•  
  •  
  •  
  •  
Index   ವಚನ - 352    Search  
 
ಭಕ್ತನ ಭಕ್ತಸ್ಥಲ - ವಂಶಾವಳಿ
ಎಮ್ಮ ತಾಯಿ ನಿಂಬೆವ್ವ ನೀರನೆರೆದುಂಬಳು, ಎಮ್ಮಯ್ಯ ಚೆನ್ನಯ್ಯ: ರಾಯಕಂಪಣವ ಹೊರುವ- ಎಮಗಾರೂ ಇಲ್ಲವೆಂದೆಂಬಿರಿ- ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು; ಎಮ್ಮಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ, ಕಾಣಾ ಕೂಡಲಸಂಗಮದೇವಾ.
Transliteration Em'ma tāyi nimbevva nīraneredumbaḷu, em'm'mayya cennayya: Rāyakampaṇava horuva- emagārū illavendembiri- em'makka kan̄ciyalli bāṇasava māḍuvaḷu; em'majjaru haḍeda bhaktiya nim'ma kaiyalu kombe, kāṇā kūḍalasaṅgamadēvā.
Manuscript
English Translation 2 Nimbavve's my mother: she lives By fetching water, Cennayya, is my father: He fetches fodder for the royal stable. You say I have no kin: Why, my sister cooks at Kañci! O Kūḍala Saṅgama Lord, Lo, I received out of your hands The piety my ancestors Have harvested. Translated by: L M A Menezes, S M Angadi
Hindi Translation मेरी माँ निंबव्वे पानी ढोकर जीती है, मेरे पिता चन्नय्या राजदंडधारी है। कहते हो, हमारा कोई नहीं है, मेरी बहन कंची में पाचिका है; कहते हो, हमारा कोई नहीं है; मैं अपने परदादाओं की संचित भक्ति तव हस्त से पाता हूँ, कूडलसंगमदेव ॥ Translated by: Banakara K Gowdappa
Telugu Translation నీరు నింపెడి యవ్వ మా యవ్వ నింబవ్వ నృపుని లాడమున పనివాడు మా అయ్య చెన్నయ్య ఎవ్వరూ లేరంటిరే నాకు కంచిలో వంటకత్తె మా యక్క మా తాతలు పొందు భక్తిని యీ చేతుల గొందు కదరా! సంగమ దేవా! Translated by: Dr. Badala Ramaiah
Marathi Translation माझी आई निंबव्वा पाणी भरते. माझे पिता चन्नय्या, राजाची सेवा करतात. आमचे कोणीही नाही म्हणतात. माझी मोठी बहिण कांचीत जेवण बनविते. आमचे कोणीही नाही म्हणतात. माझ्या आजोबा पणजोबांच्या भक्तीचे फळ तुमच्याकडून घेईन कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಎರೆ = ; ಬಾಣಸ = ; ರಾಯಕಂಪಣ = ; ಹಡೆದ = ;
ಕನ್ನಡ ವ್ಯಾಖ್ಯಾನ ತನ್ನ ಹಿರಿಯರು ಒಂದು ಕಾಲಕ್ಕೆ ಸೇವೆಮಾಡಿಕೊಂಡಿದ್ದ ಧಣಿಯ ಮನೆಗೆ ಒಬ್ಬ ಬರುತ್ತಾನೆ. ಅಮ್ಮ ಎಂದು ಕೂಗುತ್ತಾನೆ. ಆಗ ಒಡೆಯ ಬಂದು-ಇಲ್ಲಿ ನಿನ್ನವರು ಯಾರೂ ಇಲ್ಲ ಎನ್ನುತ್ತಾನೆ. ಆಗಂತುಕನು-ಸ್ವಾಮಿ, ನಿಮ್ಮ ಮನೆಯಲ್ಲಿ ಹಿಂದೆ ನಮ್ಮ ತಾಯಿ ನೀರು ತುಂಬುತ್ತಿದ್ದಳು-ಅವಳ ಹೆಸರು ಇಂಥದು, ಆಮೇಲೆ ನಮ್ಮ ತಂದೆ ನಿಮ್ಮ ದನಕರುಗಳಿಗೆ ಹುಲ್ಲು ಕೊಯ್ದು ತರುತ್ತಿದ್ದ-ಅವನ ಹೆಸರು ಇಂಥದು, ಮೊನ್ನೆಮೊನ್ನೆಯವರೆಗೆ ನಮ್ಮ ಅಕ್ಕ ನಿಮ್ಮ ಮನೆಯಲ್ಲೇ ಅಡಿಗೆಮಾಡಿಕೊಂಡಿದ್ದಳು-ಅವಳ ಹೆಸರು ಇಂಥದು ಎಂದಾಗ ಆ ಧಣಿಗೆ ಎಲ್ಲವೂ ನೆನಪಾಗುವುದು-ಆಗಂತುಕನನ್ನು ಪ್ರೀತಿಯಿಂದ ಕರೆದು ಕುಳ್ಳಿರಿಸಿ ಊಟಕ್ಕಿಟ್ಟಾಗ ನಮ್ಮ ತಾಯಿ ತಂದೆ ಅಕ್ಕಂದಿರು ಮಾಡಿದ ಸೇವೆಗೆ ಪ್ರತಿಫಲವಾಗಿ ನಾನೀಗ ಉಣ್ಣುತ್ತಿದ್ದೇನೆ ಎಂದು ಅಲ್ಲಿ ಉಣ್ಣಲು ಒದಗಿದ ಋಣಾನುಬಂಧವನ್ನು ವಿನಯದಿಂದಲೇ ವ್ಯಕ್ತಪಡಿಸುವನು. ಇಂಥದೊಂದು ಕಥಾನಕವನ್ನು ಹೋಲುವುದು ಈ ವಚನದ ಧಾಟಿ. ದಾಸೋಹಗೃಹವೊಂದರಲ್ಲಿ ನೀರೆರೆಯುವ ದಾಸಿಯಾಗಿದ್ದ ನಿಂಬವ್ವೆಯನ್ನೂ, ಚೋಳರಾಜನ ಅರಮನೆಯ ಕುದುರೆಗಳಿಗೆ ಕಂಪಣದ ಹುಲ್ಲನ್ನು ಕೊಯ್ದು ಬಂಡಿಯಲ್ಲಿ ಹೇರಿ ತರುತ್ತಿದ್ದ ಮಾದಾರ ಚೆನ್ನಯ್ಯನನ್ನೂ, ಮಗನನ್ನು ಪಾಕಮಾಡಿಟ್ಟ ಕಂಚಿಯಪುರದ ಚೆಂಗಳೆಯನ್ನೂ ಬಸವಣ್ಣನವರು ತಮ್ಮ ತಾಯಿ ತಂದೆ ಅಕ್ಕಂದಿರೆಂದು ಶಿವನಿಗೆ ಸ್ಮರಿಸಿಕೊಟ್ಟು ಶಿವನಲ್ಲಿ ಅರಿಕೆ ಮಾಡಿಕೊಳ್ಳುತ್ತಿರುವರು. ಆ ತಮ್ಮ ಹಿರಿಯರು ಶಿವನಿಗೆ ಮಾಡಿದ ಭಕ್ತಿಯ ಫಲವಾಗಿ ಬಂದ ಪುಣ್ಯದ ಬಲದಿಂದಲೇ ತಾವೀಗ ಶಿವಪ್ರಸಾದಕ್ಕೆ ಅರ್ಹರಾಗಿರುವುದಾಗಿಯೂ ವಿನಂತಿಸಿಕೊಳ್ಳುತ್ತಿರುವರು. (329ನೇ ವಚನದಲ್ಲಿ ಬರುವ ನಮ್ಮಕ್ಕ ಅಥವಾ ನಿಮ್ಮಕ್ಕ ಎಂಬುದರ ಸರಿಯಾದ ಪಾಠ ನಿಂಬಕ್ಕ ಎನ್ನುವುದೇ ಆದರೂ-ಸೂಳೆ ನಿಂಬಕ್ಕನೇ ಬೇರೆಯೆಂದು ಭಾವಿಸಬೇಕಾಗುವುದು.)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು