•  
  •  
  •  
  •  
Index   ವಚನ - 345    Search  
 
ಭಕ್ತನ ಭಕ್ತಸ್ಥಲ - ಜಾತಿ
ಸೆಟ್ಟಿಯೆಂದೆಂಬೆನೆ ಸಿರಿಯಾಳನ? ಮಡಿವಾಳನೆಂದೆಂಬೆನೆ ಮಾಚಯ್ಯನ? ಡೋಹಾರನೆಂದೆಂಬೆನೆ ಕಕ್ಕಯ್ಯನ? ಮಾದಾರನೆಂದೆಂಬೆನೆ ಚೆನ್ನಯ್ಯನ? ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯಾ.
Transliteration Seṭṭiyendembene siriyāḷana? Maḍivāḷanendembene mācayyana? Ḍ'̔ōharanendembene kakkayyana? Mādāranendembene cennayyana? Ānu hāruvanendare kūḍalasaṅgayya naguvanayya.
Manuscript
Music Courtesy: Singer: Raja Hanumanna Nayaka Dore, Music Director: Raja Hanumanna Nayaka Dore, Music Publisher: Aananda Audio
English Translation 2 Shall I call Siriyāḷa a man of trade, And Mācayya a washerman? Call Kakkayya a tanner, and Cennayya a cobbler? And if I call myself A priest, will not Kūḍala Saṅgama just laugh at me? Translated by: L M A Menezes, S M Angadi
Hindi Translation सिरियाळ को सेठ कहूँ? माचय्या को धोबी कहूँ? कक्कय्या को डोम कहूँ? चन्नाय्या को मातंगा कहूँ? अपने को ब्राह्मण कहूँ, तो कूडलसंगमदेव हँसेंगे॥ Translated by: Banakara K Gowdappa
Telugu Translation సెట్టి యనవచ్చునే సిరియాళుని? చాకలి యనవచ్చునే మాచయ్యను? చండాలు డనవచ్చునే కక్కయ్యను? మాదిగ యనవచ్చునే చెన్నయ్యను? నన్ను పాఱుడనగా సంగయ్య నవ్వునయ్యా. Translated by: Dr. Badala Ramaiah
Marathi Translation म्हणावे मी कैसे, शेठ श्रीयाळासि ? धोबी माचय्यासि म्हणू कैसे ? म्हणावे मी कैसे, ढोर कक्कय्यासि मांग चन्नय्यासि म्हणू कैसे ? कूडलसंगमदेवा ! मज मी ब्राम्हण म्हणविता जाण, हसशील अर्थ - लोकांच्या गरजा ओळखून त्यांना लुबाडणारा, म्हणजे शेठ असा अर्थ काढला जातो. पण श्रियाळशेठ याला अपवाद होता. लोकांच्या गरजा आपण जशा जशा भागवितो तशा तशा देव देत असतो, यावर श्रीयाळशेठचा पूर्ण विश्वास होता. प्रसंगी त्यांनी आपल्या प्रिय पुत्राला देखील जंगमलिंगाला अर्पण केले. असा तो आदर्श श्रीयाळशेठ त्याला एक लुबाडणारा शेठ कसा म्हणता येईल? कपडे धुण्याचा व्यवसाय करीत समाजातील घाण दुर्गुण, अपप्रवृती स्वच्छ करणारे शिवशरण माचय्या यांना धोबी कसे म्हणेन? कातडे कमविण्याचा व्यवसाय व शिवावर तेवढीच निष्ठा ठेवणारा व सर्व परिसर शिवमय करणारा कक्कय्या याला ढोर कसे म्हणेन ? शिवाची भक्ती आचार व सेवाभाव याद्वारे दररोज आंबिल शिवाला अर्पण करणारा ( खऱ्या अर्थाने) चन्नय्या यांना मांग कसे म्हणेन ? अशा थोर संतांना त्यांच्या जातीवरून व व्यवसायावरुन कनिष्ठ समजू कां? आणि ब्राम्हण जातीत जन्मलो म्हणून मी वरीष्ठ असे म्हणाल्यास परमेश्वर माझ्या मूर्खपणावर जोरजोरात हसल्याशिवाय राहील का ? वर्णाश्रमाचे पृथ:करण केलेली जातीव्यवस्था समूळ नष्ट करण्यासाठी महात्मा बसवेश्वरांनी व्यवसायाला अनन्यसाधारण महत्व दिले. कायक हेच कैलास म्हणजे श्रम हेच कैलास या त्याच्या तत्व आचरणामुळे चार वर्ण आपोआपच गळून पडले. आणि नकळत सामाजिक बदल घडून आला आणि मानव कोटीला शेकडो वर्षापासून लागलेला जातीवादाचा कलंक धूवून निघण्यास मदत झाली. म्हणून त्याचा कायक हेच कैलास हा उद्घोष त्रिकालाबाधीत ठरला आहे. Translated by Rajendra Jirobe, Published by V B Patil, Hirabaug, Chembur, Mumbai, 1983 व्यापारी म्हणू शकतो सिरियाळाला? धोबी म्हणू शकतो का माचय्याला? डोहर म्हणू शकतो का कक्कय्याला? मांग म्हणू शकतो का चन्नय्याला? मला ब्राह्मण म्हणाले तर कूडलसंगय्या हसतो. Translated by Shalini Sreeshaila Doddamani
Urdu Translation کیا نہ تحقیرہوگی انساں کی کیا ہنسیں گےنہ کوڈلا سنگا بات میری زباں سےجب نکلے ہےوہ سریال ایک خوردہ فروش یاوہ ماچیّا ایک دھوبی ہے اورقصّاب ہے وہ ککیّا یا ہےچنیّا ، خاندانی چمار اورمیں صرف میں برہمن ہوں Translated by: Hameed Almas
ಶಬ್ದಾರ್ಥಗಳು ಹಾರುವ = ;
ಕನ್ನಡ ವ್ಯಾಖ್ಯಾನ ಜಾತಿಯ ಅಡ್ಡ ಹೆಸರಿಂದ ಜನರನ್ನು ಹೆಸರಿಸುವುದೊಂದು ರೂಢಿ-ಅದು ಈಗಲೂ ಅಪರೂಪವಲ್ಲ ಸ್ವತಃ ಬಸವಣ್ಣನವರೇ (ಶರಣ)ಜನರನ್ನು ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಮಡಿವಾಳ ಮಾಚಯ್ಯ. ಮಹಾದೇವಶೆಟ್ಟಿ ಎಂದು ಮುಂತಾಗಿ ತಮ್ಮ ವಚನಗಳಲ್ಲಿ ಹೆಸರಿಸಿರುವುದುಂಟು. ಆದರೇನು ಆ ಜಾತಿಗಳು ಸೂಚಿಸುವ ಕೀಳು ಮೇಲನ್ನು ಆ ಜನ ಮೀರಿದ್ದರೆಂಬುದನ್ನು ಅವರು ತಿಳಿದಿದ್ದರು. ವ್ಯಕ್ತಿಗೆ ಅವನು ಹುಟ್ಟಿದ ಜಾತಿಗೆ ಅವರೆಂದಿಗೂ ಉಚ್ಚ ನೀಚ ಭಾವದ ಗಂಟುಹಾಕಲಿಲ್ಲ. ನಮ್ಮ ಜಾತಿಪದ್ದತಿಯ ಬುನಾದಿ ಜೀವನ ನಿರ್ವಹಣೆಗೆ ಅವಲಂಬಿಸಿದ ಉದ್ಯೋಗವೇ ಆಗಿರುವುದನ್ನು ವ್ಯಗ್ರತೆಯಿಂದ ಗುರುತಿಸಿದವರಲ್ಲಿ ಬಸವಣ್ಣನವರೇ ಪ್ರಮುಖರಲ್ಲವೆ? ಮುಂದೆ ಅವರ ಅನಿಸಿಕೆಯ ವಿವರವನ್ನು ನೋಡಿ: ಶಿವಾರ್ಪಣವೀರನಾದ ಸಿರಿಯಾಳನನ್ನು ಒಬ್ಬ ಶೆಟ್ಟಿಯೆಂದು ಕಾಯಕವೀರನಾದ ಮಾಚಯ್ಯನನ್ನು ಒಬ್ಬ ಮಡಿವಾಳನೆಂದು, ಮಹಾಪ್ರಸಾದಿಯಾದ ಕಕ್ಕಯ್ಯನನ್ನು ಒಬ್ಬ ಡೋಹಾರನೆಂದು. ಗುಪ್ತ ಭಕ್ತಿ ಪವಿತ್ರನಾದ ಚೆನ್ನಯ್ಯನನ್ನು ಒಬ್ಬ ಮಾದಾರನೆಂದು ಕರೆದು-ಏನೂ ಅಲ್ಲದ ನನ್ನನ್ನು ಹಾರುವನೆಂದು ಬೀಗಿ ಕರೆದುಕೊಂಡರೆ ದೇವರು ನಗುವುದಿಲ್ಲವೆ ? ಸಿರಿಯಾಳನು ಸಾವನ್ನು ಸಮರ್ಪಿಸಿ ಅಮೃತತ್ವವನ್ನು ಪಡೆದ ಅವನು ಮಾಡಿದ್ದು ಒಳ್ಳೇ ವ್ಯಾಪಾರವೇ, ಮಾಚಯ್ಯನು ಭಕ್ತಜನರ ಮನದ ಮಲಿನವನ್ನು ತೊಳೆದು ಅವರನ್ನು ಮಡಿಮಾಡಿದ-ಅವನದು ಒಳ್ಳೇ ಮಡಿವಾಳಿಕೆಯೇ, ಕಕ್ಕಯ್ಯನು ಮತ್ತು ಚೆನ್ನಯ್ಯನು-ಭಕ್ತರ ಪಾದಗಳು ನೋಯದಿರಲೆಂದು ಪಾದರಕ್ಷೆಯನ್ನು ಮಾಡಿದರು-ಅವರದು ಒಳ್ಳೇ ಚಮ್ಮಾರಿಕೆಯೆ ಆಯಿತು. ನಾನು ಅವರೆಲ್ಲರಿಗಿಂತ ಉತ್ತಮನಾಗಲು- ಆ ಏನನ್ನೂ ಮಾಡಲಿಲ್ಲವಲ್ಲ!? ನಾನು ಹಾರುವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಉತ್ತಮನಾದೆನಂದರೆ ಹಾಸ್ಯಾಸ್ಪದ. ವೇದ ಓದುವರ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೇ ಯಾವನಾದರೊಬ್ಬನು ಉತ್ತಮನೆನಿಸುವುದು ಹಾಸ್ಯಾಸ್ಪದವಲ್ಲದೆ ಮತ್ತೇನು ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು