•  
  •  
  •  
  •  
Index   ವಚನ - 348    Search  
 
ಭಕ್ತನ ಭಕ್ತಸ್ಥಲ - ಜಾತಿ
ಹರನು ಮೂಲಿಗನಾಗಿ, ಪುರಾತರೊಳಗಾಗಿ, ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ. ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ! ಮಾದಾರನ ಮಗ ನಾನಯ್ಯಾ, ಪನ್ನಗಭೂಷಣ ಕೂಡಲಸಂಗಯ್ಯಾ, ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ!!
Transliteration Haranu mūliganāgi, purātaroḷagāgi, baḷi baḷiyalu banda mādārana maga nānayyā. Kaḷeda holeyanem'mayya, jātisūtaka! Mādārana maga nānayya, pannagabhūṣaṇa kūḍalasaṅgayya, cennayyanenna muttayyanajjanappanayyā!!
Manuscript
English Translation 2 I am Mādāra's son- Him, who derives his pedigree Down from the ancient saints and claime Hara as founder of his stock. My father it was who washed my dirt- This taint of caste! I am, good Sir, Mādāra's son. O Kūḍala Saṅgama, Thou serpent-collared Lord, My grandsire's grandsire's sire Is Cennayya. Translated by: L M A Menezes, S M Angadi
Hindi Translation हरमूल पुरातनों की वंश परंपरा में आगत मातंग का पुत्र हूँ मैं मेरे मातंग पिताने जाति-सूतक मिटाया। मातंग का पुत्र हूँ मैं । पन्नगभूषण कूडलसंगमदेव , चन्नय्या मेरे पितामह के दादा के पिता हैं ॥ Translated by: Banakara K Gowdappa
Telugu Translation ఉనడు అను హర ;జ మై పురాతను లాదిగా ప్రాకి బొదిగొన్న మాదారుని సుతుడ నేనయ్యా పన్నగభూషణ కూడల సంగమ దేవ! చెన్నయ్య మా ముత్తాతకు తాత గదయ్యా! Translated by: Dr. Badala Ramaiah
Marathi Translation हर ज्यांचा आदि पुरुष आहे, पुरातन परिवार आहे. त्या घरात जन्मलेल्या मांगाचा पुत्र मी आहे. माझ्या पित्याने जातीचे सुतक नष्ट केले आहे. मादाराचा पुत्र मी आहे सर्पभूषण कूडलसंगमदेवा, चन्नय्या माझ्या आजोबांचे आजोबां आहेत. Translated by Shalini Sreeshaila Doddamani
ಶಬ್ದಾರ್ಥಗಳು ಪನ್ನಗ = ; ಪುರಾತರು = ; ಮೂಲಿಗ = ; ಸೂತಕ = ; ಹರ = ; ಹೊಲೆಯ = ;
ಕನ್ನಡ ವ್ಯಾಖ್ಯಾನ ಮೂಲಪುರುಷನಾದ ಶಿವನಿಂದ ಹಿಡಿದು ಪುರಾತನರ ವರೆಗೆ-ಎಲ್ಲ ಶರಣರಿಗೆ ತಲೆತಲಾಂತರದಿಂದ ಗುಲಾಮರಾಗಿ ಬಂದ ಮಾದಿಗರ ಮಗು ನಾನು. ನಮ್ಮ ತಂದೆ ದೂರದ ಹೊಲದಲ್ಲಿ ಕೆಲಸಮಾಡಿಕೊಂಡಿದ್ದ ಒಬ್ಬ ಜೀತದಾಳು.ಎಲ್ಲರೂ ಕಿವಿಗೊಟ್ಟು ಕೇಳಿ-ಮುಟ್ಟಿದರೂ ನೆರಳು ಬಿದ್ದರೂ ಜನ ಮೈಲಿಗೆಯಾಗುವ ರೆಂಬಷ್ಟು ಕೀಳುಕುಲದ ಮಾದಿಗನ ಮಗ ನಾನು.ಆ ನಮ್ಮ ತಂದೆಯ ಮುತ್ತಾತನ ತಾತನ ಅಪ್ಪನೇ ಮಾದಾರ ಚೆನ್ನಯ್ಯನು. ಅವನ ಹೆಸರನ್ನು ನೀವು ಕೇಳೀರಬೇಕಲ್ಲವೆ ? ಎಂಬಂತಿರುವ ಬಸವಣ್ಣನವರ ಈ ವಚನರೂಪದ ಈ ಪರಿಚಯಪತ್ರವು ಅವರ ಧಾರ್ಮಿಕ ಪ್ರವರವನ್ನೆಲ್ಲ ಒಳಗೊಂಡಿರುವುದು. ದಲಿತರ ಬಗ್ಗೆ ಬಸವಣ್ಣನವರಿಗಿದ್ದ ಮಮತೆ ಬಹಳ ದೊಡ್ಡದು.ಬಳಿ(<ಬಳಿ): 1 ಹಾದಿ 2 ವಂಶ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು