ಕಾಮವ ತೊರೆದಾತ, ಹೇಮವ ಜರೆದಾತ,
ಭಾನುವಿನ ಉದಯಕ್ಕೆ ಒಳಗಾಗದ ಶರಣನು!
ಆಗಳೂ ನಿಮ್ಮ ಮಾಣದೆ ನೆನೆವರ ಮನೆಯಲು ಶ್ವಾನನಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
Transliteration Kāmava toredāta, hēmava jaredāta,
bhānuvina udayakke oḷagāgada śaraṇanu!
Āgaḷū nim'ma māṇade nenevara manegaḷu śvānanāgirisu,
mahādāni kūḍalasaṅgamadēvā.
Manuscript
English Translation 2 He who has shed desire,
He who has spurned at gold,
He is not a vassal to the dawn,
He is a Śaraṇā !
In the house of those
Who love Thee always without fail,
Let me be a dog,
O Kūḍala Saṅgama Lord
Most bountiful!
Translated by: L M A Menezes, S M Angadi
Hindi Translation जिसने काम त्यागा हो
जिसने होम त्यागा हो
जो सूर्योदयाधीन न हो
वह शरण है, जो व्यक्त काम है,
जो विसर्जित कांचन है,
जो सूर्योदयाधीन नहीं है,वह शरण है ।
सदा तव ध्यानासक्तों के घर
मुझे श्वान बना रखो, महादानी कूडलसंगमदेव ॥
Translated by: Banakara K Gowdappa
Telugu Translation కామమడచినవాడుజి
కనక మొల్ల నివాడు
భానూదయమునకు
లోనుగానివాడె శరణుడు
నిరతము నిను ధ్యానించు
వాని యింట నను కుక్కగ
నిల్పుమయ్యా కూడల సంగయ్య!
Translated by: Dr. Badala Ramaiah
Marathi Translation
कामाला त्यागणारे, सोन्याचा तिरस्कार करणारे,
सूर्योदयाने प्रभावित न होणारे शरण,
निरंतर आपल्या स्मरणात असणाऱ्या शरणांच्या घरचा सेवक
बनवावे मला महादानी कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಉದಯ = ; ಕಾಮ = ; ಜರೆ = ; ತೊರೆ = ; ಭಾನು = ; ಮಹಾದಾನಿ = ; ಮಾಣದೆ = ; ಶರಣ = ; ಶ್ವಾನ = ; ಹೇಮ = ;
ಕನ್ನಡ ವ್ಯಾಖ್ಯಾನ ಶಿವನೇ ಯಾರು ನಿನ್ನನ್ನು ಪ್ರಾತಃಕಾಲವೆನ್ನದೆ ಮಧ್ಯಾಹ್ನವೆನ್ನದೆ ಸಂಜೆಯೆನ್ನದೆ ಯಾವಾಗಲೂ ಧ್ಯಾನಿಸುತ್ತಾರೋ ಆ ಶರಣರ ಮನೆಯಲ್ಲಿ ನಾಯಾಗಿರಲು ನಾನು ಬಯಸುತ್ತೇನೆ. ನಿನಗೆ ಮಹಾದಾನಿಯೆಂಬ ಬಿರುದಿರುವುದಾಗಿ ಈ ನನ್ನ ಚಿಕ್ಕದೊಂದು ಬೇಡಿಕೆಯನ್ನು ಈಡೇರಿಸುವುದು ದೊಡ್ಡದಲ್ಲ.
ಹೆಣ್ಣು ಮತ್ತು ಹೊನ್ನಿನ ವ್ಯಾಮೋಹ ತೊರೆದ ಶಿವಶರಣರ ಮನೆಯಲ್ಲೇ ನಾನು ನಾಯಾಗಬೇಕೆಂದೇಕೆ ಬಯಸುವೆನೆಂದರೆ-ಸದಾ ಶಿವಧ್ಯಾನಚಿತ್ತರಾಗಿರುವ ಅವರ ಧ್ಯಾನಕ್ಕೆ ಭಂಗಬಾರದಂತೆ ಅವರ ಮನೆಯ ಆವರಣವನ್ನು ನಿರ್ವಿಘ್ನವಿಟ್ಟು ಸಂರಕ್ಷಿಸಬೇಕು ಮತ್ತು ಮಿಕ್ಕಂತೆ ಅವರನ್ನು ಅನವರತ ನಟ್ಟನೋಟದಿಂದ ಕಣ್ಣಾರೆ ನೋಡಿ ಆನಂದಿಸುತ್ತಿರಬೇಕು. ಸಿರಿವಂತರ ಮನೆಯ ನಾಯಾಗಿ ಅವರ ನಗನಾಣ್ಯವನ್ನು ಭೋಗಸಾಮಾಗ್ರಿಗಳನ್ನು ಸದಾ ಕಾಯುತ್ತ ಬೊಗಳುತ್ತ ಬಾಲವಲ್ಲಾಡಿಸುತ್ತ ಇರುವ ದುರವಸ್ಥೆ ನನಗೆ ಬೇಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು