•  
  •  
  •  
  •  
Index   ವಚನ - 342    Search  
 
ಭಕ್ತನ ಭಕ್ತಸ್ಥಲ - ನಂಬಿಕೆ
ಅರ್ಚಿಸಲರಿಯೆ, ಪೂಜಿಸಲರಿಯೆ! ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ! ಕಪ್ಪಡಿವೇಷದಿಂದಾನು ಬಂದಾಡವೆ, ಕಪ್ಪಡಿವೇಷದಿಂದ! ಈಶ, ನಿಮ್ಮ ದಾಸರ ದಾಸಿಯ ದಾಸ ನಾನಯ್ಯಾ, ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ, ಕೂಡಲಸಂಗಮದೇವಾ ನಿಮ್ಮ ಲಾಂಛನವ ಧರಿಸಿಪ್ಪ ಉದರಪೋಷಕ ನಾನಯ್ಯಾ.
Transliteration Arcisalariye, pūjisalariye! Nicca śivarātriya nāmāḍalariye! Kappaḍivēṣadinda bandāḍave, kappaḍivēṣadinda! Īśa, nā nim'ma dāsara dāsiya dāsanayyā, nim'ma vēṣadhāriya maneya paṅguḷa nānayyā, kūḍalasaṅgamadēvā nim'ma lān̄chanava dharisippa udarapōṣaka nānayyā.
Manuscript
English Translation 2 I am a fool at all those ritual forms; I have no skill to keep The Night of Śiva day after day! I've come to play my part With this professional garb- Just this professional garb; O Lord, I am The servant of a servant's maid; I am but the lamefoot drudge Who knows to wear his livery! O Kūḍala Saṅgama Lord, Wearing your priestly robes, I feed my belly, Lord! Translated by: L M A Menezes, S M Angadi
Hindi Translation अर्चना नहीं जानता, पूजना नहीं जानता, नित्यप्रति शिवरत्रि मनाना नहीं जानता! कपट वेष से आकर खेलता हूँ कपट वेष से! ईश, मैं तव दासों की दासी का दास हूँ, तव शरणों के घर का पंगु सेवक हूँ । कूडलसंगमदेव, तव लांछनधारी उदर पोषक हूँ ॥ Translated by: Banakara K Gowdappa
Telugu Translation అర్చించు టెట్టులో, పూజించు టెట్టులో దినదినము శివరాత్రి సేయు టెటులో దెలియ కప్పడి వేషముతో వచ్చి ఆడెదనయ్యా శివా నీ దాసుల దాసుని దాసుడ నేనయ్యా మీ వేషధారి యింటి కుంటివాడ నేనయ్యా దేవా; మీ లాంఛనము ధరియించు ఉదర పోషకుడ నేనయ్యా ! Translated by: Dr. Badala Ramaiah
Marathi Translation अर्चन - पूजन, जाणिले न मी ते नित्य शिवरात्री ते केले नाही जनापुढे नाचे, कपट वेषधारी म्हणा लिंगधारी, जनामाजी जंगम द्वारीचा, चाकरी धरली दासाचा दास झालो, श्रेष्ठ होण्या कूडलसंगमदेवा ! लिंगधारी समोर पोटपोशाकार ठरलो मी अर्थ - पूजा एकनिष्ठेने कशी करावी. अर्चना कशी व का करावी, नित्य-नित्य शिवरात्र व्रत कसे व का पाळावे, त्यामुळे मुक्त जीवन कसे जगता येईल ? ह्या गोष्टी जाणून घेण्याचा कधीही प्रयत्न केला नाही. या उलट लोकात प्रतिष्ठा मिळवावी. लोकांनी मला महान भक्त म्हणावे म्हणून शिवशरणासारखा वेष धारण करून उठता बसता शिव-शिव ! म्हणत परमेश्वरांचे गुणगान करण्यात पांडित्य दाखवित, बेभान झाल्याचा भाव आणून नाचू लागलो आहे. शिवाय मी अतिशय लहान, पामर आहे. शिवशरणांच्या घरातला सेवकांच्या दासीचा दास आहे. मला कशाला मोठेपणा, ""शिव- शिवा! ठीक आहे ! त्याची इच्छा ! तुम्हाला नाराज करणार नाही असे म्हणत लोकांकडून कसे सत्कार करवून घेता येईल यातली कला जाणून घेण्यातच आयुष्य वाया जात आहे. तुझे सच्चे शरण किंवा जंगम मंडळीत बसून स्वतःलाही शरण म्हणवून घेत, त्यांचे दासोहं स्विकारीत राहिलो आहे. अशा तऱ्हेने गळ्यात लिंग धारण करून कपाळी त्रिपुंड भस्म लावून, तुझ्या नावाने पोट भरून घेणारा, भामटा, कपटी, वेषधारी ठरलो आहे. खरे शिवशरण बनून मनोभावे पूजा अर्चना करून मुक्त जीवन कसे जगावे यातील मर्म जाणून घेतले नाही असे महात्मा बसवेश्वर वरील वचनात कळकळीने दंभाचाऱ्याना उपदेश करीत आहेत. Translated by Rajendra Jirobe, Published by V B Patil, Hirabaug, Chembur, Mumbai, 1983 अर्चना जाणत नाही, पूजा जाणत नाही. नित्य शिवरात्रीचे व्रत करणे जाणत नाही. कपट वेषात येऊन मी नाचतो देवा, मी तुमच्या दासाच्या दासीचा दास आहे देवा. तुमच्या वेषधारीच्या घरचा पांगळा नोकर मी आहे देवा. कूडलसंगमदेवा, लिंगधारण करुन पोट भरणारा मी आहे देवा. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚಿಸು = ಪೂಜಿಸು; ಈಶ = ; ಉದರ = ; ಕಪ್ಪಡಿ = ; ನಿಚ್ಚ = ; ಪಂಗುಳ = ; ಲಾಂಛನ = ;
ಕನ್ನಡ ವ್ಯಾಖ್ಯಾನ ಹರಿಹರ-ಸಿಂಗಿರಾಜರು ಕೂಡಲಸಂಗಮವನ್ನು-ಕಪ್ಪಡಿಯ ಸಂಗಮವೆಂದೂ, ಷಡಕ್ಷರಿಯು ಕೇವಲ ಕಪ್ಪಡಿಯೆಂದೂ ಕರೆದಿರುವರು (ನೋಡಿ ಸಿಂಗಿಪು. 5-94) ವೃಷಭೇಂದ್ರ ವಿಜಯ 3-63). ಬಾಗೇವಾಡಿಯಿಂದ ಈ ಕಪ್ಪಡಿಗೆ ಬಾಲಕ ಬಸವಣ್ಣನವರು ಹೋದಾಗ ಅಲ್ಲಿ ಸಂಗಮೇಶ್ವರಲಿಂಗವನ್ನು ಪೂಜಿಸುತ್ತಿದ್ದವರು (ಆ ಸಂಗಮೇಶ್ವರದೇವರ ಪಾದಮೂಲಕ್ಕೇ ತಮ್ಮನ್ನು ಅರ್ಪಿಸಿಕೊಂಡು ಆ ದೇವರ ಬಳಿದೊತ್ತಾಗಿದ್ದ) ಸ್ಥಾನಪತಿ ಈಶಾನದೇವರೆಂಬವರು. ಇವರು ಕಪ್ಪಡಿಗೆ ಬಂದ ಬಸವಣ್ಣನವರನ್ನು ಕಂಡು-ಕಾರಣಪುರುಷರೆಂದು ಮನಗಂಡು(ತಾವು ಮಾಡುತ್ತಿದ್ದ) ಸಂಗಮೇಶ್ವರಲಿಂಗದ ಪೂಜೆಯನ್ನು ಅವರಿಗೇ ವಹಿಸಿಕೊಡುತ್ತಾರೆ. ಹೀಗೆ ಕೂಡಲಸಂಗಮದಲ್ಲಿ ಕಪ್ಪಡಿ(ಅರ್ಚಕ)ಗಳಾದ ಬಸವಣ್ಣನವರು-ಈ ವಚನದಲ್ಲಿ “ಅರ್ಚಿಸಲರಿಯೆ ಪೂಜಿಸಲರಿಯೆ ನಿಚ್ಚನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ ಕಪ್ಪಡಿವೇಷದಿಂದಾನು ಬಂದಾಡುವೆ” ಎನ್ನುತ್ತ-ಕಪ್ಪಡಿಯಾಗಿರುವ ತಮಗೆ ದೇವರ ಪೂಜೆ ಮಾಡುವುದೇ ತಿಳಿಯದೆಂದು ತಮ್ಮ ಮುಗ್ಧತೆಯನ್ನು ಕುರಿತು ತಾವೇ ದೈನ್ಯವಾಡುತ್ತಿರುವಂತಿದೆ. ಆದ್ದರಿಂದ ಈ ವಚನವನ್ನು ಬಸವಣ್ಣನವರು ಕೂಡಲಸಂಗಮದಲ್ಲಿ ತಮ್ಮ ಕೌಮಾರ್ಯಕಾಲದಲ್ಲೇ ಬರೆದಿರಬೇಕು. ಕಪ್ಪಡಿ: (ನದೀ ಸಂಗಮಸ್ಥಾನದ) ಶಿವಾಲಯಗಳಲ್ಲಿ ದೇವರನ್ನು ಪೂಜೆಮಾಡಿಕೊಂಡಿರುವ ಅರ್ಚಕ(ಸಾಧುಸಂತ)ರನ್ನು ಕಪ್ಪಡಿ(=ಭಿಕ್ಷು) ಎಂದು ಕರೆಯುವ ರೂಢಿಯಿದ್ದಿತಾಗಬಹುದು. ಈ ಕಪ್ಪಡಿಗಳ ವ್ಯಕ್ತಿಗತ ವರ್ಚಸ್ಸಿನಿಂದಲೇ ಆ ಸಂಗಮಕ್ಷೇತ್ರಗಳು ಕಪ್ಪಡಿ ಸಂಗಮವೆಂದೇ ಪ್ರಸಿದ್ದಿಗೆ ಬಂದುದಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನವರು ತಮ್ಮ ಕನ್ನಡ ಬೃಹನ್ನಿಘಂಟಿನಲ್ಲಿ ಕಪ್ಪಡಿ ಎಂಬ ಪದಕ್ಕೆ ತಿರುಕ ಎಂದು ಅರ್ಥ ಬರೆದು-ಕೊಟ್ಟಿರುವ ಶಾಸನೋಲ್ಲೇಖ ಗಮನಾರ್ಹವಾಗಿದೆ-“ಸ್ವಾಮಿಯಾತ್ರೆಗೆ ಬಂದ ಕಷ್ಟಡಿಗಳ ಸತ್ರಕ್ಕೆ ಮಲ್ಲರಸ ಬಿಟ್ಟ ಕೆಯಿ” (ಸೌ.ಇ.ಇ. 4-1, 252-38, ಕ್ರಿ.ಶ.1148) ಈ “ಕಪ್ಪಡಿ” ಗೆ ತಿರುಕ ಎಂಬುದಕ್ಕಿಂತ ಸಾಧು ಸಂತ ಬೈರಾಗಿ ಭಿಕ್ಷು ಎಂದು ಅರ್ಥೈಸುವುದು ಸೂಕ್ತ. ವೇಷಧಾರಿ: ಶಿವಲಾಂಛನಧಾರಿಯಾದ ಶಿವಭಕ್ತ. ಪಂಗುಳ(<ಪಂಗುಲ) : ಪಂಗು, ಹೆಳವ, ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನು-ಎಂದರೆ : ನಾನು ಶಿವಭಕ್ತರ ಮನೆಯನ್ನು ಬಿಟ್ಟು ಅಲುಗಲಾರದವನು-ಎಂದರ್ಥ. ಕರ್ಪಟ: ಹರಕುಬಟ್ಟೆ, ಕರ್ಪಟಿನ್>ಕಪ್ಪಡಿ, ಅಥವಾ ಖರ್ಪರ : ಭಿಕ್ಷಾಪಾತ್ರೆ, ಖರ್ಪರಿನ್ >ಕಪ್ಪರಿ > ಕಪ್ಪಡಿ-ಅಂದರೆ ಸನ್ಯಾಸಿ, ಬ್ರಹ್ಮಚಾರಿ. “ನಡೆ ನೀನು ಕಪ್ಪಡಿ ಸಂಗಯ್ಯನಲ್ಲಿ ಒಡಗೂಡು” (ಅಲ್ಲಮನ ವ.ಚಂ. 1165).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು