ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು
ಗಂಡುದೊತ್ತಾದೆನಯ್ಯಾ, ಕೂಡಲಸಂಗಮದೇವಾ
ನಿಮ್ಮ ಶರಣರಿಗೆ.
Transliteration Ānu nim'ma śaraṇarige, maṇḍeya bōḷisikoṇḍu
gaṇḍudottādenayyā, kūḍalasaṅgamadēvā
nim'ma śaraṇarige.
Manuscript
English Translation 2 With shaven head,
I have become a servant-man
To Thy Śaraṇās ,
O Kūḍala Saṅgama Lord,
To Thy Śaraṇās .
Translated by: L M A Menezes, S M Angadi
Hindi Translation स्वामी, अपना सिर मुँडाकर
मैं तव शरणों का पुरुष भृत्य बन गया
कूडलसंगमदेव, तव शरणों का ॥
Translated by: Banakara K Gowdappa
Telugu Translation తల బోడిరచుకొని నీ శరణులకు
మగదాసినై నే నుందునయ్యా
కూడల సంగమ దేవా నీ శరణులకు.
Translated by: Dr. Badala Ramaiah
Marathi Translation
मी माझ्या डोकीचे केस कापून
आपल्या शरणांचा सेवक झालो देवा.
कूडलसंगमदेवा, तुमच्या शरणांचा सेवक झालो.
Translated by Shalini Sreeshaila Doddamani
ಶಬ್ದಾರ್ಥಗಳು ಒತ್ತಾನೆ = ; ಮಂಡೆ = ;
ಕನ್ನಡ ವ್ಯಾಖ್ಯಾನ ಬಹುಶಃ ಗುಲಾಮನಾಗಿ ಬಂದವನಿಗೆ ಮೊದಲು ತಲೆಬೋಳಿಸುತ್ತಿದ್ದರು-(ಹೆಣ್ಣಿಗಾದರೂ ಅಷ್ಟೆ!) ಬಸವಣ್ಣನವರು ಕೂಡಲಸಂಗಮದಲ್ಲಿದ್ದಾಗ ತಲೆಯನ್ನು ಬೋಳಿಸಿಕೊಂಡಿದ್ದರಾಗಬಹುದು-ಗುಲಾಮಗಿರಿಗಾಗಿಯಲ್ಲ-ವಟುವಾಗಿ. ಆ ತಮ್ಮ ಬೋಳನ್ನು ಗುಲಾಮರ ಬೋಳಿಗೆ ಹೋಲಿಸಿ-ತಾವು ಶಿವಶರಣರ ಮನೆಯ ಗಂಡುದೊತ್ತು ಎಂದು ಸರಸವಾಡಿದ ಒಂದು ಸಂದರ್ಭದ ವಚನವಿರಬೇಕಿದು. ವೀರಶೈವರಲ್ಲಿ ಬೋಳು ನಿಷಿದ್ಧವಲ್ಲ. (ನೋಡಿ ವಚನ 498).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು