•  
  •  
  •  
  •  
Index   ವಚನ - 358    Search  
 
ಭಕ್ತನ ಭಕ್ತಸ್ಥಲ - ವಿನಮ್ರತೆ
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ !ದಮ್ಮಯ್ಯಾ! ನಿಮ್ಮ ಧರ್ಮದ ಕವಿಲೆಯಾನಯ್ಯಾ! ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನೆಯ ಮಗ ನಾನಯ್ಯಾ!
Transliteration Anudina manamuṭṭi dhan'yanayyā, dam'mayyā!Dam'mayyā! Nim'ma dharmada kavileyānayyā! Kūḍalasaṅgamadēvayya, nim'ma śaraṇara maneya maga nānayyā!
Manuscript
English Translation 2 I am blest to my heart's content, Day after day, O bountiful Lord! I am Thy bounty's cow! O Kūḍala Saṅgama Lord, I, in Thy Śaraṇās house, Am but a drudge! Translated by: L M A Menezes, S M Angadi
Hindi Translation अनुदिन मनसा ध्यान कर मैं धन्य हूँ हे धर्मात्मन हे धर्मात्मन ! मैं तुमसे अनुगृहीत कपिला हूँ, कूडलसंगमदेव मैं तव शरणों के घर में दास हूँ॥ Translated by: Banakara K Gowdappa
Telugu Translation దినదినము మది సంతృప్తి గన నీ దయ ధన్యుడై తి నీ దయ నీ ధర్మపు కపిల నేనయ్యా కూడల సంగమదేవా నీ శరణుల యింటి చిరుత నేనయ్యా Translated by: Dr. Badala Ramaiah
Marathi Translation अनुदिन मनाने पूजा करुन धन्य झालो देवा! हे देवा ! तुमच्या धर्माची गाय मी देवा, कूडलसंगमदेवा, तुमच्या शरणांच्या घरचा पुत्र मी आहे देवा. Translated by Shalini Sreeshaila Doddamani
ಶಬ್ದಾರ್ಥಗಳು ಕವಿಲೆ = ; ದಮ್ಮಯ್ಯ = ; ಧನ್ಯ = ;
ಕನ್ನಡ ವ್ಯಾಖ್ಯಾನ ಶಿವನೇ ಗತಿಯೆಂದು ಧ್ಯಾನಿಸಿದ್ದರಿಂದ ಮತ್ತು ಶಿವಾಲಯದ ಬಳಿಬಳಿಯೇ ಸುತ್ತ ಸುಳಿದಾಡಿದ್ದರಿಂದ-ನಾನು ಶಿವಶರಣರ ಮನೆಯ ಮಗ(ಗುಲಾಮ)ನಾಗುವ ಅರ್ಹತೆಯನ್ನು ಪಡೆದೆ-ಶಿವನಿಗೇ ಅರ್ಪಿತವಾದ (ವಚನ-226) ಪಶು (>ಹಸು)ಶಿವಶರಣರಿಗೆಲ್ಲ ಮುದ್ದಾದಂತೆ. ಆ ಶಿವಶರಣರಾದರೋ-“ಭಕ್ತಿರಸವನ್ನು ಧಣಿಯ ಮೇಯಿಸಿ, ಸುಬುದ್ಧಿಯೆಂಬ ಉದಕವನ್ನೆರೆದು ನೋಡಿ ಸಲುಹಿದರು” (ವಚನ 51). ನನಗಾದ ಈ ಒಳ್ಳೆಯದೆಲ್ಲಾ ನಿನ್ನ ಸಾನ್ನಿಧ್ಯದಿಂದ ನನಗಾಯಿತು-ಎಂದು ಬಸವಣ್ಣನವರು ಕೂಡಲ ಸಂಗಮದಲ್ಲಿ(?)ತಮಗೊದಗಿದ ಶಿವನ ಮತ್ತು ಶಿವಶರಣರ ಕೃಪೆಯನ್ನು ಕುರಿತು ಧನ್ಯತೆಯನ್ನು ವ್ಯಕ್ತಪಡಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು