ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು:
ಬಾಣನವ ನಾನು, ಮಯೂರನವ ನಾನು,
ಕಾಳಿದಾಸನವ ನಾನು!
ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ
ಎತ್ತಿ ಮುದ್ದಾಡಿ ಸಲಹಿದರೆನ್ನ,
ಕೂಡಲಸಂಗಯ್ಯಾ.
Transliteration Ēnagārū illa, ēnārū illavembaru:
Bāṇanava nānu, mayūranava nānu,
kāḷidāsanava nānu!
Kakkayya hiriyayya, cikkayya cennayya
etti muddāḍi salahidarenna,
kūḍalasaṅgayya.
Manuscript
English Translation 2 They say I have no kin, no kin:
Bāṇa's am I, and Mayūra's;
And Kāḷidāsa's kin am I!
Kakkayya is my elder uncle,
Cennayya my younger one.
O Kūḍala Saṅga , they brought me up,
Caressed and coddled me.
Translated by: L M A Menezes, S M Angadi
Hindi Translation कहते हैं, मेरा कोई नहीं, मेरा कोई नहीं,
बाण का हूँ मैं, मयूर का हूँ मैं, कालिदास का हूँ मैं,
चाचा कक्कय्या ने, काका चन्नय्या ने
मुझे उठाकर लाड़-प्यार किया कूडलसंगमदेव॥
Translated by: Banakara K Gowdappa
Telugu Translation ఎవరూ లేరు నా కెవరూ లేరని అందురే
బాణ మయూర కాళిదాసులు నావారే నయ్యా
కక్కయ్య పెద్దయ్య చిక్కయ్య చెన్నయ్య
నన్నెత్తి ముద్దాడి పెంచిరి అయ్యా
కూడల సంగయ్యా!
Translated by: Dr. Badala Ramaiah
Marathi Translation
मला कोणी नाही, माझे कोणीही नाही असे म्हणतात.
बाणाचा मी, मयुराचा आहे मी. कालीदासाचा आहे मी.
कक्कय्या आजोबा, काका चन्नय्या यांनी
मला लाडात वाढविले कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಬಾಣನವ = ; ಮಯೂರ = ; ಮುದ್ದಾಡು = ; ಸಲಹು = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಚಿಕ್ಕಂದಿನಲ್ಲೆ ತಂದೆ ತಾಯಿ ಬಂಧು ಬಳಗವನ್ನೆಲ್ಲ ತೊರೆದು ಶಿವಧರ್ಮಕ್ಕೆ ಸೇರಿದ ಮೇಲೆ-ಕೆಲವರು-“ಅವರಿಗೆ ಯಾರೂ ಇಲ್ಲ” ಎಂದು ಹೇಳುತ್ತಿದ್ದ ಮಾತನ್ನು ಅರ್ಥಾಂತರದಲ್ಲಿ ಅಲ್ಲಗಳೆಯುತ್ತಿರುವರು ಅವರಿಗೆ ಜನ ತಮ್ಮನ್ನು ಕಂಡು ಕನಿಕರಿಸುವುದು ಸೇರುತ್ತಿರಲಿಲ್ಲ. ಮತ್ತು ಅವರಿಗೆ ಭಾರತದ ಆದ್ಯಂತ ಇರುವ ಶಿವಶರಣರೆಲ್ಲಾ ತಮ್ಮ ತಾಯಿ ತಂದೆ ಬಂಧು ಬಳಗವೇ ಆಗಿರುವರೆಂಬ ವಾಂಛಲ್ಯ. ಬಾಣ ಮಯೂರ ಕಾಳಿದಾಸ ಮುಂತಾದ ಶಿವಕವಿಗಳು ಉತ್ತರ ಭಾರತದವರಾದರೆ, ಕಕ್ಕಯ್ಯ ಮುಂತಾದ ಶಿವಶರಣರು ದಕ್ಷಿಣಭಾರತದವರು. ಇವರೆಲ್ಲರೂ ತಮ್ಮವರೇ ಆಗಿರುವಾಗ-ಇವರಿಗಿಂತ ಅಖಿಲ ಭಾರತ ಬಾಂಧವ್ಯ ಇನ್ಯಾರಿಗಿದ್ದೀತೆಂಬುದು ಬಸವಣ್ಣನವರ ಹೆಮ್ಮೆ. ಇಲ್ಲಿ ಬಸವಣ್ಣನವರು ಶೈವದೃಷ್ಟಿಯಿಂದಲೇ ಆಗಲಿ-ಇಡೀ ಭಾರತ ತಮ್ಮ ದೇಶವೆಂದಂತಿರುವುದನ್ನು ಪರಿಭಾವಿಸಬೇಕು.
ವಿ: ಹಿರಿಯಯ್ಯ: ಇವನೊಬ್ಬ ದಲಿತ ಶರಣನೆಂಬುದರಲ್ಲಿ ಸಂಶಯವಿಲ್ಲ. ಹರಿಹರನು ಹಿರಿಯ ಅಥವಾ ಪಿರಿಯ ಎಂಬ ಪದವನ್ನು ಅಸ್ಪೃಶ್ಯ ಎಂಬ ಸಂದರ್ಭದಲ್ಲಿ ಬಳಸಿರುವನು-ನೋಡಿ “ಈಶ್ವರಂ ಪಿರಿಯ ವೇಷಂಗೊಂಡು ಹೊತ್ತ ಕರುವಿಡಿದ ಸಂಬಳಿಗೋಲಿನೀಶ್ವರಂ” (ಸಾಮವೇದಿಗಳ ರಗಳೆ), ಮತ್ತು ಮಾದಾರ ಚೆನ್ನಯ್ಯನಿದ್ದ ಕೇರಿಯನ್ನು “ಹಿರಿಯ ಕೇರಿ” ಎಂದಿರುವನು (ಮಾದರ ಚೆನ್ನಯ್ಯನ ರಗಳೆ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು