ಹಿರಿಯಯ್ಯ ಶ್ವಪಚಯ್ಯ, ಕಿರಿಯಯ್ಯ ಡೋಹಾರ ಕಕ್ಕಯ್ಯ.
ಅಯ್ಯಗಳಯ್ಯನು ನಮ್ಮ ಮಾದಾರ ಚೆನ್ನಯ್ಯನು
ಕೂಡಲಸಂಗಮದೇವಾ,
ನಿಮ್ಮ ಶರಣರೊಲಿದೆನ್ನ ಸಲಹುವರಾಗಿ.
Transliteration Hiriyayya śvapacayya, kiriyayya ḍ'̔ōhāra kakkayya.
Ayyagaḷayyanu nam'ma mādāra cennayyanu
kūḍalasaṅgamadēvā,
nim'ma śaraṇarallidenna salahuvarāgi.
Manuscript
English Translation 2 Śvapacayya's elder brother of my sire;
Kakkayya the tanner my younger uncle;
Cennayya, the cobbler, my father's sire.
O Kūḍala Saṅgama Lord,
Thy Śaraṇās have fostered me
Out of the fullness of their hearts.
Translated by: L M A Menezes, S M Angadi
Hindi Translation मेरे चाचा हैं श्वपचय्या,
काका डोम कक्कय्या,
पितामह मेरे मातंग चन्नय्या;
कूडलसंगमदेव, तव शरण
मेरी रक्षा करते हैं ॥
Translated by: Banakara K Gowdappa
Telugu Translation శ్వపచయ్య పెద్దప్ప
డోహర కక్కయ్య పిన్నప్ప
అయ్యలకయ్య మాదార చెన్నయ్య
కూడల సంగమదేవా నీ యీ శరణులు
వలచి నను పెంచిరయ్యా!
Translated by: Dr. Badala Ramaiah
Marathi Translation
श्वपच माझे वडिलधारे आहेत देवा.
धाकटे काका डोहर कक्कय्या आहेत.
माझे पिताचे पिता मादार चन्नय्या आहेत.
कूडलसंगमदेवा, आपले शरण
मला आपलेसे करुन संभाळतात.
Translated by Shalini Sreeshaila Doddamani
ಶಬ್ದಾರ್ಥಗಳು ಶ್ವಪಚ = ; ಸಲಹು = ;
ಕನ್ನಡ ವ್ಯಾಖ್ಯಾನ ವೈದಿಕ ಧರ್ಮವು ಕೀಳೆಂದು ಬಹಿಷ್ಕರಿಸಿದ್ದ ಹಿರಿಯಯ್ಯ ಶ್ವಪಚಯ್ಯ ಮುಂತಾದ ಈ ಜನ ಬಸವಣ್ಣನವರಿಗೆ ಅದೆಷ್ಟು ಪ್ರಿಯಬಂಧುಗಳಾದರು ಪೂಜ್ಯರಾದರು ಎಂಬುದನ್ನು ನೆನೆದರೆ-ಸಾವಿರಾರು ವರ್ಷಗಳಿಂದ ಮರಗಟ್ಟಿದ ಭಾರತಭೂಮಿ ಬಸವಣ್ಣನವರ ಪಾದಸ್ಪರ್ಶದಿಂದ ರೋಮಾಂಚನಗೊಂಡಂತೆನಿಸುವುದು.
ಬಸವಣ್ಣನವರ ಚಳುವಳಿಯನ್ನು ಬೆಂಬಲಿಸಿದವರೇ ದಲಿತವರ್ಗದ ಶರಣರೆಂಬುದಾಗಿ-ಈ ವಚನದಿಂದ ಊಹಿಸಬಹುದು-ನೋಡಿ : “(ಹಿರಿಯಯ್ಯ ಮುಂತಾದ) ಶರಣರೆನ್ನ ಸಲಹುವರಾಗಿ” ಎಂಬ ನುಡಿಗಟ್ಟನ್ನು! ಯಾರು ಸಂರಕ್ಷಿಸುವರೋ ಅವರೇ ಬಂಧುಗಳು-ರಕ್ತಸಂಬಂಧಿಗಳಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು