•  
  •  
  •  
  •  
Index   ವಚನ - 343    Search  
 
ಅಪ್ಪನು ಡೋಹಾರ ಕಕ್ಕಯ್ಯನಾಗಿ, ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ? ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ ಭಕ್ತಿಯ ಸದ್ಗುಣವ ನಾನರಿವೆನಯ್ಯಾ. ಕಷ್ಟಜಾತಿಯ ಜನ್ಮದಲ್ಲಿ ಜನಿಸಿದೆ. ಎನಗಿದು ವಿಧಿಯೆ! ಕೂಡಲಸಂಗಮದೇವಾ?
Transliteration Appanu dōhara kakkayyanāgi, muttayya cennayyanādare ānu badukene? Mattā śvapacayyana sannidhiyinda bhaktiya sadguṇava nānarivenayyā. Kaṣṭajāti janmadali janiside. Enagidu vidhiye! Kūḍalasaṅgamadēvā?
Manuscript
English Translation 2 When Kakkayya the tanner my father is, And Cennayya grandfather, Am I not saved? And then, if I have understood The essence of devotion, it’s By Śvapacayya’s grace. I’ve had my birth In this obnoxious caste: O KudalaSangama Lord, Is this my lot ? Translated by: L M A Menezes, S M Angadi
Hindi Translation जब डोम कक्कय्या है मेरे पिता, मेरे पितामह चन्नय्या है मेरा निर्वाह नहीं हो सकता? मेरी रक्षा नहीं हो सकती? तब मैं जी नहीं सकता? श्वपचय्या की सन्निधि में मैं भक्ति के सद्गुण जान लेता हूँ , दुःखी घृणित – दलित पीडित जाति में मैं जन्मा, यह मेरा भाग्य है कूडलसंगमदेव? Translated by: Banakara K Gowdappa
Telugu Translation అప్ప డోహర కక్కయ్య; తాత చెన్నయ్య ఐనచో బ్రతుకలేనే నేను? మఱి ఆశ్వపచయ్య సన్నిధిచే భక్తి నిగల సద్గుణము నే తెలిసితినయ్యా కష్టజాతి జన్మలో బుట్టితి నిది విధియే నాకు! కూడల నంగమ దేవా! Translated by: Dr. Badala Ramaiah
Marathi Translation पिता डोहर कक्कय्या, आजोबा चन्नय्या झाल्याने मी जगू शकत नाही का ? श्वपचांच्या सन्निध्याने भक्तीचा सद्गुण मी जाणतो देवा. कष्टाच्या जातीत जन्माला घातले मला. हे माझे विधी लिखित आहे काय कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ವಿಧಿ = ; ಶ್ವಪಚ = ; ಸನ್ನಿಧಿ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರಿಗಿಂತ ಹಿಂದೆ ಶಂಕರದಾಸಿಮಯ್ಯ. ಕೊಂಡಗುಳಿ ಕೇಶಿರಾಜ, ಸಾಮವೇದಿ, ಮಲ್ಲರಸ ಮುಂತಾದ-ಜಾತಿಯಿಂದ ಶಿಷ್ಟ ವರ್ಗಕ್ಕೆ ಸೇರಿದ-ಹಲವರು ಶಿವಶರಣರಿದ್ದರಾದರೂ-ಅವರೆಲ್ಲರಿಗಿಂತ (ಅಥವಾ ಅವರೆಲ್ಲರನ್ನು ಬಿಟ್ಟು) ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಶ್ವಪಚಯ್ಯ ಮುಂತಾದ ದಲಿತವರ್ಗದ ಶಿವಶರಣರನ್ನು ಬಸವಣ್ಣನವರು ವಿಶೇಷ ಭಕ್ತಿಭಾವದಿಂದ- ಅವರು ತಮ್ಮ ಗೋತ್ರಪುರುಷರೆಂಬಂತೆ (ನೋಡಿ ವಚನ 747) ಶ್ರದ್ದೆಯಿಂಧ, ಬಂಧುಬಾಂಧವರೆಂಬಂತೆ ಆತ್ಮೀಯತೆಯಿಂದ ನೆನೆಯುತ್ತಿರುವುದು ಗಮನಾರ್ಹ. ಬಸವಣ್ಣನವರ ಸರ್ವಸಮಾನತೆಯ ಸರ್ವಶ್ರೇಷ್ಠತೆಯ ಸರ್ವೋದ್ದಾರದ ನವಸಮಾಜದ ಕಲ್ಪನೆಗೆ ಚೆನ್ನಯ್ಯ ಮುಂತಾದ ಪೂರ್ವಶರಣರ ಬೋಧನೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಲ್ಲದೆ ಅದು ಬಸವಣ್ಣನವರಿಗೆ ಪ್ರೇರಣೆಯನ್ನು ಕೊಟ್ಟಿರಲೂ ಸಾಧ್ಯ. ಅಂತು ಚೆನ್ನಯ್ಯ ಮುಂತಾದವರು ಬಸವಣ್ಣನವರಿಗೆ ಆದ್ಯರೂ ಆಚಾರ್ಯರೂ ಆದರು. ಆದುದರಿಂದಲೇ ಬಸವಣ್ಣನವರು ತಮ್ಮ-(ಪೂರ್ವಾಶ್ರಯದ್ದೇ ಆದರೂ)-ಜಾತಿಬ್ರಾಹ್ಮಣ್ಯವನ್ನು ಮತ್ತೆ ನಿರಾಕರಿಸಿಕೊಳ್ಳುತ್ತಿರುವರು-ಮುಂದಿನ ಹತ್ತು ವಚನಗಳಲ್ಲಿ: ಒಂದು ಆದರ್ಶಸಮಾಜದ ಪ್ರತಿಯೊಬ್ಬರೂ ಆಕಸ್ಮಿಕವಾದ ತಂತಮ್ಮ ಜಾತಿಯನ್ನು ನಿರಾಕರಿಸಿ ಕೊಳ್ಳುವುದು ಧಾರ್ಮಿಕತೆಗೆ ಪ್ರಪ್ರಥಮ ಅರ್ಹತೆಯೆಂಬುದನ್ನು ಅವರು ತೋರಿಸಿಕೊಟ್ಟಿರುವರು. ಮೇಲ್ಜಾತಿಯವರು ತಮ್ಮ ಜಾತಿನಿರಾಕರಣದಿಂದ ಉಚ್ಚಾನುಸಂಧಾನವನ್ನೂ, ಕೆಳಜಾತಿಯವರು ತಮ್ಮ ಜಾತಿನಿರಾಕರಣದಿಂದ ನೈಚ್ಯಾನುಸಂಧಾನವನ್ನೂ, ಕಳೆದುಕೊಂಡು-ಉಂಟಾದ ಮುಕ್ತಮನಸ್ಸಿನ ಅಡಿಪಾಯದ ಮೇಲೆ ಮಹಾ ಮಾನಸದ ಮಹಾಮಾನವಸಮಾಜವನ್ನು ಕಟ್ಟುವ ಆಲೋಚನೆ ಅವರದು. ಇಂಥ ಉದಾರ ತಿಳಿವಳಿಕೆ ತಾವು ಬ್ರಾಹ್ಮಣರಾಗಿ ಹುಟ್ಟಿದ್ದರಿಂದ ತಮಗೆ ಲಭ್ಯವಾಗಿದೆಯೆಂದು ಜನರಾಡಿಕೊಳ್ಳುವ ಅವಿವೇಕದ ಮೆಚ್ಚುಗೆಯ ಮಾತುಗಳನ್ನು-ಬಸವಣ್ಣನವರು ಅಲ್ಲಗಳೆಯುತ್ತಿರುವರು-“ಎಲ್ಲಿ ಹುಟ್ಟಬೇಕು ಎಲ್ಲಿ ಸಾಯಬೇಕು ಎಂಬುದು ದೈವೇಚ್ಚೆ (ನೋಡಿ ವಚನ-57) ನಾನೊಂದು ಪಕ್ಷ ದಲಿತ ಜಾತಿಯಲ್ಲೇ ಹುಟ್ಟಿದ್ದರೆ ನಾನು ಸದ್ಗುಣಶಾಲಿಯಾಗುತ್ತಿರಲಿಲ್ಲವೆ ? ಈ ಭಕ್ತಿ ನನಗೆ ಸಾಧ್ಯವಾಗುತ್ತಿರಲಿಲ್ಲವೆ ? ಆ ದಲಿತವರ್ಗದ ಕಕ್ಕಯ್ಯನಂಥವರು ಚೆನ್ನಯ್ಯನಂಥವರು ಅದು ಸಾಧ್ಯವೆಂಬುದಕ್ಕೆ ಸಾಕ್ಷ್ಯ ಒದಗಿಸಿಲ್ಲವೆ?ಸಾಮವೇದಿಯಂಥ ವೈದಿಕ ಮಹಾವಿಪ್ರನಿಗೆ ಶ್ವಪಚಯ್ಯನೆಂಬ ಚಮ್ಮಾರ ಶಿವಭಕ್ತ ಉಪದೇಶ ಮಾಡಲಿಲ್ಲವೆ? ಆದ್ದರಿಂದ ಉತ್ತಮ ಜಾತಿಯಲ್ಲಿ ಹುಟ್ಟಿದವರೇ ಉತ್ತಮವಾದುದನ್ನು ಸಾಧಿಸಬಲ್ಲರೆಂಬ ಮೂಢನಂಬಿಕೆ ನನಗಿಲ್ಲ. ಪ್ರತಿಯಾಗಿ ಇತರ ಜಾತಿಯವರನ್ನು ಕೀಳಾಗಿ ಕಾಣುವ ದ್ವಿಜನ್ಮಜಾತಿಯು ಉತ್ತಮ ಜಾತಿಯೆಂದು ನಾನು ಭಾವಿಸುವುದೂ ಇಲ್ಲ. ಅಂಥ ಜಾತಿಯಲ್ಲಿ ನಾನು ಹುಟ್ಟಿದುದಕ್ಕಾಗಿ ನನ್ನ ದುರ್ವಿಧಿಯನ್ನು ದೂಷಿಸಿ ಕೊಳ್ಳುತ್ತಿದ್ದೇನೆ. ನನ್ನ ತಂದೆಯೇ ಅಲ್ಲ, ತಾತನೂ, ನನಗೆ ಉಪದೇಶಿಸಿದ ಸದ್ಗುರುವೂ ಶ್ವಪಚರಾಗಿದ್ದಿದ್ದರೆ ನಾನು ಭಾಗ್ಯಶಾಲಿಯೆಂದೇ ಭಾವಿಸುತ್ತಿದ್ದೆ” ಎಂದಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು