•  
  •  
  •  
  •  
Index   ವಚನ - 346    Search  
 
ಭಕ್ತನ ಭಕ್ತಸ್ಥಲ - ಜಾತಿ
ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು- ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.
Transliteration Cennayyana maneya dāsiya maga kakkayyana maneya dāsiya magaḷu- ivaribbaru holadali beraṇige hōgi saṅgava māḍidaru; ivaribbarige huṭṭida maga nānu, kūḍalasaṅgamadēva sākṣiyāgi.
Manuscript
English Translation 2 The son of the servant-maid in Cennayya's house, The daughter of the maid in Kakkayya's house- Those two went out to gather dung And fell together: I the son Born of those two-so witness me Lord Kūḍala Saṅgama! Translated by: L M A Menezes, S M Angadi
Hindi Translation चन्नय्या के घर का दास-पुत्र, कक्कय्या के घर की दासी-पुत्री, दोनों खेत में मिल उपले के लिए जाकर साम्मिलित हुए । समागम किया मैं इन दोनों से उत्पन्न पुत्र हूँ, कूडलसंगमदेव साक्षी है॥ Translated by: Banakara K Gowdappa
Telugu Translation చెన్నయ్య యింటి దాసీపుత్రుడు కక్కయ్య యింటి దాదికూతురు ఈ యిరువురూ పిడకలేర చేనికిపోయి చేరిపోవ నా యిద్దరికి పుట్టిన బిడ్డ నేను కూడల సంగమదేవుడే దీనికి సాక్షి. Translated by: Dr. Badala Ramaiah
Marathi Translation मांग चन्नय्यांचा, सेवकांच्या पुत्र राही अहोरात्र, बापासंगे ढोर कक्कय्यांच्या, कन्या ती दासीची सदा संत्संगाची, भागीदार वनी गेले दोघे, गोवऱ्यांच्या भिसे रंगले तेथ कैसे, देव जाणे तेथ त्यांचा संग, सहजेची घडले तया पोटी झाले, जन्म माझे कूडलसंगमदेवा ! वाहे तुझी आण तेथे साक्षी प्रमाण, तुजि एक अर्थ - महाप्रसादी शिवशरण मातंग चन्नय्यांच्या घरी काम करणाऱ्या सेवकाला एक मुलगा होता. सदाशिवमूर्ती शिवशरण ढोर कक्कय्यांच्या घरी काम करणाऱ्या मोलकरणीची एक मुलगी होती. त्या दोघांचे आई-वडिल महान शिवशरणांच्या घरी कामाला असल्यामुळे तेथे दररोज चालणाऱ्या शिवानुभवाच्या गोष्टी शास्त्रार्थ, तत्वज्ञानावरील चर्चा आपआपल्या आईवडिलांकडून रोज त्यांच्या कानावर पडत. ते दोघे आपआपल्या घरी येवून आपल्या मुला मुलींना सांगत. एकदा ते दोघे लाकूडफाटा व गोवऱ्या आणण्यासाठी रानात गेले असता त्या सेवकांच्या मुलामुलीमध्ये शिवानुवावर चर्चा झाली. त्यांच्या चर्चेतून शेवटीं जे निष्पन्न झाले त्यातून एक नवविचार व तत्वज्ञान उदयास आले असेल एवढेच काय ते माझे तत्वज्ञान आहे. असे महात्मा बसवेश्वर मानतात. परंतु लोक मला महान तत्वज्ञानी म्हणतात ते योग्य नाही. महान उदात्त तत्वज्ञान बाहेर येत आहे ते महाशिवशरण ढोर कक्कय्या, चांभार हरळय्या, मातंग चन्नय्या महार शिवनागमय्या सारख्या वडिलधाऱ्या विचारवंताचे आहेत. त्यांच्यातील मी एक पामर आहे. हे मी परमेश्वराला साक्ष ठेऊन सांगत आहे. असे महात्मा बसवेश्वर वरील वचनात उदाहरणासह स्पष्ट करू इच्छितात. Translated by Rajendra Jirobe, Published by V B Patil, Hirabaug, Chembur, Mumbai, 1983 चन्नय्याच्या घरच्या दासाचा पुत्र, कक्कय्याच्या घरची दासीपुत्री, दोघे गोवऱ्या वेचण्यास शेतात जाऊन संग केला. त्या दोघांच्या पोटी जन्म घेतलेला पुत्र मी. कूडलसंगमदेवाच्या साक्षीने. Translated by Shalini Sreeshaila Doddamani
ಶಬ್ದಾರ್ಥಗಳು ದಾಸ = ; ದಾಸಿ = ; ಬೆರಣಿ = ; ಸಂಗ = ; ಸಾಕ್ಷಿ = ;
ಕನ್ನಡ ವ್ಯಾಖ್ಯಾನ ಹುಟ್ಟಿನಿಂದ ಕೀಳು ಎಂಬುದಿಲ್ಲ ಸಮಾಜದ ನೆಮ್ಮದಿಗೆ ಭಂಗವುಂಟುಮಾಡುವುದೆಂಬ ಕಾರಣದಿಂದಲೇ ಬಸವಣ್ಣನವರು ಉತ್ತಮ ಕುಲವೆನಿಸಿದ್ದ ತಮ್ಮ ಬ್ರಾಹ್ಮಣ ಜಾತಿಯನ್ನು ಸಂಪೂರ್ಣವಾಗಿ ತ್ಯಜಿಸಿ ಬಂದಿದ್ದರೂ ಕೆಲವರು ಮಾತ್ರ ಅವರು ಉಚ್ಚ ಕುಲದಲ್ಲಿ ಹುಟ್ಟಿದವರೆಂಬ ಭಾವನೆಯನ್ನು ಇರಿಸಿಕೊಂಡೇ ಅವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ನೋಡಿದೆವು. ಜಾತಿರಹಿತ ಸಮಾಜದ ನಿರ್ಮಾಣದಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ಹೀಗೆ ಜಾತಿಯ ಕಾರಣದಿಂದಲೇ ದೊರೆಯುವ ಗೌರವ ಆದರಗಳು ಅವರ ಭಾವನೆಯನ್ನೇ ಕೆಣಕಿ ಭಾವೋದ್ರೇಕಕ್ಕೆ ಎಡೆಮಾಡುತ್ತವೆ. ಅಂತಹ ಬಾವೋದ್ರೇಕದಲ್ಲಿ ನುಡಿದುದೇ ಪ್ರಸ್ತುತ ವಚನ. ತಮ್ಮನ್ನು ಉತ್ತಮ ಕುಲದವರೆಂದು ಜನ ತಿಳಿಯುವುದು ತಾವು ಮೊದಲು ಬ್ರಾಹ್ಮಣರಾಗಿದ್ದರೆಂಬ ಕಾರಣದಿಂದಲೇ ಅಲ್ಲವೇ ಎಂದು ‘ನಾನು ಬ್ರಾಹ್ಮಣನೇ ಅಲ್ಲ, ನಾನು ಬ್ರಾಹ್ಮಣ ವಂಶದಲ್ಲಿ ಹುಟ್ಟಿಯೇ ಇಲ್ಲ’ ಎನ್ನುತ್ತಾರೆ. ತಮ್ಮ ಹುಟ್ಟಿದ ಬಗೆಯನ್ನು ಅತ್ಯಂತ ನಿಮ್ನ ರೀತಿಯಲ್ಲಿ ಕಲ್ಪಿಸಿ ಹೇಳುತ್ತಾರೆ. ‘ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ....’ ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಅಂತೆಯೇ ಕಕ್ಕಯ್ಯ ಡೋಹಾರ. ಹೀಗಿರುವಾಗ ಅವರೀರ್ವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ದಾಸಿಯರು ಲೋಕದ ದೃಷ್ಟಿಯಲ್ಲಿಅದೆಷ್ಟು ನಿಮ್ನ ವರ್ಗದವರಾಗಿರಬೇಕು! ಚೆನ್ನಯ್ಯನ ಮನೆಯಲ್ಲಿರುವ ಆ ದಾಸಿಯ ಮಗನಿಗೂ ಕಕ್ಕಯ್ಯನ ಮನೆಯ ಆ ದಾಸಿ ಮಗಳಿಗೂ ನಾನು ಬಸವಣ್ಣ, ಹುಟ್ಟಿದೆನೆಂದಮೇಲೆ ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಮಾತಾದರೂ ಎಲ್ಲಿ ಅವರಾದರೂ ಮದುವೆಯಾದ ದಂಪತಿಗಳೇ? ಅದೂ ಇಲ್ಲ. ಹೊಲದಲ್ಲಿ ಇಬ್ಬರೂ ಬೆರಣಿಯನ್ನಾರಿಸಲು ಹೋಗಿದ್ದರು. ಆಗ ಪರಸ್ಪರ ಆಕರ್ಷಿತರಾಗಿ ಕೂಡಿಕೊಂಡರು. ಆ ಕಾರಣದಿಂದ ನಾನು ಹುಟ್ಟಿದೆ ಎಂದು ಬಸವಣ್ಣನವರು ಎಷ್ಟು ಸಾಧ್ಯವೋ ಅಷ್ಟು ನಿಕೃಷ್ಟವಾಗಿ ತಮ್ಮ ಜನ್ಮವನ್ನು ಕಲ್ಪಿಸಿ ಹೇಳಿದ್ದಾರೆ. ಹೀಗೆ ಮದುವೆಯಾಗದವರಿಗೆ ಹುಟ್ಟಿದ ನನ್ನನ್ನೇ ಉತ್ತಮನೆಂದು ಕರೆದು ಗೌರವಿಸುವುದಾದರೆ ನಿಜವಾದ ತಂದೆ-ತಾಯಿಗಳಿಗೆ ಹುಟ್ಟಿದ ದಾಸಯ್ಯ, ಕಕ್ಕಯ್ಯಗಳು ಅದೆಂತು ಕೀಳಾಗಬಲ್ಲರು? ಎಂಬುದೇ ಇಲ್ಲಿಯ ಇಂಗಿತಾರ್ಥ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.