೆ-ನನಗೆ ದುಃಖವಿಲ್ಲ, ನಾನು ಆ ಶಿವಶರಣರ ಸೇವಕ. ಅಷ್ಟೇ ಅಲ್ಲ-ಅವರ ಮನೆಯ ಗುಲಾಮನ ಮಗ ನಾನು. ಮಾದಾರ ಚೆನ್ನಯ್ಯನ(ವಂಶಜರ)ಕೀಳಾಳು ನಾನು. ಅಂಥ ದಲಿತವರ್ಗದ ಶರಣರಿಗಾಗಿ-ಅವರ ಮನೆಯೊಳಗೆ ಆಳಾಗಿ ದುಡಿಯುವುದೂ, ಹೊರಗೆ ಅವರ ದನಗಳನ್ನು ಕಾಯುವುದೂ ನನ್ನ ಪವಿತ್ರ ಕರ್ತವ್ಯ. ಶಿವಶರಣರೊಂದು ಪಕ್ಷ ಚೇರಮನಂತೆ ರಾಜರಾದರೆ-ಅವರ ಸೈನ್ಯದಲ್ಲಿ ಯೋಧನಾಗಿ ಹೋರಾಡುವುದೂ ನನ್ನ ಕರ್ತವ್ಯ. ಮಾದಾರ ಚೆನ್ನಯ್ಯ: ಕರಿಕಾಲ ಜೋಳನ ಕುದುರೆಗೆ ಹುಲ್ಲು ತರುವ (ಕಂಪಣದ ಕಾಯಕದ) ಸೇವಕ, ಗುಪ್ತ ಶಿವಭಕ್ತ, ಅಂಬಲಿಯ ನೇಮದವನು. ಚೋಳನೂ ಮಹಾಶಿವಭಕ್ತನೇ ಅದರೂ ಶಿವನು ಮೊದಲು ಒಲಿದು-ಸರಳ ಜೀವನದ ಗುಪ್ತಭಕ್ತಿಯ ಚೆನ್ನಯ್ಯನಿಗೇ-ನೋಡಿ ಹರಹರನ ಮಾದಾರ ಚೆನ್ನಯ್ಯನ ರಗಳೆ. ಚೇರಮರಾಯ: ಇವನು ಕೇರಳದ ಶೈವರಾಜ, ಕುಡುಗು ಊರಲ್ಲಿ ವಾಸಿಸುತ್ತಿದ್ದ. ಮಹೋದಧಿ(ಸಾಗರ)ರಾಜನೆನ್ನುವ ಪ್ರಖ್ಯಾತಿಯೂ ಇವನಿಗಿತ್ತು. ತಿರುವಂಜಿಯೆಂಬಲ್ಲಿಯ ಕಾಳನಾಥ(ಶಿವ)ನ ಭಕ್ತ ನಿವನು. ಸೌಂದರಪಾಂಡ್ಯ ಮತ್ತು ಕಂಚಿಯ ರಾಜೇಂದ್ರಜೋಳ ಎಂಬ ಶೈವರಾಜರು ಇವನ ಗೆಳೆಯರು-ಮತ್ತು ನಂಬಿಯಣ್ಣ ಇವನ ಸಮಕಾಲೀನ ಮಹಾಶರಣ. ಈ ಚೇರಮನು ವೈರಾಗ್ಯದಿಂದ ರಾಜ್ಯ ಬಿಟ್ಟು ಹೋಗಲಿದ್ದಾಗ ಕಾಳನಾಥಶಿವನು ಇವನ ಮುಂದೆ ನಿತ್ಯವೂ (ತಾಂಡವನೃತ್ಯ)ಕುಣಿಯುವುದಾಗಿ ಆಶೆ ತೋರಿಸಿ ಅವನು ರಾಜ್ಯತ್ಯಾಗಮಾಡುವುದನ್ನು ತಪ್ಪಿಸುತ್ತಾನೆ. ಬಂಟ: 1 ಸೇವಕ 2 ಯೋಧ. ಚಾಗು-ಬೊಲ್ಲ: ಪಶು ವಿಶೇಷ. ಗೋವ(ಗೋಪ): 1 ಗೂಳಿ 2 ಗೋಪಾಲಕ, ನುಡಿ: ನಿಂದಿಸು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು