•  
  •  
  •  
  •  
Index   ವಚನ - 354    Search  
 
ಭಕ್ತನ ಭಕ್ತಸ್ಥಲ - ವಂಶಾವಳಿ
ಅಯ್ಯಾ, ನಿಮ್ಮ ವಂಶಾವಳಿಯಲು ಒಬ್ಬ ತೊತ್ತಿನ ಮಗ ಹುಟ್ಟಿದಾತನ ತೊತ್ತಿನ ಮಗ ನಾನಯ್ಯಾ; ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ! ಕೂಡಲಸಂಗಮದೇವಾ, ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ, ಎನ್ನ ತೊತ್ತುತನಕ್ಕೆ ಕೇಡಿಲ್ಲಾ.
Transliteration Ayya, nim'ma vanśāvaḷiyalu obba tottina maga huṭṭidātana tottina maga nānayya; baḷidottu, baḷagadottu, vanśadottu nānayyā! Kūḍalasaṅgamadēvā, nim'ma oḍetanakke kēḍillavāgi, enna tottutanakke kēḍilla.
Manuscript
English Translation 2 Within Thy lineage, Lord, I'm son of a servant born Of a servant's son, O Lord; I am a servant of Thy house. A servant of your clan, your tribe! O Kūḍala Saṅgama Lord, There is no peril to your Lordship-so No peril to my servanthood! Translated by: L M A Menezes, S M Angadi
Hindi Translation स्वामी तव वंशावली में एक भृत्य का पुत्र जन्मा, उसके भृत्य का पुत्र हूँ मैं । घराने का भृत्य, संबंधियों का भृत्य, वंश का भृत्य हूँ मैं । कूडलसंगमदेव, तव स्वामित्व की क्षति नहीं, मेरी दासता की क्षति नहीं ॥ Translated by: Banakara K Gowdappa
Telugu Translation అయ్యా నీ వంశావళియందు ఒకడు తొత్తుకొడుకు పుట్టె అతని తొత్తుకు పుట్టితి నేనయ్య ! వరుస తొత్తు వావి తొత్తు వంశము తొత్తు నాదయ్య కూడల సంగమ దేవా! మీ ప్రభుత్వమునకు కీడు లేనట్లే నా భటత్వమునకూ కీడు లేదయ్యా ! Translated by: Dr. Badala Ramaiah
Marathi Translation देवा तुमच्या वंशात एका सेवकाला पुत्र झाला. त्याच्या सेवकाचा मी पुत्र आहे. कुलाचा सेवक, बंधूचा सेवक, वंशाचा सेवक मी आहे. कूडलसंगमदेवा, आपल्या अधिकाराची यात हानी नाही आणि माझ्या सेवेची हानीही नाही. Translated by Shalini Sreeshaila Doddamani
ಶಬ್ದಾರ್ಥಗಳು ಕೇಡು = ; ತೊತ್ತು = ; ಬಳಗ = ; ಬಳಿ = ; ವಂಶಾವಳಿ = ;
ಕನ್ನಡ ವ್ಯಾಖ್ಯಾನ ಶಿವನು ಅಮೃತಸ್ವರೂಪಿಯಾಗಿ ಅವನ ಒಡೆತನಕ್ಕೆ ಎಂದಿಗೂ ಚ್ಯುತಿಯಿಲ್ಲ-ಅವನು ಎಲ್ಲ ಕಾಲಕ್ಕೂ ಎಲ್ಲ ಜೀವರ ಒಡೆಯ ಜಗದೀಶ್ವರ. ಆದ್ದರಿಂದಲೆ ಅಂಥವನ ತೊತ್ತಾಗಿ ತಾವು ಕೃತಕೃತ್ಯರಾದುದಾಗಿ ಬಸವಣ್ಣನವರು ಆ ಶಿವನನ್ನು ಸಂಬೋಧಿಸಿ ಸಮಾಧಾನಪಡುತ್ತಿರುವರು. ಸ್ವಾಮಿ, ನಿಮ್ಮ ಅಪರಾವತಾರವಾದ ಶಿವಭಕ್ತರ ಮನೆಯಲ್ಲಿ ವಂಶದೊತ್ತಾದ ಗುಲಾಮನೊಬ್ಬ ಹುಟ್ಟಿದ-ಅವನ ಗುಲಾಮನ ಮಗ ನಾನು. ಶಿವನೇ, ನಿಮಗೆ ನಾನು ನಿಮ್ಮ ಬಳಿಬಳಿಯೇ ಇರುವ ಬಳಿದೊತ್ತು ನಿಮ್ಮ ಬಳಗದಲ್ಲಿಯೇ ಇರುವ ಬಳಗದೊತ್ತು, ನಿಮ್ಮ ವಂಶದವರಿಗೇ ದುಡಿಯಲು ತಲೆಬೋಳಿಸಿಕೊಂಡಿರುವ ನಿಮ್ಮ ವಂಶದೊತ್ತು ನಾನು. ಈ ನನ್ನ ಸೇವೆ ನಿರಂತರವಾಗಿ ನಡೆಯುವಂತೆ ಕರುಣಿಸು-ಎನ್ನುತ್ತ ಬಸವಣ್ಣನವರು-ದಾಸಮಾರ್ಗಾನುಸಾರಿಯಾದ ತಮ್ಮ ಭಕ್ತಿಭಾವವನ್ನು ತೊಡಿಕೊಳ್ಳುತ್ತಿರುವರು. ಈ ಘಳಿಗೆಯಿದ್ದು ಮರುಘಳಿಗೆ ಸಾಯುವ ನರಮಾನವರ ಕ್ಷುದ್ರಸೇವೆ ಮಾಡದೆ ಮೃತ್ಯುವನ್ನು ಜಯಿಸಿದ ಶಿವನ (ಮತ್ತು ಶಿವಶರಣರ) ಸೇವೆಯನ್ನು ಮರ್ಯಾದೆಯಿಂದ ಚಿರಂತನವಾಗಿ ಮಾಡಿಕೊಂಡಿರುವ ತಮ್ಮ ಸೌಭಾಗ್ಯವನ್ನು ಕುರಿತಿರುವರು ಬಸವಣ್ಣನವರು ಈ ವಚನದಲ್ಲಿ. ಬಸವಣ್ಣನವರ ಆತ್ಮಗೌರವದ ಈ ನಿರ್ಧಾರ ಅವರಿಂದಾಚೆಗೆ ಎಲ್ಲ ಶಿವಕವಿಗಳ ನಿರ್ಧಾರವಾಯಿತು. ಹೀಗೆ ರಾಜಪ್ರಭುತ್ವ ಮತ್ತು ಊಳಿಗಮಾನ್ಯಪದ್ಧತಿಯಿದ್ದಾಗಲೇ ಪ್ರಜಾಪ್ರಭುತ್ವವನ್ನು ಒಂದು ಧಾರ್ಮಿಕನಿಷ್ಠೆಯಾಗಿ ಬಳಕೆಗೆ ತಂದವರು ಶಿವಶರಣರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು