•  
  •  
  •  
  •  
Index   ವಚನ - 349    Search  
 
ಭಕ್ತನ ಭಕ್ತಸ್ಥಲ - ಜಾತಿ
ಅಪ್ಪನು ನಮ್ಮ ಮಾದಾರ ಚೆನ್ನಯ್ಯಾ: ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯಾ; ಚಿಕ್ಕಯ್ಯನೆಮ್ಮಯ್ಯ ಕಾಣಯ್ಯಾ; ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯಾ: ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ?
Transliteration Appanu nam'ma mādāra cennayya: Boppanu nam'ma ḍ'̔ōhāra kakkayya; cikkayyanem'mayya kāṇayya; aṇṇanu nam'ma kinnara bom'mayya: Ennanētakkariyiri, kūḍalasaṅgayya?
Manuscript
Music Courtesy: Provided to YouTube by [Simca] Sangeeth Sagar, Appanu Namma · Ambayya Nuli Vachana Vaani ℗ 1998 Sagar Music Released on: 1998-06-23
English Translation 2 Cennayya, the cobbler, is my sire; Kakkayya: the tanner, my uncle is; Cikkayya is my grandsire,lo! My elder brother is Bommayya the lutanist. Then,why, Kūḍala Saṅgama, do you not Take cognisance of me? Translated by: L M A Menezes, S M Angadi
Hindi Translation मेरे पिता हैं मातंग चन्नय्या, चाचा डोम कक्कय्या, देखो मेरे दादा हैं चिक्कय्या, अग्रज किन्नरि बोम्मय्या, मुझे क्यों नहीं जानते कूडलसंगमदेव? Translated by: Banakara K Gowdappa
Telugu Translation మాదార చెన్నయ్య మాయయ్య డోహర కక్కయ్య మా తాత చిక్కయ్య మాకు పిన్నయ్య కిన్నర బొమ్మయ్య మా యన్న గుర్తింపవేటికో నను కూడల సంగమ దేవా! Translated by: Dr. Badala Ramaiah
Marathi Translation मम पिता थोर, मातंग चन्नय्या पितामह वीर, डोहार कक्कय्या, चिक्कय्याशी जाणा, आपुलाचि अय्या धन्य मम बंधू, किन्नरी बोम्मय्या जाणसि न का मज, कूडलसंगय्या अर्थ - शुद्र जातीत जन्मलेले मातंग चन्नय्या माझे वडिल, ढोर कक्कय्या माझे आजोबा, एकतारी वाजविणारे किन्नरी बोम्मय्या माझे बंधू. अशा तऱ्हेने सर्व जाती धर्मातील वडिलधाऱ्या मंडळीचे नाते असता मी कोण ? मी ब्राह्मण! अशी पृच्छा न करता माझ्या विचारावरून मी कोण? हे आपणच ठरवा. महात्मा बसवेश्वरांनी सर्व जाती धर्माचे लोकांशी आपले जवळचे नाते जोडून त्यांच्या प्रति आदर भाव व्यक्त केला आहे. आणि त्याच प्रमाणे आचरणात आणून सिद्ध केले आहे. Translated by Rajendra Jirobe, Published by V B Patil, Hirabaug, Chembur, Mumbai, 1983 पिता माझे मादार चन्नय्या आहेत. तात माझे डोहर कक्कय्या आहेत. पणजोबा माझे चिक्कय्या आहेत. बंधू माझा किन्नरी बोम्मय्या आहेत. मला तुम्ही कसे जाणत नाही कूडलसंगमदेवा ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾರಿಗಾದರೂ ಹಿರಿಯರಿಗೆ ತನ್ನನ್ನು ತಾನೇ ಪರಿಚಯಿಸಿಕೊಡುವಾಗ ಅನುಸರಿಸುವ ಸರಣಿ ಈ ವಚನದಲ್ಲಿದೆ : ಶಿವನು ತಮ್ಮನ್ನು ಗುರುತಿಸಿ ಸೇವೆಯನ್ನು ಕೈಗೊಳ್ಳದಿರುವುದನ್ನು ತಾಳಲಾರದೆ-ಬಸವಣ್ಣನವರು ಈ ವಚನವನ್ನು ಹಾಡಿರುವರು. ನಮ್ಮ ತಂದೆ ಮಾದಾರ ಚೆನ್ನಯ್ಯ ನಿಮಗೆ ಗೊತ್ತಲ್ಲವೇ? ನಮ್ಮ ಚಿಕ್ಕಪ್ಪ ಡೋಹಾರ ಕಕ್ಕಯ್ಯ, ನಮ್ಮ ತಾತ ಚಿಕ್ಕಯ್ಯ-ಕಿನ್ನರಿ ಬೊಮ್ಮಯ್ಯನಿದಾನಲ್ಲಾ ಅವನೇ ನಮ್ಮ ಅಣ್ಣ-ಈಗ ನಾನು ಯಾರೆಂದು ಗೊತ್ತಾಯಿತೇ ಒಡೆಯ? ನಾನು ನಿಮ್ಮ ಶರಣರ ಪರಂಪರೆಯವನೇ ಆಗಿರುವೆ-ಎನ್ನುತ್ತ ಬಸವಣ್ಣನವರು ಶಿವಧರ್ಮಕ್ಕೆ ಸೇರಿದ ಮೇಲೆ ತಮ್ಮ ಪೂರ್ವಾಶ್ರಯದ ಸಾಂಖ್ಯಾಯನಗೋತ್ರ (ಸಿಂಗಿಪು. 5-12) ವನ್ನೂ, ತಂದೆ ಮಂಡಗೆಯ ಮಾದಿರಾಜನನ್ನೂ, ಅಣ್ಣ ದೇವರಾಜ (ಅರ್ಜುನವಾಡದ ಶಾಸನದ ಪ್ರಕಾರ) ನನ್ನೂ ನೆನೆಯದೆ-ಶಿವಧರ್ಮದಲ್ಲಿ ಆದ್ಯರೂ ಆದ್ಯತನರೂ ಆದ ಶರಣರನ್ನೇ ತಮ್ಮ ಬಂಧುಬಳಗವೆಂದು ನೆನೆಯುತ್ತಿರುವುದನ್ನಿಲ್ಲಿ ಗಮನಿಸಬೇಕು. ಚಿಕ್ಕಯ್ಯ: ಚವರದ ಚಿಕ್ಕಯ್ಯ ಬೊಕ್ಕಸದ ಚಿಕ್ಕಯ್ಯ ಮುಂತಾದ ಚಿಕ್ಕಯ್ಯದಿರು ಹಲವರಿದ್ದರೂ-ಬಸವಣ್ಣನವರನ್ನು ಬಂದಿವಿಡಿಯಲು ಬದನೇಕಾಯಿಲಿಂಗವನ್ನು ಕಟ್ಟಿ ವೇಷಧಾರಿಯಾಗಿ ಬಂದು ಬಸವಣ್ಣನವರ ದೃಷ್ಟಿಪರುಷದಿಂದ ನಿಜಲಿಂಗಶಿವಭಕ್ತನೇ ಆಗಿ ಪರಿವರ್ತಿತನಾದ “ನಿಜಲಿಂಗ ಚಿಕ್ಕಯ್ಯ” ನೇ ಈ ಚಿಕ್ಕಯ್ಯನಿರಬೇಕು(ನೋಡಿ ಸಿಂಗಿಪು. 10-23) ಈ ಚಿಕ್ಕಯ್ಯನು ಪರಿವಾರ(ದ) ನಾಯಕಜಾತಿಯವನೆಂದು ತಿಳಿದು ಬರುವುದು (ಭೈ.ಕಾ.ಸೂ. ರತ್ನಾಕರ ಸಂ.2. ಪುಟ 277). ಕಿನ್ನರಿ ಬೊಮ್ಮಯ್ಯನಾದರೋ ಕಿನ್ನರಿ ಎಂಬ ವೀಣೆಯನ್ನು ಮಾಡುತ್ತಿದ್ದವನು-ಜಾತಿ ಗೊತ್ತಿಲ್ಲ. ಈ ವಚನದಲ್ಲಿ ಬಸವಣ್ಣನವರು ಸಾಮಾಜಿಕವಾಗಿ ಕೀಳೆನಿಸಿದ ಹಲವು ದಲಿತಜಾತಿಯವರನ್ನು ತಮ್ಮವರೆಂದು ಗೌರವದಿಂದ ಭಾವಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು