ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯಾ:
`ತಾರೋ ಅಗ್ಘವಣಿಯ, ನೀಡೋ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೋ' ಎಂಬರು.
'ಕೂಡಲಸಂಗನ ಮಹಾಮನೆಯಲ್ಲಿ
ಒಕ್ಕುದನುಣ್ಣೋ ತೊತ್ತೇ' ಎಂಬರು.
Transliteration Arasara maneyalli arasiyāgippudarinda,
bhaktara maneya tottāgippudu kara lēsayya:
`Tārō agghavaṇiya, nīḍō patreya,
liṅgakke bōnava hiḍiyō' embaru.
'Kūḍalasaṅgana mahāmaneyalli
okkudanuṇṇō tottē' embaru.
Manuscript
English Translation 2 It's better to be a servant in
A bhakta's house,
Than in king's palace to be queen:
They say 'Get me water, give the leaf,
Offer the food to Liṅga!' so
They say, 'What is left over
In Kūḍala Saṅga's great house,
Eat that, you slave!'
Translated by: L M A Menezes, S M Angadi
Hindi Translation राजमहल में रानी बनने की अपेक्षा
भक्तों के घर भृत्य बनना श्रेष्ट है ।
कहते हैं-“ अर्घ्य लाओ, बिल्व लाओ,
लिंग को नैवेद्य चढाओ”
कहते हैं “कूडलसंगमदेव के महामंदिर में
हे भृत्य, शेष प्रसाद खाओ” ॥
Translated by: Banakara K Gowdappa
Telugu Translation రాజుల యింట రాణిjైు యుండుటకన్న
భక్తుల యింట బానిసjైు
బ్రతుకుట మేలయ్యా
అర్ఘ్యము తేవే పత్రమిడవే
లింగమునకు వడ్డింపవే యందురు
కూడల సంగని మహాగృహమందు
ప్రసాదము గొనవే యందురు.
Translated by: Dr. Badala Ramaiah
Marathi Translation
महालातील राणी, होण्यापरी देवा
दासी होणे बरवे, भक्ता घरी
जल कुंभ आणा ग बेलपत्री ठेवा ग
नैवेद्य करा ग, देवासाठी
शिवशरणासंगे, महानिवासात
कानी पडतेच, देव वाणी
कूडलसंगमदेवा! शरणांच्या दारी
शेषप्रसाद तरी, मिळे नित्य
अर्थ - राजाची राणी होण्यापेक्षा भक्ताच्या घरी अर्थात शिवशरणांच्या भक्ती मंदिरात मोलकरीण झालेले फार बरे, कारण राजाची राणी झाले तर राजमहालात सर्व अधिकार प्राप्त होतील. आणि अधिकार प्राप्त झाले तर मनातील अहंकार जागृत होईल. अधिकाराचा अहंपणा, धनसंपतीची लालसा, बडेजावपणा, अधिकाराचा गैरवापर ह्या सर्व गोष्टी आपोआप एका मागून एक घडत जातील. पण शरणांच्या घरची दासी झाल्यास निदान त्यांचा संस्कार तिच्यावर घडत जाईल. आणि न कळत तिच्या हातून सेवाभाव, शरणत्व भ्रत्याचार लहान म्हणून घेणे, लहान होऊन राहणं इत्यादी सारख्या गोष्टी घडतील. कारण तेथे लिंगदेवासाठी चाललेली पूजा, भक्ती नकळत माझ्या हातूनही घडत राहील व नेहमीच उत्तम शब्द कानी पडत राहतील. म्हणून यापेक्षा दुसरी कोणती गोष्ट सुदैवाची असू शकेल ?
Translated by Rajendra Jirobe, Published by V B Patil, Hirabaug, Chembur, Mumbai, 1983
राजवाड्यातील महाराणी बनण्यापेक्षा
भक्ताच्या घरची दासी होऊन राहणे चांगले देवा.
`पाणी आण, फूल-पत्री आण, लिंगाला नैवेद्य दाखव.` म्हणती.
`कूडलसंगमदेवाच्या महानिवासातील शेषप्रसाद खा मुला` म्हणतील.
Translated by Shalini Sreeshaila Doddamani
ಶಬ್ದಾರ್ಥಗಳು ಅಗ್ಘವಣಿ = ಪೂಜೆ ಅಭಿಷೇಕಕ್ಕಾಗಿ ಉಪಯೋಗಿಸುವ ನೀರು; ಒಕ್ಕುಗ = ; ಕರ = ; ತಾರೋ = ; ತೊತ್ತು = ; ಬೋನ = ;
ಕನ್ನಡ ವ್ಯಾಖ್ಯಾನ ಹೆಂಗಸು ಆಳಾಗಿ ಅರಸರ ಮನೆ ಸೇರುವುದನ್ನು ಬಸವಣ್ಣನವರು ಒಪ್ಪಲಿಲ್ಲ. ಅದಕ್ಕೆ ಅವರು ಕಾರಣವನ್ನು ಈ ವಚನದಲ್ಲಿ ಕೊಟ್ಟಿರುವಂತಿದೆ : ಹೆಂಡವನ್ನು ತಾ, ತಾಂಬೂಲವನ್ನು ನೀಡು ಅಟ್ಟ ಮಾಂಸಖಂಡವನ್ನು ಮುಂದೆ ಹಿಡಿ ಎನ್ನದೆ-ಮತ್ತೇನೆನ್ನುವರು ಆ ಶ್ರೀಮಂತರು ತಮ್ಮಲ್ಲಿಗೆ ದಾಸಿಯರಾಗಿ ಬಂದ ವಯಸ್ಸಿನ ಹುಡುಗಿಯರಿಗೆ? ಆದ್ದರಿಂದ ಬಸವಣ್ಣನವರು ಹೇಳುತ್ತಾರೆ-ಅರಸರ ಅರಮನೆಯಲ್ಲಿ ಅರಸಿಯಾಗಿರುವುದಕ್ಕಿಂತ ಭಕ್ತರ ಮನೆಯಲ್ಲಿ ದಾಸಿಯಾಗಿರುವುದೇ ಮೇಲೆಂದು. ಯಾಕೆ? ಆ ಭಕ್ತಮಹನೀಯರು ಆ ದಾಸಿಯರತ್ತ ವಾತ್ಸಲ್ಯದಿಂದ ನೋಡುತ್ತ-“ಶಿವಪೂಜೆಗೆ ನೀರು ತಾ, ಪತ್ರೆ ನೀಡು, ಲಿಂಗಕ್ಕೆ ನೈವೇದ್ಯ ಹಿಡಿ, ಒಕ್ಕ ಪ್ರಸಾದವನ್ನು ಉಣ್ಣು” ಎನ್ನುತ್ತಾರೆ. ಇದೆಲ್ಲವೂ ಪುಣ್ಯವನ್ನು ಕೊಡುವ ಮತ್ತು ಆತ್ಮಾಭಿಮಾನ ಉಳ್ಳ ಕೆಲಸಗಳೇ ಆಗಿವೆ.
ಆದ್ದರಿಂದ ಅದ್ಧೂರಿಗೆ ಆಸೆಪಟ್ಟು ಸಿರಿವಂತರ ಸೇವೆಗೇ ಅಲ್ಲ, ಪಟ್ಟದರಾಣಿಯಾಗಿಯೂ ಹೋಗಬೇಡ-ಶಿವಶರಣರ ಮನೆಯಲ್ಲಿ ಸೇರಿಕೋ-ಇಹಪರವೆರಡಕ್ಕೂ ಒಳ್ಳೆಯದೆಂದು ಬಡತನದಿಂದ ದಿಕ್ಕುತಪ್ಪುತ್ತಿದ್ದ ಹೆಣ್ಣುಮಕ್ಕಳಿಗೆ ಬಸವಣ್ಣನವರು ಬುದ್ಧಿ ಹೇಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು