•  
  •  
  •  
  •  
Index   ವಚನ - 339    Search  
 
ಭಕ್ತನ ಭಕ್ತಸ್ಥಲ - ಅಸಹಾಯಕತೆ
ಕಾಲಲೊದೆದು ಬಡಿದು ಜಡಿವರಯ್ಯಾ ಭಕ್ತಿಯೆಯ್ದದೆಂದೆನ್ನ. ಜರೆವರಯ್ಯಾ, ನುಡಿವರಯ್ಯಾ, ಕೂಡಲಸಂಗನ ಶರಣರೊಡೆಯರಾಗಿ.
Transliteration Kālaloḍedu baḍidu jaḍivarayya bhaktiyeydadenna. Jarevarayya, nuḍivarayya, kūḍalasaṅgana śaraṇaroḍeyarāgi.
Manuscript
English Translation 2 Because I,m falling short Of bhakti, they spurn me with their feet, O Lord, thrash and belabour me; They scold me, call me names, Because they are my masters-these Kūḍala Saṅga's Śaraṇās Translated by: L M A Menezes, S M Angadi
Hindi Translation कूडलसंगमेश के शरण, मेरे स्वामी मुझमें भक्ति की कमी देख लात मारते हैं, पीटते हैं, डाँटते हैं, निंदा करते हैं ॥ Translated by: Banakara K Gowdappa
Telugu Translation కాలితో తన్ని కర్రతో బాదిరయ్యా తిట్టిరయ్య తెగడిరయ్య నన్ను భక్తి కుదరనందాక ప్రభువులై కూడల సంగని శరణులు. Translated by: Dr. Badala Ramaiah
Marathi Translation पायाने लाथाडून माझ्यावर रागावतात. कारण मी भक्ती साध्य केली नाही. कूडलसंगमदेवाचे शरण मालक होऊन तिरस्कार करती. अपशब्द बोलती देवा. Translated by Shalini Sreeshaila Doddamani
ಶಬ್ದಾರ್ಥಗಳು ಎಯ್ಧ = ; ಜಡಿ = ;
ಕನ್ನಡ ವ್ಯಾಖ್ಯಾನ ಶರಣರು ನನ್ನನ್ನು ಕಾಲಿಂದ ಒದೆಯಬಹುದು, ಕೈಯಿಂದ ಬಡಿಯಬಹುದು, ಗದರಿಸಬಹುದು, ಹೀಯಾಳಿಸಬಹುದು-ಆ ಶರಣರೇ ಅಲ್ಲವೆ ನನ್ನ ಒಡೆಯರು?! ನಾನು ಭಕ್ತಿ ಮಾಡುವುದನ್ನು ಕಲಿಯಲೆಂದು ಅವರು ನನ್ನನ್ನು ಏನಾದರೂ ಮಾಡಬಹುದು !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು