•  
  •  
  •  
  •  
Index   ವಚನ - 360    Search  
 
ಭಕ್ತನ ಭಕ್ತಸ್ಥಲ - ಮೇಲು-ಕೀಳು
ಮೇಲಾಗಲೊಲ್ಲೆನು ಕೀಳಾಗಲಲ್ಲದೆ: ಕೀಳಿಂಗಲ್ಲದೆ ಹಯನ ಕರೆವುದೆ? ಮೇಲಾಗಿ ನರಕದೊಳೋಲಾಡಲಾರೆನು: ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ.
Transliteration Mēlāgalollenu kīḷāgalallade: Kīḷiṅgallade hayana karevude? Mēlāgi narakadoḷolāḍalārenu: Nim'ma śaraṇara pādakke kīḷāgirisu, mahādāni kūḍalasaṅgamadēvā।
Manuscript
English Translation 2 I do not seek the height Without the lowly state: Can you get milk Unless you do The meanest tasks? I cannot roll in hell, being high. O Kūḍala Saṅgama, Place, me beneath Thy Śaraṇās' feet, Most bountiful Lord! Translated by: L M A Menezes, S M Angadi
Hindi Translation मैं उन्नति नहीं चाहता, अवनति की चाह के बिना । मैं श्रेष्ट बनना नहीं चाहता, किंकर हुए बिना, नीचे बैठे बिना गाय दूध देगी ? उन्नत होकर नरक में लुढकना नहीं चाहता, तव शरणों के चरणों का दास बना रखो, महादानी कूडलसंगमदेव ॥ Translated by: Banakara K Gowdappa
Telugu Translation క్రింద పడుట కేగాని పై బడ నొల్లనయ్యా క్రింది త్రేపునకే ఆవుపాలిచ్చు పై బడి నరకాన బోలేను నీ శరణుల చరణాల కడ పడవేయుమయ్యా కూడల సంగయ్యా: Translated by: Dr. Badala Ramaiah
Marathi Translation होण्यापरी उच्च, होवो मी लहान मोठेपणा जाण, नर्क भोग गोमाता दुभती, सोडीचना पान्हा टेके खाली जेव्हा, गुडघे ते कूडलसंगमदेवा! शरणांच्या चरणी सान सदा होऊनी, राहीन मी अर्थ - स्वतःला श्रेष्ठ म्हणवून घेण्याची माझी मुळीच इच्छा नाही. कारण त्याने अहंकार, अहंभाव वाढत जातो. व शेवटी नरकात जावे लागते. त्या स्वतःला लहान म्हणून राहील्यास व शरण चरणी राहून सेवारत झाल्यास माझे जीवन सफल होईल. जसे दुभत्या गायीस दूध दे म्हटल्यास किंवा तिला मारल्यास ती गाय दूध देईल का? त्या ऐवजी त्या गाईची सेवा करीत तिच्या पोटाखाली जमीनीवर गुडघे ठेवून बसल्याशिवाय ती पान्हा सोडील का? तद्वत हे कूडलसंगमदेवा (परमेश्वरा) शरण चरणी मला लहानातला लहान म्हणून राहू द्यावे आणि माझ्या हातून त्यांची सेवा घडो एवढीच तव चरणी नम्र प्रार्थना. Translated by Rajendra Jirobe, Published by V B Patil, Hirabaug, Chembur, Mumbai, 1983 श्रेष्ठ होण्याची इच्छा नाही, कनिष्ठ राहतो. खाली बसल्या विना गाय दूध देणार का? मोठा होऊन नरकात तळमळण्याची इच्छा नाही. तुमच्या शरणांच्या चरणी पामर होऊन राहू द्यावे. महादानी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ನರಕ = ; ಮಹಾದಾನಿ = ; ಹಯನ = ;
ಕನ್ನಡ ವ್ಯಾಖ್ಯಾನ ಆಗಬೇಕಾದ್ದು ಭಕ್ತಸಮೂಹದ ಉದ್ಧಾರ-ಅದರ ಮುಖಂಡರು ಶರಣರು.ಆ ಶರಣರೆಲ್ಲರ ಗೌರವಕ್ಕೆ ಪಾತ್ರರಾದವರು ಬಸವಣ್ಣನವರು. ಈ ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಬಸವಣ್ಣನವರು ಸರ್ವಾಧಿಕಾರಿಯಂತೆ ಮೆರೆಯಬಹುದಾಗಿತ್ತು.ಆದರೆ ಅವರಿಗೆ ಅಂಥ ಅಧಿಕಾರಗ್ರಹಣದಲ್ಲಿ ವಿಶ್ವಾಸವಿರಲಿಲ್ಲ. ಮತ್ತು ವಿನಯದ ಹೂವಾದ ಸೇವಾಮನೋಭಾವವೇ-ತಾವು ಕೈಗೊಂಡಿರುವಂಥ ಸಾಮಾಜಿಕ ಬದಲಾವಣೆಗೆ ತೀವ್ರ ಉತ್ತೇಜನ ಕೊಡಬಲ್ಲುದೆಂದು ಅವರ ಮನವರಿಕೆಯೂ ಆಗಿತ್ತು. ಅಥವಾ ಬಸವಣ್ಣನವರ ವ್ಯಕ್ತಿತ್ವದ ಮೂಲಧಾತುವೇ ವಿನಮ್ರ ವಿನಯವೆಂಬುದನ್ನು ಮರೆಯಬಾರದು.ಆದ್ದರಿಂದಲೇ ಶರಣರೊಡನೆ ತಮಗಿದ್ದ ಸಂಬಂಧವನ್ನು-ಹಸುವಿನೊಡನೆ ಕರುವಿಗಿರುವ ಸಂಬಂಧಕ್ಕೆ ಹೋಲಿಸಿಕೊಂಡಿರುವರು. ಹಾಲು ಬೇಕಾದ ಕರು ತಾಯಿ ಹಸುವಿನ ಪಾದಗಳೆಡೆಯ ಕೆಚ್ಚಲಿಗೆ ಕುಗ್ಗಿ ಉತ್ಕಂಟವಾಗಿ ಮುಗೀಬೀಳುವುದು. ಹಸು ಆ ತನ್ನ ಕಂದನ ಆನತ ಸುಂದರ ಅನನ್ಯ ಮಧುರ ಮರ್ದನಕ್ಕೆ ಮೈ ಜಲ್ಲೆಂದು ಹನಿಹನಿಯಾಗಿ ಧಾರೆಧಾರೆಯಾಗಿ ಹಾಲನ್ನು ತೊರೆಸುವುದು. ಹಾಗೆಯೇ ಬಸವಣ್ಣನವರು ಶರಣರ ಕೃಪಾಮೃತವನ್ನು ವಿನಯದಿಂದ ಮಣಿದು ಪಡೆಯುವನೆಂಬುದು ತೀರಾ ಸಹಜವಾಗಿಯೇ ಇದೆ. ತಾಯ ಮೇಲೇರಿದ ಕರುವಿಗೆ ಹಾಲು ಸಿಗದು! ಅಹಂಕಾರದಿಂದ ಶರಣರ ಮೇಲೇರಿ ಹೋದರೆ ಅಧಃಪಾತವೇ ನರಕವೇ ಗತಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು