•  
  •  
  •  
  •  
Index   ವಚನ - 350    Search  
 
ಭಕ್ತನ ಭಕ್ತಸ್ಥಲ - ಭಕ್ತಿ
ಭಕ್ತಿಯಿಲ್ಲದ ಬಡವ ನಾನಯ್ಯ: ಕಕ್ಕಯ್ಯನ ಮನೆಯಲು ಬೇಡಿದೆ; ಚೆನ್ನಯ್ಯನ ಮನೆಯಲು ಬೇಡಿದೆ; ದಾಸಯ್ಯನ ಮನೆಯಲೂ ಬೇಡಿದೆ. ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
Transliteration Bhaktiyillada baḍava nānayya: Kakkayyana manege bēḍide; cennayyana manegaḷu bēḍide; dāsayyana maneyallū bēḍide. Ellā purātaru neredu bhaktibhikṣavanikkidare enna pātre tumbittu, kūḍalasaṅgamadēvā.
Manuscript
Music Courtesy: Provided to YouTube by [Simca] Sangeeth Sagar Singer: Ambayya Nuli, Vachana Chandana ℗ 2000 Sagar Music Released on: 2000-12-21
English Translation 2 I am a poor wretch undevout, O Lord: I've begged at Kakkayya's house; I've begged at Cennayya's house; I've begged at Dāsayya 's too. O Kūḍala Saṅgama Lord, because The saints together all have given me devotion As alms, My bowl is full! Translated by: L M A Menezes, S M Angadi
Hindi Translation भक्तिहीन दीन हूँ मैं स्वामी, कक्कय्या के घर में माँगा, चन्नय्या के घर में माँगा, दासय्या के घर में भी माँगा, सभी पुरातन मिलकर भक्ति-भिक्षा देने पर मेरा पात्र भरा कूडलसंगमदेव॥ Translated by: Banakara K Gowdappa
Telugu Translation భక్తి లేని బడుగు నేనయ్యా కక్కయ్య యింట వేడితి చెన్నయ్య యింట వేడితి దాసయ్య యింట యాచించితి పురాతనులెల్లా చేరి భక్తి భిక్ష పెట్టిన నా పాత్ర నిండును కూడల సంగమ దేవా! Translated by: Dr. Badala Ramaiah
Marathi Translation भक्तिरहित ऐसा, पामर मी एक शरणाघरी भीक, मागितली मागितली भीक, कक्कय्यांच्या द्वारी चन्नय्यांच्या घरी, मागितली दासय्यांच्या दारी, भिक्षा मागितली भिक्षांदेहि गेली, हाक ऐसी एकत्र ते आले, ऐकूनी माझी हाक वाढियली भीक, आनंदाने कूडलसंगमदेवा ! भरले माझे पात्र भक्ति ती पवित्र, तथा कृपे अर्थ - ढोर कक्कय्या, मातंग चन्नय्या, विणकर दासय्या यासारख्या वडिलधारी शिवशरणांच्या घरी मी भक्तीची भीक मागितली. हे सर्व शिवशरण कायक निष्ठ, सदाचारी होते. त्यांची परमात्म्यावर अनन्य भक्ती होती. त्यांच्यापुढे मी एक भक्तिहीन गरीब पामर होतो. माझी हाक ऐकून सर्व एकत्र आले आणि त्यांनी मला भक्ती भिक्षा घातली. त्यामुळे माझे भिक्षापात्र भरून तुडूंब झाले आहे. महात्मा बसवेश्वरांना सर्व जातीतील शिवशरणांची स्वच्छेने भक्ती भिक्षारूपी सहकार्य लाभले आहे. ते कबूल करतात. म्हणून त्या सर्वाचे ऋण व्यक्त केले आहे. Translated by Rajendra Jirobe, Published by V B Patil, Hirabaug, Chembur, Mumbai, 1983 भक्तीविना गरीब मी आहे. कक्कय्याच्या घरी मागितले. चन्नय्याच्या घरी मागितले. दासय्याच्या घरी मागितले. सर्व पुरातनांनी एकत्र येऊन भक्ती भिक्षा वाढली असता माझे भिक्षापात्र भरले कूडलसंगमदेवा. Translated by Shalini Sreeshaila Doddamani
Urdu Translation میں توبھگتی کا بھکاری ہوں فقط درِککیّا کی زنجیرہلائی میں نے درِچنیّا پہ رہ رہ کےصدائیں دی ہیں اورداسیّا کے گھرپربھی بہت دیررُکا اس طرح ہوگئی پوری میری بھگتی کی مُراد کوڈلا سنگما دیوا مرے خالق پربھُو Translated by: Hameed Almas
ಶಬ್ದಾರ್ಥಗಳು ಪುರಾತರು = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಭಕ್ತಿಪಂಥದಲ್ಲಿ ಪಾದಾರ್ಪಣಮಾಡಿ ಪ್ರಗತಿ ಸಾಧಿಸಲು ಪ್ರಭಾವ ಬೀರಿದವರನ್ನೂ, ಕಾರಣಕರ್ತರಾದವರನ್ನೂ ಮಾರ್ಗದರ್ಶನ ಮಾಡಿದವರನ್ನೂ ಈ ವಚನದಲ್ಲಿ ಸ್ಮರಿಸುತ್ತಿರುವರು. ಭಿಕ್ಷು(ಕ) ಒಬ್ಬನು ಯಾರ ಯಾರ ಮನೆಯ ಮುಂದೆ ನಿಂತು ಬೇಡಿ ತನ್ನ ಭಿಕ್ಷಾಪಾತ್ರೆಯನ್ನು ತುಂಬಿಸಿಕೊಂಡನೆಂಬ ಧಾಟಿಯಲ್ಲಿ ಈ ವಚನವಿನ್ಯಾಸವಿದೆ. ಮೊದಲಿಗೆ ಭಕ್ತಿಭಂಡಾರಿಯಲ್ಲ-ಭಕ್ತಿಯ ಬಡವರಾಗಿದ್ದಾಗ ಬಸವಣ್ಣನವರು ಕಕ್ಕಯ್ಯನ, ದಾಸಯ್ಯನ, ಚೆನ್ನಯ್ಯನ ಮನೆತನದವರಲ್ಲಿ ಬೇಡಿದರು ಅವರು ತಮ್ಮನ್ನು ಭಕ್ತನೆಂದು ಮನ್ನಿಸಲೊಡನೆ-ಮಿಕ್ಕೆಲ್ಲ ಶರಣರೂ ಸಮ್ಮತಿಸಿ ಸಲಹಿದರೆಂದು ಬಸವಣ್ಣನವರು ತಮ್ಮ ಬಾಲ್ಯದ ಹಳೆಯ ಕಥೆಯನ್ನು ನೆನೆಯುತ್ತಿರುವರು. ಒಬ್ಬ ಶಿಷ್ಟಜಾತಿಯವನು ಭಕ್ತನಾಗಬೇಕಾದರೆ-ಅವನು ಮೊದಲು ದಲಿತವರ್ಗದ ಶರಣರ ಕೈಯಿಂದ ಸೈಯೆನಿಸಿಕೊಳ್ಳಬೇಕೆಂದು ಬಸವಣ್ಣನವರು ಅಭಿಪ್ರಾಯಪಡುತ್ತಿರುವರಾಗಬಹುದು ಈ ವಚನದ ಮೂಲಕ. ದ್ವಿಜರಲ್ಲಿ ಉಪನಯನವಾದ ಮೇಲೆ, ಮೊದಲು ತಾಯಿಂದ ಹಿಡಿದು ಮಿಕ್ಕ ಬಂಧುವರ್ಗದಲ್ಲಿ ಭಿಕ್ಷೆ ಬೇಡಿ ಪಡೆಯುವ ಪದ್ಧತಿಯಿರುವುದನ್ನಿಲ್ಲಿ ನೆನೆಯಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು