•  
  •  
  •  
  •  
Index   ವಚನ - 366    Search  
 
ಭಕ್ತನ ಭಕ್ತಸ್ಥಲ - ಶರಣರು
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ; ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ, ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು. ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು. ದಿನಕರನುದಯಕ್ಕೆ ಕಮಲ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ.
Transliteration Holabugeṭṭa śiśu tanna tāya bayasuvante; baḷidappida paśu tanna hiṇḍanarasuvante, bayasuttirdenayyā nim'ma śaraṇara baravanu. Bayasuttirdenayyā nim'ma bhaktara baravanu. Dinakaranudayakke kamaḷa vikasitavādante enage nim'ma śaraṇara baravu, kūḍalasaṅgamadēvā.
Manuscript
English Translation 2 As a lost infant cries for his mother, As a lamb gone astray seeks the flock, I yearn for Thy Śaraṇās' coming, I yearn for Thy bhaktas' coming! The coming of Thy Śaraṇās , O Lord Kūḍala Saṅgama, Is as the lotus opening to the dawn! Translated by: L M A Menezes, S M Angadi
Hindi Translation पथ-भ्रष्ट शिशु जैसे अपनी माँ के लिए तरसता है, पथ-भ्रष्ट पशु जैसे अपना झुंड ढूँढता है, मैं तव शरणों का आगमनाकांक्षी मैं तव भक्तों का आगमनाकांक्षी सूर्योदय से जैसे कमल विकसित होता है । वैसे मुझे तव शरणों का आगमन है, कूडलसंगमदेव ॥ Translated by: Banakara K Gowdappa
Telugu Translation దారితప్పిన శిశువు తల్లి కై ఏడ్చునట్లు గతిచెడిన పశువు తనమంద వెదకునట్లు తలచుచుంటినయ్యా నీ శరణుల రాకను తలపోయుచుంటినయ్యా నీ భక్తుల రాకను సూర్యోదయమునకు వికసించు తామరవలె శరణులరాక నాకు సంగయ్యా! Translated by: Dr. Badala Ramaiah
Marathi Translation विसरुन भटकणारे मुल आपल्या आईला शोधल्यासम. कळप सोडून भटकणारा पशू आपल्या कळपाला शोधल्यासम वाट पाहतो मी आपल्या शरणांच्या आगमनाची वाट पाहतो मी आपल्या सद्भक्तांच्या आगमनाची. सूर्योदयाने कमळ उमलल्यासम मला शरणांचे आगमन आहे कूडलसंगमा Translated by Shalini Sreeshaila Doddamani
ಶಬ್ದಾರ್ಥಗಳು ಕಮಳ = ; ದಿನಕರ = ; ವಿಕಸಿ = ; ಹಿಂಡು = ; ಹೊಲಬು = ;
ಕನ್ನಡ ವ್ಯಾಖ್ಯಾನ ಶರಣನೊಬ್ಬನ ಅಥವಾ ಹಲವು ಶರಣರ ಬರವನ್ನು ಇದಿರು ನೋಡುವಾಗ ಬಸವಣ್ಣನವರು ಪಡುವ ಉದ್ವೇಗ ತಲ್ಲಣಗೊಳಿಸುವಂಥದು : ತಾಯ ಸೆರಗನ್ನೇ ಹಿಡಿದು ಹೊರಟ ಮಗು ಅನ್ಯಮನಸ್ಸಿನಿಂದ ಸೆರಗನ್ನು ಬಿಟ್ಟು ಹಿಂದುಳಿದು ದಾರಿ ತಪ್ಪಿದಾಗ-ಆ ಮಗುವಿಗೆ ಬಂದ ತನ್ನ ತಾಯ ನೆನಪಿನಂತೆ ಅದು ಅನನ್ಯ. ಹೋಗುತ್ತಿದ್ದ ದನಗಳ ಹಿಂಡಿನಲ್ಲಿ ಒಂದು ಕರು ದಾರಿಯಲ್ಲಿ ಕಂಡ ಹಸುರಿಗೆ ಬಾಯಿಕ್ಕಿ ಹಿಂದುಳಿದು ಮಂದೆಯನ್ನು ಕಾಣದೆ ದಿಕ್ಕುತಪ್ಪಿದಾಗ-ಆ ಕರುವಿಗೆ ಆದ ಒಂಟಿತನದಂತೆ ಅದು ಭಯಂಕರ. ಅಗಲಿದ ಶರಣರು ಬಳಿ ಬಂದರೆ-ತಾಯಿ ಬಳಿ ಬಂದ ಮಗುವಿನಂತೆ, ಹಿಂಡನ್ನು ಕಂಡ ಕರುವಿನಂತೆ-ಹಿರಿಹಿರಿ ಹಿಗ್ಗುವರು ಬಸವಣ್ಣನವರು. ಅವರ ಆ ಪ್ರಫುಲ್ಲತೆಯನ್ನು ಸೂರ್ಯನ ಉದಯಕ್ಕೆ ಅರಳಿದ ಕಮಲದಲ್ಲಿ ಕಾಣಬಹುದು. ಶರಣರ ಜೊತೆಗಿದ್ದಷ್ಟು ಕಾಲವೂ ಬಸವಣ್ಣನವರಿಗೆ ಸುಖದ ಕಾಲ-ಅಗಲಿದಾಗ ಅವರು ಅನುಭವಿಸುತ್ತಿದ್ದ ವಿರಹವೇದನೆಯನ್ನೂ, ಪುನರ್ಮಿಲನವಾದಾಗ ಅವರಿಗಾಗುತ್ತಿದ್ದ ಸಂಗಸುಖವನ್ನೂ ಹೃದಯಂಗಮವಾಗಿ ಚಿತ್ರಿಸಲಾಗಿದೆ ಈ ವಚನದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು