•  
  •  
  •  
  •  
Index   ವಚನ - 341    Search  
 
ಭಕ್ತನ ಭಕ್ತಸ್ಥಲ - ವಿನಮ್ರತೆ
ಅರ್ಥ ಪ್ರಾಣಾಭಿಮಾನಕ್ಕೆ ಒಡೆಯರು ಸದ್ ಭಕ್ತರಲ್ಲದೆ ಎನಗಾರೂ ಇಲ್ಲವಯ್ಯಾ. `ಭೃತ್ಯಾಪರಾಧಃ ಸ್ವಾಮಿನೋ ದಂಡಃ' ಕೂಡಲಸಂಗಮದೇವಾ, ನೀವೇ ಪ್ರಮಾಣು.
Transliteration Artha prāṇa abhimānakke oḍeyaru sad bhaktarallade ēnagārū illavayya. `Bhr̥tyāparādhaḥ svāminō daṇḍaḥ' kūḍalasaṅgamadēvā, nīvē pramāṇu.
Manuscript
English Translation 2 They are true devotees Who can be masters of Life, honour, wealth; but I Have none, O Lord! 'The master pays for his servant's fault': Thou only art A witness, O Lord, Kūḍala Saṅgama! Translated by: L M A Menezes, S M Angadi
Hindi Translation अर्थप्राणाभिमान के प्रभु, सद्भक्त हैं, मेरे और कोई नहीं है । ‘भृत्यापराधः स्वामिनो दंडः’ कूडलसंगमदेव तुम ही प्रमाण हो ॥ Translated by: Banakara K Gowdappa
Telugu Translation అర్ధ ప్రాణాభిమానముల కొడయులు సద్భక్తులే గాని ఇక నా కెవ్వరూ లేరయ్య ‘‘భృత్యాపరాధః స్వామినో దండః ‘‘కాని కూడల సంగమదేవా నీవే ప్రమాణము. Translated by: Dr. Badala Ramaiah
Marathi Translation माझा अभिमान, अर्थ आणि प्राण स्वामीयाची जाण, शरण ते शरणाविण धन, दुजा नसे कोणी आंतरीचा ध्वनी, हाचि एक कूडलसंगमदेवा! भ्रत्यांपराधः स्वामीनी दडं:, जाणसि तू अर्थ - मी मिळविलेल्या धन संपत्तीला व माझ्या प्राणाला खरे मालक शिवशरणच होत. सगे-सोयरे, पत्नी, मुले किंवा इतर कोणीही त्याचे मालक नाहीत. माझा मान-अपमान किंवा अभिमान याचे देखिल कर्तव्यस्वरूपी शिवशरणच खरे मालक आहेत. कारण ते केवळ सद्भक्तच नाहीत तर लिंग उपासक, ज्ञान जंगममूर्ती पण आहेत. ""लिंग भक्तश्च जंगम"" अशा स्वरूपाची आहेत. म्हणून ""प्रत्यां- पराघ : दंड:"" याचा अर्थ जसा राजाच्या एकनिष्ठ सेवकाकडून प्रत्याचारात किंवा स्वामीनिष्ठेत अपराध झाला व नंतर घडलेल्या अपराधाबद्दल त्याने क्षमा केली, दंडनमस्कार टाकला तर राजा त्यास पहिल्यांदा क्षमा करतो. त्याप्रमाणे मी तुझा भक्त आहे. सेवक आहे. तुझे सद्भक्त माझे स्वप्नी आहेत. असे म्हणून स्वामीनिष्ठ राहिलो नाही व हे मी अंतरमनाने मान्य केले नाही, त्यांच्या सेवेप्रित्यर्थ माझ्याजवळ असलेली धन संपत्ती मी वेचू शकलो नाही, तनाने व मनाने त्यांची सेवा करू नाही शकलो तर त्याचा उपयोग काय? उलट हे अपराध होत. Translated by Rajendra Jirobe, Published by V B Patil, Hirabaug, Chembur, Mumbai, 1983 अर्थ प्राण अभिमानाचे मालक सद्भक्ताविना मला कोणी नाही देवा. `भृत्यापराधः स्वमिनो दंडः` कूडलसंगमदेवा, तुम्हीच प्रमाण आहात. Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಪ್ರೀತಿ; ಅರ್ಥ = ಹಣ, ಪುರುಷಾರ್ಥಗಳಲ್ಲಿ ಒಂದು; ದಂಡ = ; ಪ್ರಮಾಣು = ; ಭೃತ್ಯ = ; ಸದ್ಭಕ್ತ = ;
ಕನ್ನಡ ವ್ಯಾಖ್ಯಾನ ತಮ್ಮ ಭಕ್ತಸ್ತರದಲ್ಲಿ ನಿಂತು ಬಸವಣ್ಣನವರು ಶರಣರಿಗೆ ಈ ಮುಂದಿನಂತೆ ಬಿನ್ನೈಸಿಕೊಳ್ಳುತ್ತಿರುವರು: ನನ್ನ ಅರ್ಥ ಪ್ರಾಣ ಅಭಿಮಾನ ನಿಮ್ಮದೇ-ನೀವೇ ಅವಕ್ಕೆಲ್ಲ ಒಡೆಯರು. ಶರಣರಾದ ನೀವಲ್ಲದೆ-ನನ್ನ ಹೆಂಡತಿ ಮಕ್ಕಳು ಬಂಧು ಬಳಗ ಯಾರೂ ಅವಕ್ಕೆ ಉತ್ತರಾಧಿಕಾರಿಗಳಲ್ಲ. ಹೀಗೆ ನನ್ನದೆಂಬ ಅರ್ಥವನ್ನೂ ಪ್ರಾಣವನ್ನೂ ಅಭಿಮಾನವನ್ನೂ ಅಳಿಮನಸ್ಸಿನಿಂದ ನಿಮಗಲ್ಲದನ್ಯಕ್ಕೆ ನಾನು ಅಪವ್ಯಯಮಾಡಿ ಅಪರಾಧಿಯಾದರೆ-“ಇಂಥವರ ಅಳು(ಭಕ್ತ) ಹೀಗೆ ಮಾಡಿದ, ಆ ಭಕ್ತನ ಆಗುಹೋಗಿನ ಮೇಲೆ ಅವರಿಗೆ ನಿಗವಿಲ್ಲ” ವೆಂದು ನಿಮ್ಮನ್ನೇ ತಪ್ಪಿತಸ್ಥರನ್ನಾಗಿ ತೀರ್ಮಾನಿಸಿ-ನಿಮಗೇ ದಂಡಹಾಕುವರು(ಜಂಗಮ). ಆದ್ದರಿಂದ ನನ್ನದೆಂಬುದೇನಿದೆಯೋ ಅದರ ಮೇಲೆ ನಿಮ್ಮ ಸ್ವಾಮ್ಯವನ್ನು ಒಪ್ಪಿದ್ದೇನೆ-ಅದರ ವಿತರಣೆ ಕರ್ಮಕ್ಕಾಗದೆ ಧರ್ಮಕ್ಕಾಗುವಂತೆ ನನ್ನನ್ನು ನೀವು ನಿಯಂತ್ರಿಸಿ-ಎಂದು ಬಸವಣ್ಣನವರು ಶರಣರಲ್ಲಿ ವಿನಂತಿಸುತ್ತಿರುವರು. ಶಿವಧರ್ಮಕ್ಕೆ ಸೇರಿದವರ ತನು ಮನ ಧನ ಪ್ರಾಣ ಅಭಿಮಾನಗಳ ಸದ್ವಿನಿಯೋಗಕ್ಕೆ ಶರಣರು ಜವಾಬ್ದಾರರಾಗಿರಬೇಕೆಂಬುದು ಬಸವಣ್ಣನವರ ಅಭಿಪ್ರಾಯವಾಗಿತ್ತು. (ಇಲ್ಲಿ) ಭಕ್ತರ ಕರ್ತವ್ಯಗಳನ್ನೂ.ಶರಣರ ಜವಾಬ್ದಾರಿಗಳನ್ನೂ, ಆ ಶರಣರಿಗೂ ಒಡೆಯರಾದ ಜಂಗಮದ ಪರಮಾಧಿಕಾರವನ್ನೂ ಈ ವಚನದಲ್ಲಿ ಗುರುತಿಸಬಹುದು.ಶರಣರನ್ನು ಸದ್ಭಕ್ತರೆಂದು ಇಲ್ಲಿ ಮರಳಿ ಕರೆದಿರುವುದನ್ನು ಗಮನಿಸಿರಿ. ಬಸವಣ್ಣನವರ ಪ್ರಕಾರ-ಶಿವಧರ್ಮಕ್ಕೆ ಸೇರಿದವರ ಸಮೂಹದಲ್ಲಿ ಭಕ್ತ-ಸದ್ಭಕ್ತ(ಶರಣ)-ಜಂಗಮ ಎಂಬ ಮೂರು ಶ್ರೇಣಿಗಳಿದ್ದುವು-ಅವು ಜಾತಿವ್ಯವಸ್ಥೆಯಿಂದ ದೂರವಿದ್ದವೆಂಬುದನ್ನು ಮನಗಾಣಬೇಕು. ನೋಡಿ ವಚನ 330.331

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು