•  
  •  
  •  
  •  
Index   ವಚನ - 367    Search  
 
ಭಕ್ತನ ಭಕ್ತಸ್ಥಲ - ಶರಣರು
ಸೂರ್ಯನುದಯ ತಾವರೆಗೆ ಜೀವಾಳ, ಚಂದ್ರಮನುದಯ ನೆಯ್ದಿಲೆಗೆ ಜೀವಾಳ. ಕೂಪರ ಠಾವಿನಲ್ಲಿ ಕೂಟ ಜೀವಾಳ, ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ; ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ.
Transliteration Sūryanudaya tāvarege jīvāḷa, candramanudaya neydilege jīvāḷa. Kūpara ṭhāvinalli kūṭa jīvāḷa, olida ṭhāvinalli nōṭa jīvāḷavayya; kūḍalasaṅgana śaraṇara baravenage prāṇa jīvāḷavayyā.
Manuscript
Music Courtesy:
English Translation 2 The rising of the sun is to the lotus life; The rising of the moon is to the lily life; Where lovers tryst, their tryst is life; Where you have once been pleased, The sight is life: The coming of Kūḍala Saṅgama's Śaraṇās Is my very life of life! Translated by: L M A Menezes, S M Angadi
Hindi Translation सूर्योदय कमल का जीवाधार है, प्राणाधार है, चंद्रोदय कुमुदिनी का जीवाधार है, प्राणाधार है, प्रियजनों के लिए मिलन ही जीवाधार है, अनुराग के स्थल में अवलोकन जीेवाधार है, कूड़लसंगमदेव के शरणों का आगमन मेरा जीवाधार है ॥ Translated by: Banakara K Gowdappa
Telugu Translation సూర్యోదయ మజ్జమునకు ప్రాణము చంద్రోదయము కలువకు ప్రాణము కూర్పరులకు కూటమియే ప్రాణము వలపుగలచోట చూపులే ప్రాణమయ్యా కూడల సంగని శరణుల రాకయే ప్రాణమయ్య నాకు Translated by: Dr. Badala Ramaiah
Marathi Translation सूर्योदय कमळाचा प्राण आहे, चंद्रोदय कुमुदाचा प्राण आहे. मिलन आत्मबंधूला प्राण आहे, पाहणे प्रेमीना प्राण आहे, कूडसंगमदेवाच्या शरणांचे आगमन माझे प्राण आहेत. Translated by Shalini Sreeshaila Doddamani
ಶಬ್ದಾರ್ಥಗಳು ಉದಯ = ; ಕೂಟ = ; ಕೂಪ = ; ಠಾವು = ; ತಾವರೆ = ; ನೆಯ್ದಿಲೆ = ; ರಾವಿ = ;
ಕನ್ನಡ ವ್ಯಾಖ್ಯಾನ ಸೂರ್ಯ ಬಂದರೆ ಸಾಕು-ತಾವರೆಗೆ ಪ್ರಾಣ ಬಂದಂತೆ. ಚಂದ್ರ ಬಂದರೆ ಸಾಕು-ನೈದಿಲೆಗೆ ಪ್ರಾಣ ಬಂದಂತೆ. ಬಸವಣ್ಣನವರಿಗಾದರೋ ಶರಣರು ಬಂದರೆ ಪ್ರಾಣ ಬಂದಂತೆ-ಮಿಕ್ಕಂತೆ ಸತ್ತಂತೆಯೇ. ಪ್ರೀತಿಸಿದವರು ಪರಸ್ಪರ ಕೂಡಲಿಲ್ಲವೋ-ಬದುಕುವುದಿಲ್ಲ, ಪ್ರೀತಿಸಿದವರು ಮತ್ತೆ ಕೆಲವರು-ನೋಡದಿದ್ದರೂ ಸಾಕು ಬದುಕುವುದಿಲ್ಲ. ಬಸವಣ್ಣನವರಾದರೋ-ಶರಣರು ಬರಲಿಲ್ಲವೋ ತಾನು ಬದುಕುವುದಿಲ್ಲ, ಆ ಶರಣರ ಸಾನ್ನಿಧ್ಯವೇ ನನಗೆ ಪ್ರಾಣಧಾರವೆಂದು ಹೇಳುತ್ತಾರೆ. ಬಸವಣ್ಣನವರನ್ನು ಶಿವಸಮಾನವಾಗಿಸಿದ್ದು-ಅವರಲ್ಲಿದ್ದ ಶರಣಸಂಬಂಧವಾದ ಈ ಸ್ನಿಗ್ಧ ಗುಣವೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು