•  
  •  
  •  
  •  
Index   ವಚನ - 365    Search  
 
ಭಕ್ತನ ಭಕ್ತಸ್ಥಲ - ನೆನಹು
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನುದಯದ ಚಿಂತೆ, ಭ್ರಮರಂಗೆ ಪರಿಮಳ(ದ) ಬಂಡುಂಬ ಚಿಂತೆ, ಎನಗೆ ನಮ್ಮ ಕೂಡಲಸಂಗಮ ದೇವರ ನೆನೆವುದೆ ಚಿಂತೆ.
Transliteration Cakōraṅge candramana beḷagina cinte, ambujake bhānuvinudayada cinte, bhramaraṅge parimaḷa(da) bandumba cinte, enage nam'ma kūḍalasaṅgama dēvara nenevude cinte.
Manuscript
Music Courtesy: Vachananjali Part -1 Sri Taralabalu Jagadguru Brihanmath Sirigere, Music: H K Narayana Singer: Indu Viswanath
English Translation The Cakora bird longs for the moonlight, The lotus awaits the rising sun, The bee yearns for the fragrance in full bloom, And my heart longs for You, O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 The Cakōra waits, intent, The moonlight's silver dawn; The lotus' heart is bent Upon the splendid morn; The bee's on the flower's scent. Even thus, for Thee, even thus My heart is tremulous, O Kūḍala Saṅgama Lord! Translated by: L M A Menezes, S M Angadi
Russian Translation Чакора* непрестанно о лунном свете думает; Лотос в мыслях о рассвете пребывает; Пчела благоухающего нектара жаждет; Я же непрестанно Бога своего Кудаласангаму восхваляю. ——————— *Чакора — это мифическая или реальная птица, упоминаемая в индийской и санскритской литературе. В индийской мифологии чакора считается символом любви и романтики. Согласно преданиям, эта птица пьёт свет луны и влюблена в неё, что делает её символом страсти и преданности. В поэзии чакора часто ассоциируется с тоской и вечным стремлением к недостижимому. Translated by: Prof Harishankar, Mysore and Mrs. Galina Kopeliovich, Russia
Hindi Translation चकोर को चंद्रिका की चिंता है, अंबुज को सूर्योदय की चिंता है, भ्रमर को परिमलित मधु-पान की चिंता है, मुझे मम कूडलसंगमदेव के स्मरण की ही चिंता है ॥ Translated by: Banakara K Gowdappa
Telugu Translation చకోరమునకు చంద్రుని వెన్నలచింత అజ్జమునకు సూర్యోదయము చింత భ్రమరమునకు సుగంధమధువే చింత నాకు సంగమదేవుని చింతయే చింత Translated by: Dr. Badala Ramaiah
Marathi Translation चकोराला चंद्रच्या उदयाची चिंता, कमळाला सूर्य उदयाची चिंता, भ्रमाराला मकरंद पिण्याची चिंता, मला माझ्या कूडलसंगमदेवाच्या स्मरणाची चिंता. Translated by Shalini Sreeshaila Doddamani
Urdu Translation چکورکو ہےتمنا کہ چاند مل جائے کنول،طلوعِ سحرکی ہےفکرمیں غلطاں گلوں کے رس کی تمنّا میں ہے مگس بیتاب مگرمجھے یہ شب و روز دھیان رہتا ہے رہوں میں کوڈلا سنگا کے پاک قدموں میں Translated by: Hameed Almas
ಶಬ್ದಾರ್ಥಗಳು ಅಂಬುಜ = ಕಮಲ; ಉದಯ = ; ಚಕೋರ = ; ಬಂಡು = ; ಭಾನು = ; ಭ್ರಮರ = ;
ಕನ್ನಡ ವ್ಯಾಖ್ಯಾನ ದೇವರ ನೆನಹಿನ ಚಿಂತೆ ಹಣ, ಅಂತಸ್ತು, ಅಧಿಕಾರಗಳಿಗೆ ಹಾತೊರೆವ ವ್ಯಕ್ತಿಯು ಅವುಗಳನ್ನು ಗಳಿಸಲು ಸದಾ ಹೊಂಚು ಹಾಕುವಂತೆ ಬಸವಣ್ಣನವರು ಐಹಿಕ ಸುಖಭೋಗೋಪಭೋಗಗಳಿಗೆ ಆಸೆ ಮಾಡದೆ ದೇವರ ಒಲುಮೆಗಾಗಿ ಹಂಬಲಿಸಿ ಅದಕ್ಕಾಗಿ ಅವನ ಧ್ಯಾನದಲ್ಲಿ ಹಗಲಿರುಳೂ ಮಗ್ನರಾಗಿರುವುದನ್ನು ಈ ವಚನದಲ್ಲಿ ಕಾಣುತ್ತೇವೆ. ಚಕೋರ ಪಕ್ಷಿಯು ಚಂದ್ರನ ಕಿರಣಗಳನ್ನು ಆಸ್ವಾದಿಸಿಯೇ ಜೀವಿಸುವುದೆಂದು ಹೇಳುತ್ತಾರೆ. ಆದ್ದರಿಂದ ಆ ಪಕ್ಷಿಗೆ ತನ್ನ ಜೀವಾಧಾರವಾದ ಬೆಳದಿಂಗಳಿನದೇ ಸದಾ ಚಿಂತೆ. ಅದೇ ರೀತಿ ಸೂರ್ಯ ಉದಯಿಸುವುದೇ ತಡ ಅರಳಿ, ಜನರ ಮನಸ್ಸನ್ನೂ ಅರಳಿಸುವ, ಆದರೆ ಸೂರ್ಯ ಮುಳುಗುತ್ತಿದ್ದಂತೆಯೇ ಬಾಡಿ ಹೋಗುವ ಸರೋವರದ ಕಮಲಕ್ಕೆ ಪುನ: ಸೂರ್ಯ ಯಾವಾಗ ಉದಿಸುವನೋ ಎಂಬುದೇ ಚಿಂತೆ. ಹಾಗೆಯೇ ಉದ್ಯಾನದಲ್ಲಿ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರಿ ಹೋಗುವ ದುಂಬಿಗೆ ಹೂವಿನ ಸೌಂದರ್ಯದ ಕಡೆ ಗಮನವಿಲ್ಲದೆ ಅದರ ಪರಿಮಳವನ್ನು ಹೀರುವುದೇ ಅದಕ್ಕಿರುವ ಚಿಂತೆ. ಹೀಗೆ ಇವುಗಳ ರೀತಿಯೇ ಕೂಡಲಸಂಗನ ನೆನಹಿನದೇ ಯಾವಾಗಲೂ ಬಸವಣ್ಣನವರಿಗಿರುವ ಚಿಂತೆ. ಅಂತೆಯೇ ದೇವರ ಒಲುಮೆಯನ್ನು ಪಡೆಯಬಯಸುವ ಯಾವ ಭಕ್ತನಿಗೂ ಇರಬೇಕಾದ ಚಿಂತೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.