•  
  •  
  •  
  •  
Index   ವಚನ - 344    Search  
 
ಭಕ್ತನ ಭಕ್ತಸ್ಥಲ - ಜಾತಿ
ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ- ಕಕ್ಕಯ್ಯನೊಕ್ಕುದನಿಕ್ಕ, ನೋಡಯ್ಯಾ; ದಾಸಯ್ಯ ಶಿವದಾನವನೆರೆಯ, ನೋಡಯ್ಯಾ; ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ; ಉನ್ನತ ಮಹಿಮಾ, ಕೂಡಲಸಂಗಮದೇವಾ, ಶಿವಧೋ! ಶಿವಧೋ!!
Transliteration Uttamakuladalli huṭṭidenemba kaṣṭatanada horeya horisadirayyā- kakkayyanokkudanikka, nōḍayya; dāsayya śivadānavanereya, nōḍayya; mannaṇeya cennayyanennuva mannisa; unnata mahima, kūḍalasaṅgamadēvā, śivadhō! Śivadhō!!
Manuscript
Music Courtesy:
English Translation 2 Make me bear the brunt,O Lord, Of being born In a superior caste: Behold ! Kakkayya will not offer me Hiscast- off food; Lo ! Dāsayya will not pour for me His butter- milk; The Reverend Cennayya will Not look at me! O KudalaSangama Lord, Exalted Glory, alack, alack for me! Translated by: L M A Menezes, S M Angadi
Hindi Translation मेरी उत्तम कुलोत्पत्ति का कष्टकर भार आरोपित मत करो देखो, कक्कय्या भुक्तावशेष नहीं देगा, दासय्या छाछ नहीं देगा, माननीय चन्नय्या मेरा सम्मान नहीं करेगा महामहिम कूडलसंगमदेव, पाहिमां पाहिमाम् ॥ Translated by: Banakara K Gowdappa
Telugu Translation ఉత్తమకులమున పుట్టితి నను కష్టతనము నా పై మోపకయ్యా కక్కయ్య తినునది నన్ను దాక నీడయ్యా దాసయ్య శివప్రసాదము నా కీయడయ్యా మన్నన చెన్నయ్య నన్ను మన్నింపడయ్యా కూడల సంగమ దేవా! Translated by: Dr. Badala Ramaiah
Marathi Translation उत्तम कुलात जन्मलो हे मोठेपणाचे ओझे लादू नको देवा. कक्कय्या शेषप्रसाद देणार नाही देवा. दासय्या ताक (शिवदान) देणार नाही देवा. चन्नय्या मला मान्यता देणार नाही. महामहिम कूडलसंगमदेवा रक्षण करा, रक्षण करा. Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಕುಲ = ; ಮನ್ನಣೆ = ; ಶಿವದಾನ = ; ಶಿವಧೋ = ; ಹೊರೆ = ;
ಕನ್ನಡ ವ್ಯಾಖ್ಯಾನ ಉತ್ತಮ ಕುಲವೆಂಬುದು ಹೊರಲಾಗದ ಹೊರೆ “ಧರ್ಮವು ಜನತೆಯನ್ನು ಸಂಘಟಿಸದರೆ (ಒಗ್ಗೂಡಿಸಿದರೆ) ಜಾತಿಯು ಜನತೆಯನ್ನು ವಿಘಟಿಸುತ್ತದೆ (ಪ್ರತ್ಯೇಕಿಸುತ್ತದೆ.)” (ಶ್ರೀ ತರಳಬಾಳು ಜಗದ್ಗುರುಗಳವರು.) ಹೀಗೆ ಧರ್ಮವು ಜನತೆಯನ್ನು ಸಂಘಟಿಸುವುದಕ್ಕೆ ಅದು ಸರ್ವರ ಸಮಾನತೆಯನ್ನು ಎತ್ತಿ ಹಿಡಿಯುವ ಉತ್ತಮ ಆದರ್ಶವನ್ನು ಹೊಂದಿರುವುದೇ ಕಾರಣ. ಅದೇ ಜಾತಿಯು ಜನತೆಯನ್ನು ವಿಘಟಿಸುವುದಕ್ಕೆ ಅದು ಹುಟ್ಟಿನ ಆಧಾರದ ಮೇಲೆ ಜನರಲ್ಲಿ ಮೇಲು-ಕೀಳು, ತರ-ತಮ ಭಾವದಿಂದ ಕೂಡಿದ ತಪ್ಪು ಕಲ್ಪನೆಯ ವಿಷಬೀಜವನ್ನು ಬಿತ್ತುವುದೇ ಕಾರಣ. ಹೀಗೆ ಹುಟ್ಟಿನಿಂದ ಅಂತೆಯೇ ಜಾತಿಯಿಂದ ಜನರಲ್ಲಿ ಬೇರೂರಿರುವ ಅಸಮಾನತೆಯನ್ನು ಕಂಡ ಬಸವಣ್ಣ ಸಹಿಸಲಾರದೇ ಹೋದ. ತುಂಬಿ ತುಳಿಕಿ ಹರಿಯುವ ಈ ಅಸಮಾನತೆಯ ಮೂಲಸೂತ್ರ ಎಲ್ಲಿದೆ ಎಂಬ ಬಗ್ಗೆ ಅವನು ವಿಚಾರಮಾಡತೊಡಗಿದ. ಆ ಮೂಲಸ್ತೋತ್ರವನ್ನು ಕಂಡುಹಿಡಿಯುವುದಕ್ಕೆ ಅವನಿಗೆ ಬಹಳ ದಿನಗಳು ಬೇಕಾಗಿಲಿಲ್ಲ. ಏಕೆಂದರೆ ಅದು ಅವನಲ್ಲಿಯೇ ಇತ್ತು. ಒಬ್ಬರ ಕೀಳ್ತನಕ್ಕೆ ಮತ್ತೊಬ್ಬರ ಮೇಲ್ತನವೆ ಕಾರಣ ಎಂಬುದನ್ನು ಬಸವಣ್ಣ ಮನಗಂಡ ಯಾರೂ ಮೇಲಲ್ಲವೆಂದಾದರೆ ಕೀಳಾರು? ಎಂದು ತನ್ನಲ್ಲಿಯೇ ಪ್ರಶ್ನಿಸಿಕೊಂಡ. ಈ ಕಾರಣದಿಂದಲೇ ಕೀಳೆಂಬುದನ್ನು ಮಾಲಿನ್ಯವೆಂದು ಭಾವಿಸಿದ. ಅಂತಹ ಮಾಲಿನ್ಯವು ತಾನು ಬ್ರಾಹ್ಮಣನಾಗಿ ಉತ್ತಮ ಕುಲದವನೆನಿಸಿ ಕೊಂಡದ್ದರಿಂದ ತನ್ನಲ್ಲಿಯೇ ಇದೆಯೆಂದು ತಿಳಿದು ಅದನ್ನು ತೊಳೆದುಕೊಳ್ಳುವ ಸಲುವಾಗಿಯೇ ಬ್ರಾಹ್ಮಣ್ಯವೆಂಬ ಜಾತಿಯ ಸಂಕೋಲೆಯಿಂದ ಹೊರಬಿದ್ದನು. ಕೀಳೆನಿಸಿಕೊಂಡಿದ್ದವರು ಕುಲೀನರ ಕಾರಣದಿಂದಾಗಿ ಮಾನವತೆಯ ಸಹಜಸ್ಥಿತಿಯಿಂದ ಕೆಳಕ್ಕೆ ತಳ್ಳಲ್ಪಟ್ಟಿದ್ದರು. ಕೀಳೆನಿಸಿಕೊಂಡಿದ್ದವರ ವೈಚಾರಿಕ ದುರ್ಬಲತೆಯ ಬಳಕೆಯ ಮೂಲಕ ಕುಲೀನರು ಮಾನವತೆಯ ಸಹಜ ಸ್ಥಿತಿಯಿಂದ ಮೇಲೇರಿದ್ದರು. ಕೀಳೆಂಬುದು ಕನಿಷ್ಠವೆಂದೂ, ಮೇಲೆಂಬುದೇ ಶ್ರೇಷ್ಠವೆಂದೂ ಈರ್ವರೂ ಭಾವಿಸಿದ್ದರು. ಆದರೆ ಕೀಳೆಂಬುದು ಮಾಲಿನ್ಯವಾದರೂ ಮೇಲೆಂಬುದೇನೂ ಶುದ್ಧವಲ್ಲ, ಮಾನವತೆಯ ಸಹಜಸ್ಥಿತಿಯಿಂದ ದೂರವಾಗಿರುವ ಅದೂ ಮಾಲಿನ್ಯವಷ್ಠೇ ಅಲ್ಲ, ಜನತೆಯನ್ನು ವಿಘಟಿಸುವುದಕ್ಕೆ ನೇತೃತ್ವವನ್ನು ವಹಿಸುವುದರಿಂದ ಅದು ಮಹಾ ಮಾಲಿನ್ಯವೆಂಬುದು ಬಸವಣ್ಣನ ವಾದ. ಉದಾಹರಣೆಗೆ ಆರೋಗ್ಯವಾದ ಶರೀರದ ಉಷ್ಣಾಂಶ 98.40 F ಉಷ್ಣವು ಅದಕ್ಕಿಂತ ಕಡಿಮೆಯಾದರೂ ಶರೀರಕ್ಕೆ ಅಪಾಯಕಾರಿ, ಜಾಸ್ತಿಯಾದರೂ ಅಪಾಯಕಾರಿ. ಅದರಂತೆಯೇ ಮಾನವತೆಯ ಸಹಜಸ್ಥಿತಿಯಿಂದ ಮೇಲೇರಿರುವ, ಕೆಳಗಿಳಿದಿರುವ ಈ ಮೇಲುಕೀಳುಗಳೆರಡೂ ಸಮಾಜ ಪುರುಷನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ಸಮಾಜದಲ್ಲಿ ಒಂದು ಶಾಂತಿ, ನೆಮ್ಮದಿ ನೆಲಸಲು ಕೀಳಾದವರಲ್ಲಿ ಮೇಲಾದವರು ತುಂಬಿರುವ ಮೂಢ ಭಾವನೆಗಳನ್ನು ತೊಡೆದುಹಾಕಿ ಅವರನ್ನು ಮಾನವತೆಯ ಸಹಜಸ್ಥಿತಿಗೆ ತರುವುದು ಎಷ್ಟು ಮುಖ್ಯವೋ ಹಾಗೆಯೇ ಮೇಲೆಂದುಕೊಡಿರುವವರ ಸಂಕುಚಿತ ಸ್ವಾರ್ಥ ಪ್ರತಿಷ್ಠೆಗಳನ್ನು ಬಿಡಿಸಿ ಅವರನ್ನು ಮಾನವತೆಯ ಸಹಜ ಸ್ಥಿತಿಗೆ ತರುವುದು ಅಷ್ಟೇ ಮುಖ್ಯ. ಈ ಒಂದು ಸಹಜಸ್ಥಿತಿಗೆ ಎಲ್ಲರನ್ನೂ ತರಲು ಅಣ್ಣ ಹೋರಾಡಿದ. ಧರ್ಮದ ತಳಹದಿಯ ಮೇಲೆ ಒಂದು ಹೊಸ ಸಮಾಜವನ್ನು ನಿರ್ಮಿಸಿ ವಿಶ್ವಶಾಂತಿಯ ಕನಸನ್ನು ಕಂಡ. ಇದರ ಪರಿಣಾಮವಾಗಿಯೇ ದೇಶಾದ್ಯಂತ ಜಾತಿ-ವಯ-ಲಿಂಗಾತೀತವಾಗಿ ಶರಣ ಶರಣೆಯರು ಕಲ್ಯಾಣಕ್ಕೆ ಬಂದು ಬಸವಣ್ಣನವರ ಬೆಂಬಲಿಗರಾಗಿ ದುಡಿದರು. ಈಜಲು ನದಿಯ ನೀರಿಗೆ ಇಳಿಯುವ ಮೊದಲು ತಮ್ಮ ತಮ್ಮ ಬಟ್ಟೆಗಳನ್ನು ತೆಗೆದಿಟ್ಟು ನಂತರ ನೀರಿನಲ್ಲಿ ಮೀಯುವಂತೆ ಆ ಶರಣ ಶರಣೆಯರೆಲ್ಲರೂ ತಮ್ಮ ತಮ್ಮ ಜಾತಿಮತ ಪಂಥಗಳ ಭೇದಗಳನ್ನು ತೊರೆದು ಮಾನವತೆಯ ಅಮರ ಗಂಗೆಯಲ್ಲಿ ಮಿಂದರು. ಇಂದಿನ ಪ್ರಜಾರಾಜ್ಯದಲ್ಲಿ ಒಬ್ಬ ಮಂತ್ರಿಯಾಗಿದ್ದು, 5 ವರ್ಷಗಳ ಕಾಲಾವಧಿಯ ನಂತರ ನಿವೃತ್ತನಾದನೆಂದರೆ ಅವನು ಆಗ ಮಂತ್ರಿಯಲ್ಲದಿದ್ದರೂ ಮಾಜಿ ಮಂತ್ರಿಯೆಂದೇ ಜನ ಗೌರವಿಸುತ್ತಾರೆ. ಅವನೂ ಕೂಡ ತಾನು ಮಂತ್ರಿಯಲ್ಲದಿದ್ದರೂ ಮಾಜಿ ಮಂತ್ರಿಯೆಂದು ಹೇಳಿಕೊಂಡೇ ಹೆಮ್ಮೆಪಟ್ಟುಕೊಳ್ಳತ್ತಾನೆ. ಇದರಂತೆಯೇ ಮೇಲೆ ವಿವರಿಸಿದಂತೆ ಬಸವಣ್ಣನವರು ತಮ್ಮ ಬ್ರಾಹ್ಮಣಕುಲವನ್ನು ಬಿಟ್ಟು ಬಂದು ಎಲ್ಲರೊಡನೆ ಒಂದಾಗಿದ್ದರೂ ಕೆಲವು ಅಜ್ಞ ಜನರು, ಅಣ್ಣನವರು ಬ್ರಾಹ್ಮಣ ಕುಲದವರಾಗಿದ್ದರೆಂಬ ಕಾರಣದಿಂದಲೇ ಅವರನ್ನು ಬೇರೆಯವರಿಗಿಂತ ಭಿನ್ನ ರೀತಿಯಲ್ಲಿ ಉತ್ತಮರೆಂದು ಕಂಡು ಗೌರವಿಸುತ್ತಿದ್ದಿರಬೇಕು. ಆದ್ದರಿಂದಲೇ ಅವರು ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ.........’ ಎನ್ನುತ್ತಾರೆ. ಅವರೇನೂ ಮಾಜಿ ಮಂತ್ರಿಯು ಮಾಡುವಂತೆ ತಮ್ಮ ಬ್ರಾಹ್ಮಣ ಕುಲವನ್ನು ಹೇಳಿ ಹಿರಿಯರೆನಿಸಿಕೊಂಡು ಹೆಮ್ಮೆಪಡಲು ಬಯಸಲಿಲ್ಲ. ಆ ಉತ್ತಮ ಕುಲವೆಂಬುದು ಅವರಿಗೆ ಒಂದು ಕೆಟ್ಟ ಭಾರವಾಗಿತ್ತು; ಹೊರಲಾಗದ ಹೊರೆ ಎನಿಸಿತ್ತು. ಆದ್ದರಿಂದಲೇ ‘ಉತ್ತಮ ಕುಲದಲ್ಲಿ ಹುಟ್ಟಿದವರು ಬಸವಣ್ಣನವರು’ ಎನ್ನುವ ಜನರನ್ನು ಕಂಡು ‘ಅಯ್ಯೋ ಅಂತಹ ಹೊರಲಾಗದ ಹೊರೆಯನ್ನು ಹೊರಿಸಬೇಡಿರಯ್ಯಾ’ ಎಂದು ಅಂಗಾಲಾಚಿ ಬೇಡಿಕೊಳ್ಳುತ್ತಿದ್ದಾರೆ. ಏಕೆ? ಎಂದರೆ ಅವರೇ ಅದರಿಂದಾಗುವ ದುಷ್ಪರಿಣಾಮವನ್ನು ಹೇಳುತ್ತಿದ್ದಾರೆ. . ‘ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ, ದಾಸಯ್ಯ ಶಿವದಾನವ ನೆರೆಯ ನೋಡಯ್ಯಾ, ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.........’ ಮಾನವ ಸಂಘಜೀವಿ, ಒಬ್ಬಂಟಿಗನಾಗಿ ಬಾಳಲಾರ. ಹೀಗಿರುವಾಗ ನಾನು ಬಸವಣ್ಣ, ಸಮಾಜದ ಜನರಿಂದ ದೂರನಾಗಿ ಬಾಳುವುದಾದರೂ ಎಂತು? ಏಕೆಂದರೆ ತಾನು ಉತ್ತಮ ಕುಲವೆನೆಂದುಕೊಂಡರೆ ಸಮಾಜದ ಪ್ರತಿನಿಧಿಗಳಾದ ಕಕ್ಕಯ್ಯ, ದಾಸಯ್ಯ, ಚೆನ್ನಯ್ಯ ಇವರು ತನ್ನ ಹತ್ತಿರ ಸುಳಿಯರು. ಕಕ್ಕಯ್ಯ ತಾನು ಮಾಡಿದ್ದನ್ನು ನನಗೆ ನೀಡುವುದಿಲ್ಲ. ದಾಸಯ್ಯನೂ ಅಷ್ಟೇ. ಅವನೂ ನನಗೆ ಮಜ್ಜಿಗೆಯನ್ನು (ಶಿವದಾನ) ಕೊಡುವುದಿಲ್ಲ, ಚೆನ್ನಯ್ಯ ನನ್ನನ್ನು ಮನ್ನಿಸುವುದೇ ಇಲ್ಲ. ಹೀಗೆ ಇವರೆಲ್ಲರಿಂದ ನಾನು ದೂರಾಗಬೇಕಾಗುತ್ತದೆ. ಕಕ್ಕಯ್ಯ, ದಾಸಯ್ಯ, ಚೆನ್ನಯ್ಯ ಇವರನ್ನು ಮೂಢ ಜನರು ಬಹಿಷ್ಕರಿಸಿದರೆ ನನ್ನನ್ನು ಬೇರಯವರಾರು ಬಹಿಷ್ಕರಿಸಲು ಬರದೆ ನನಗೆ ನಾನೇ ಬಹಿಷ್ಕಾರ ಹಾಕಿಕೊಂಡಂತಾಗುತ್ತದೆ. ಅಂದರೆ ನನ್ನದು ‘ಸ್ವಯಂ ಘೋಷಿತ ಸಾಮಾಜಿಕ ಬಹಿಷ್ಕಾರ’, ಆದ್ದರಿಂದ ಉನ್ನತ ಮಹಿಮಾ ಕೂಡಲಸಂಗಮದೇವಾ ಶಿವಧೋ, ಶೀವಧೋ ಎಂದು ತಮ್ಮನ್ನು ಕಾಪಾಡಬೇಕೆಂದು ದೇವರಲ್ಲಿ ಮೊರೆಯಿಡುತ್ತಾರೆ. “ಚೆನ್ನಯ್ಯನ ಮಗ ನಾನು..........” ಚೆನ್ನಯ್ಯ ನನ್ನ ತಂದೆ, ನಾನು ಚೆನ್ನಯ್ಯನ ಮಗ ಎಂದು ಬೇರೆಡೆ ಹೇಳುತ್ತಾ ತಮ್ಮ ಉತ್ತಮಿಕೆಗೇ ಬಹಿಷ್ಕಾರ ಹಾಕಿ ಕಕ್ಕಯ್ಯ, ದಾಸಯ್ಯ, ಚೆನ್ನಯ್ಯರಂತಹವರೊಡನೆ ಒಂದುಗೂಡಿ ಬಾಳಲು ಬಯಸುತ್ತಾರೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.