ಆಯತ, ಸ್ವಾಯತದನುಭಾವವ ನಾನೆತ್ತ ಬಲ್ಲೆನು?
ಲಿಂಗ-ಜಂಗಮಕ್ಕೆ ಮಾಡಿ ನೀಡುವ
ಅಚ್ಚ ಶರಣರ ಮನೆಯಲು ಭೃತ್ಯನಾಗಿಪ್ಪೆನಯ್ಯಾ;
ಇದು ಕಾರಣ ಕೂಡಲಸಂಗನ ಶರಣರಲ್ಲದೆ ಅನ್ಯವನರಿಯೆನಾಗಿ.
Transliteration Āyata, svāyatadanubhāvava nānetta ballenu?
Liṅga-jaṅgamakke māḍi nīḍuva
acca śaraṇara manegaḷu bhr̥tyanāgippenayyā;
idu kāraṇa kūḍalasaṅgana śaraṇarallade an'yavanariyenāgi.
Manuscript
English Translation 2 How can I know the experience
Of outer Liṅga and of inner Liṅga ?
I am only
A servant in the house
Of real Śaraṇās who, offering, adore
Liṅga and Jaṅgama.
Therefore I know none else
Than Kūḍala Saṅga's Śaraṇās
Translated by: L M A Menezes, S M Angadi
Hindi Translation आयत, स्वायत का अनुभाव मैं क्या जानूँ?
लिंग-जंगम को अर्पित करनेवाले
सच्चे शरणों के घरों में मैं भृत्य बना रहूँगा।
इसलिए कि कूडलसंग के शरणों के सिवा
मैं और कुछ नहीं जानता ॥
Translated by: Banakara K Gowdappa
Telugu Translation ఆయత స్వాయత అనుభావంబులు
నాకెటు తెలియునయ్యా
లింగజంగములకు చేసి పెట్టెడి
నిజమైన శరణుల యింట
బంటునై యుందునయ్యా
కూడల సంగని శరణులగాక
పరులెవ్వరో నే నెరుగనయ్యా !
Translated by: Dr. Badala Ramaiah
Marathi Translation
आयत, स्वायत, सन्निहिताचा अनुभाव मला कसा असेल?
लिंग जंगमाच्या सेवेत राहणाऱ्या शरणांच्या घरात
सेवक होऊन राहतो देवा. म्हणून
कूडलसंगमदेवाच्या शरण विना अन्य माहित नाही.
Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಆಯತ = 1)ಯೋಗ್ಯವಾದದ್ದು, ಕ್ರಮಬದ್ದವಾದದ್ದು, ಸರಿಯಾದದ್ದು
2) ವೀರಶೈವರಲ್ಲಿ ಗುರು ಭಕ್ತನಿಗೆ ಇಷ್ಟಲಿಂಗವನ್ನು ಕೊಡುವ ದೀಕ್ಷೆ; ಜಂಗಮ = ; ಭೃತ್ಯ = ; ಸ್ವಾಯತ = ;
ಕನ್ನಡ ವ್ಯಾಖ್ಯಾನ ಆಯತವೆಂದರೆ ಇಷ್ಟಲಿಂಗವನ್ನು ಸ್ಥೂಲದೇಹದ ಮೇಲೆ ಧರಿಸುವುದು, ಸ್ವಾಯತವೆಂದರೆ ಸೂಕ್ಷ್ಮದೇಹ(ಪ್ರಾಣ)ದಲ್ಲಿ ಪ್ರಾಣಲಿಂಗವನ್ನು ಭಾವಿಸುವುದು, ಅನುಭಾವವೆಂದರೆ ಶಿವಶರಣರ ಸನ್ನಿಹಿತದಲ್ಲಿ ತತ್ತ್ವವಿಚಾರ ಮಾಡುವುದು. ಹೀಗೆ ಶಿವಧರ್ಮದವರು ಲಿಂಗವನ್ನು ಬಹಿರಂಗದಿಂದ ಅಂತರಂಗದಂತರಾಳದವರೆಗೆ ಧರಿಸಿ ಆ ಲಿಂಗಸಕೀಲಗಳನ್ನು ತಿಳಿಯಬೇಕೆಂಬ ಶಾಸ್ತ್ರವಿದೆ.
ಬಸವಣ್ಣನವರಿಗೆ ಈ ಶಾಸ್ತ್ರಪರಿಭಾಷೆಯ ಪ್ರಕ್ರಿಯೆಯ ವಿವರಕ್ಕಿಂತ ಲಿಂಗಜಂಗಮಕ್ಕೆ (ಲಿಂಗ ಸಮಾನವಾದ ಜಂಗಮಕ್ಕೆ) ಮಾಡಿ ನೀಡುವ ಶರಣರ ಕೈಂಕರ್ಯಮಾಡುವುದೇ ಆನಂದದಾಯಕ. ಅವರಿಗೆ ತಿಳಿದಿದ್ದುದು ಅದೊಂದೇ ಕೈಂಕರ್ಯ ಮಾರ್ಗ.
ಶಾಸ್ತ್ರವು ಆನೆಯ ಹೆಜ್ಜೆಯ ಗುರುತಿನಂತೆ-ಶರಣರಿಗೆ ಮಾಡುವ ಕೈಂಕರ್ಯವಾದರೋ ಪ್ರತ್ಯಕ್ಷ ಆನೆಯಂತೆ, ಆ ದಢೂತಿಯ ದರ್ಶನ ಬಸವಣ್ಣನವರದು. ಈ ಅರ್ಥದಲ್ಲಿ ಅವರು-“ಸಂಗನ ಶರಣರಲ್ಲ ದನ್ಯವನರಿಯರು”
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು