•  
  •  
  •  
  •  
Index   ವಚನ - 363    Search  
 
ಭಕ್ತನ ಭಕ್ತಸ್ಥಲ - ಶರಣಾಗತಿ
ಆವಾವ ಭಾವದಲ್ಲಿ ಮಾಡಿ ಕೂಡಿಹೆವೆಂಬರ ಬಾಗಿಲ ತೋರಯ್ಯಾ. ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ ಬಾಗಿಲ ತೋರಯ್ಯಾ. ಇವನೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆನ್ನವರೆಂಬವರ ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ.
Transliteration Āvāva bhāvadalli māḍi kūḍ'̔ihevembara bāgila tōrayya. Tanuvanoppisidavara, manavanoppisidavara, dhanavanoppisidavara bāgila tōrayya. Ivanellavanoppisi jaṅgamavennavarennavarennavarembavara keraha hottirisennanu, kūḍalasaṅgamadēvā.
Manuscript
English Translation 2 Show me the door of those Who would be one with Thee In whatsoever sense. Show me the door of those Who have surrendered all they had- Their body, mind and wealth. O Kūḍala Saṅgama Lord, Make me to live carrying the shoes Of those who, dedicating all they had, Say, over and over again, 'Jaṅgama is mine'. Translated by: L M A Menezes, S M Angadi
Hindi Translation अन्यान्य भाव से सेवा कर समरसता प्राप्त लोगों के द्वार दिखाओ; तन समर्पित मन समर्पित, धन समर्पित लोगों के द्वार दिखाओ; ये सब कुछ समर्पित कर ‘जंगम मेरे हैं, मेरे हैं’ कहनेवालों की पादुकाएँ मुझे दे दो कूडलसंगमदेव ॥ Translated by: Banakara K Gowdappa
Telugu Translation ఏయే భావముల యెవ్వరెవ్వ రేయే రీతి నీ లోన చేరిరో వారివారి వాకిలి చూపుమయ్యా తనువు నిచ్చినవారి మనసునిచ్చినవారి ధనము నిచ్చినవారి తలుపు చూపుమయ్యా! ఇవియెల్ల దారవోసి జంగములే నా వారు నా వారు నా వారని వారికాలి చెప్పులమోయ బ్రతికింపుమయ్యా కూడల సంగమదేవా Translated by: Dr. Badala Ramaiah
Marathi Translation कोणत्याही भावात तुमच्यात समरस होऊन राहणाऱ्यांचा दरवाजा मला दाखवा देवा. तन अर्पित, मन अर्पित, धन अर्पित करणाऱ्यांचा दरवाजा मला दाखवा देवा. सर्व समर्पण करुनी जंगमाला सर्वस्व म्हणणाऱ्यांच्या पादुका उचलण्यास लावावे मला कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕೆರಹ = ; ಜಂಗಮ = ; ಭಾವ = ; ಹೊತ್ತಿರಿಸೆ = ;
ಕನ್ನಡ ವ್ಯಾಖ್ಯಾನ ಎಲ್ಲ ರೀತಿಯಲ್ಲೂ ಶಿವನಲ್ಲೇ ಐಕ್ಯವಾಗಿರಬೇಕೆಂಬವರ, ತನುಮನಧನವನ್ನು ದಾಸೋಹಕ್ಕೆ ಸವೆಸಿದವರ ಮತ್ತು ಎಲ್ಲ ಜಂಗಮವೂ-ಜಾತಿ ಭೇದವಿಲ್ಲದೆ-ನಮ್ಮವರೆಂಬವರ ದರ್ಶನ ನನಗಾಗಲಿ, ಅವರ ಪಾದಸೇವೆ ನನ್ನದಾಗಲಿ-ಎನ್ನುತ್ತಿರುವರು ಬಸವಣ್ಣನವರು. ಜಂಗಮರು ಪೂಜ್ಯರೆಂಬಲ್ಲಿ ಜಾತಿಜಂಗಮರನ್ನೇ ಮಾನ್ಯಮಾಡಿದರು ಸಂಪ್ರದಾಯಸ್ಥರು. ಅವರಿಂದ ನಿಜಜಂಗಮರು ಅವಗಣನೆಗೆ ಪಕ್ಕಾದರು. ಈ ಅವ್ಯವಸ್ಥೆಯ ವಿರುದ್ಧವಾಗಿ ಬಸವಣ್ಣನವರು “ಜಂಗಮವೆನ್ನವರೆನ್ನವರೆನ”ಬೇಕು ಎಂದು ಒತ್ತಿ ಹೇಳಿರುವರು. ಈ ಆಚರಣೆ ಶಿವಪೂಜೆಯಷ್ಟೇ ದಾಸೋಹದಷ್ಟೇ ಅವಧಾರಣೆಯಿಂದ ವಿಧಿಸಲ್ಪಟ್ಟಿದೆ ಬಸವಣ್ಣನವರಿಂದ. ಬಸವಣ್ಣನವರು ವೈದಿಕ ವರ್ಣವ್ಯವಸ್ಥೆಯ ವಿರುದ್ಧ ಹೋರಾಡಿದಂತೆ-ತಮ್ಮ ಸಮಾಜದಲ್ಲೇ ಇದ್ದ ಒಳಜಾತಿಗಳ ವಿರುದ್ಧವೂ ಹೋರಾಡಬೇಕಾಯಿತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು