•  
  •  
  •  
  •  
Index   ವಚನ - 361    Search  
 
ಭಕ್ತನ ಭಕ್ತಸ್ಥಲ - ಶರಣರು
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ: ನಾನು ಮತ್ತಾವ ಪದವಿಯನೊಲ್ಲೆನಯ್ಯಾ! ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ.
Transliteration Brahmapadaviyanolle, viṣṇupadaviyanolle, rudrapadaviyanolle: Nānu mattāva padaviyanollenayyā! Kūḍalasaṅgamadēvā, nim'ma sadbhaktara pādavanaridippa mahāpadaviyane karuṇisayyā.
Manuscript
Music Courtesy: Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2 I do not seek The Brahma rank; I do not seek The Viṣṇu rank; I do not seek The Rudra rank. I seek, O Lord, No other rank! Give me of Thy grace The privilege to know the feet Of Thy true devotees! Translated by: L M A Menezes, S M Angadi
Hindi Translation मैं ब्रह्मपद नहीं चाहता, विष्णुपद नहीं चाहता, रुद्रपद नहीं चाहता, मैं और कोई पद नहीं चाहता। कूडलसंगमदेव, मुझे तव निज, सद्भक्तों के चरणज्ञ बनने का महापद प्रदान करो ॥ Translated by: Banakara K Gowdappa
Telugu Translation బ్రహ్మపదవినొల్ల విష్ణుపదవినొల్ల రుద్రపదవినొల్ల మఱి యే పదవియూ నే నొల్లనయ్యా, కూడల సంగమదేవా నీ సద్భక్తుల పాదము జూచు మహాపదవినే ప్రసాదింపుమయ్యా! Translated by: Dr. Badala Ramaiah
Marathi Translation नको ब्रम्ह पदवी, नको विष्णू पदवी नको रुद्र पदवी, क्षुद्र माते नको अन्य पद, अथवा ती पदवी सेवा ती घडावी, शरणांची कूडलसंगमदेवा! भक्त चरण महिमा कळो यावी आम्हां, तीच थोर अर्थ – ब्रम्ह, विष्णू, रूद्र या पदव्या मला नको आहेत. किंवा इतर कसल्याही पदपदांची मला इच्छा नाही. मला सदैव तुझ्या सद्भक्तांची सेवा करण्यास जाणीव दे. हीच महापदवी देवून अनुग्रह करावे अशी माझी नम्र विनंती आहे. Translated by Rajendra Jirobe, Published by V B Patil, Hirabaug, Chembur, Mumbai, 1983 ब्रह्मपदवी नको, विष्णूपदवी नको, रुद्रपदवी नको. मला आणखी कोणतीही पदवी नको. कूडलसंगमदेवा, तुमच्या सद्भक्तांचा चरणमहिमा जाणण्याच्या श्रेष्ठ पदाचा अनुग्रह करावा देवा. Translated by Shalini Sreeshaila Doddamani
Urdu Translation نہیں ہےیہ میری خواہش کہ میں برہما بنوں نہ وِشنواوررُدرا ہی بننا چاہتا ہوں نہیں ہےمجھ کوکسی مرتبے کی چاہ نہیں مرے حضورمرےدیوا کوڈلا سنگم عطا ہوایسی نظرجس سےنیک بھگتوں کے چَرن بھی چھوسکوں،ان کےخصال پہچانوں Translated by: Hameed Almas
ಶಬ್ದಾರ್ಥಗಳು ರುದ್ರ = ;
ಕನ್ನಡ ವ್ಯಾಖ್ಯಾನ ತತ್ತ್ವಾತೀತನಾದ ಪರಶಿವನು ಲೀಲೆಯಿಂದ ಸೃಷ್ಟ್ಯುನ್ಮುಖವಾದಾಗ ಶಿವ-ಸದಾಶಿವ-ಉಮಾಮಹೇಶ್ವರ ಎಂಬ ಅನುಕ್ರಮದ ಮೂರು ತತ್ತ್ವಗಳಾಗಿ ಅವತರಿಸುತ್ತಾನೆ. ಈ ಉಮಾಮಹೇಶ್ವರನ ಸಹಸ್ರ ಕೋಟ್ಯಂಶದಲ್ಲಿ ರುದ್ರನು, ರುದ್ರನ ಸಹಸ್ರಕೋಟ್ಯಂಶದಲ್ಲಿ ವಿಷ್ಣು, ವಿಷ್ಣುವಿನ ಸಹಸ್ರಕೋಟ್ಯಂಶದಲ್ಲಿ ಬ್ರಹ್ಮನು ಉದಯಿಸುವರು. ಕೊನೆಯವನಾದ ಈ ಬ್ರಹ್ಮನಿಂದಲೇ ಈ ಬ್ರಹ್ಮಾಂಡ ಸೃಷ್ಟಿಯಾಗಿರುವುದು. ಈ ರುದ್ರ-ವಿಷ್ಣು-ಬ್ರಹ್ಮರು ತ್ರಿಗುಣ ಸ್ವರೂಪರು. ಬಸವಣ್ಣನವರ ದೃಷ್ಟಿಯಿರುವುದು ಗುಣಾತೀತವಾದ ತತ್ತ್ವಾತೀತವಾದ ಪರಶಿವನ ಅಂಶವಾದ ಶಿವಶರಣರ ಸಂಗಸಹವಾಸದ ಕಡೆಗೇ-ಬ್ರಹ್ಮಪದವಿಯ ಕಡೆಗಲ್ಲ, ವಿಷ್ಣುಪದವಿಯ ಕಡೆಗಲ್ಲ, ರುದ್ರಪದವಿಯ ಕಡೆಗೂ ಅಲ್ಲ. ಬ್ರಹ್ಮ ಮುಂತಾದವರು ಬಂಧನ ರೂಪವಾದ ಪ್ರಾಕೃತ ಸೃಷ್ಟಿಗೆ ಕಾರಣಕರ್ತರಾದರೆ-ಶರಣರು ಸಚ್ಚಿದಾನಂದಸ್ವರೂಪವಾದ ಹೊಚ್ಚಹೊಸದೊಂದು ದೃಷ್ಟಿಗೆ ಕಾರಣಕರ್ತರು. ಆ ಶರಣರ ಈ ದೃಷ್ಟಿಗೆ ತಕ್ಕ-ಒಂದು ನೂತನ ಸೃಷ್ಟಿ ಕ್ರಿಯೆಗೆ ಬಸವಣ್ಣನವರು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಲು ಹಂಬಲಿಸುತ್ತಿರುವರು. “(ನಾನು)ಮತ್ತಾವ ಪದವಿಯನೊಲ್ಲೆ”ನೆಂಬ ಮಾತಿನಿಂದ ಅವರು ಶರಣ-ಜಂಗಮ ಪದವಿಗಳಿಗೂ ಆಶೆಪಡರು. ಅವರ ಹಗಲಿರುಳಿನ ಆಶೆ ಎಂದರೆ-ಆ ಶರಣರನ್ನು ಜಂಗಮರನ್ನೂ ಉಪಚರಿಸುವ ಭಕ್ತನಾಗಿರುವುದೊಂದೇ. ಸದ್ಬಕ್ತ : ಶರಣ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು