•  
  •  
  •  
  •  
Index   ವಚನ - 369    Search  
 
ಭಕ್ತನ ಭಕ್ತಸ್ಥಲ - ಶರಣಾಗತಿ
ಅಯ್ಯಾ, ನಿಮ್ಮ ಮಹಾವ್ರತಿಗಳನಗಲಿ ಬರ್ದುಂಕಲಾರೆನು; ಶಿವಧೋ, ಶಿವಧೋ, ಕಂಗಳಶ್ರುಗಳಲ್ಲಿ ಮುಂದುಗಾಣೆನು; ಲಿಂಗಸಂಗಿಗಳನಗಲಿ ನಾನೆಂತು ಬರ್ದುಂಕುವೆ, ಕೂಡಲಸಂಗಮದೇವಾ?
Transliteration Ayyā, nim'ma mahāvratigaḷanagali barduṅkalārenu; śivadhō, śivadhō, kaṅgaḷaśrugaḷalli mundugāṇenu; liṅgasaṅgigaḷanagali nānentu barduṅkuve, kūḍalasaṅgamadēvā?
Manuscript
English Translation 2 Away from Thy great ascetics, Lord, I cannot live: Woe unto me, woe unto me! I cannot, for my tears, see clear my way: How can I live Away from those who live In union with the Liṅga. Lord Kūḍala Saṅgama? Translated by: L M A Menezes, S M Angadi
Hindi Translation स्वामी, तव महान् व्रतियों से वियुक्त होकर मैं जी नहीं सकता पाहि पाहि परमेश्वर साश्रु नयनों से पथ नहीं दीखता । लिंगधारियों से वियुक्त होकर मैं कैसे जीऊँ, कूडलसंगमदेव? Translated by: Banakara K Gowdappa
Telugu Translation అయ్యా మీ మహావ్రతులగు వారిని విడిచి బ్రతుకలేను శివధో! శివధో! కన్నులశ్రువులచే ముందు చూడవు లింగసంగుల త్యజియించి నేనెట్లు జీవింతునయ్యా కూడల సంగమయ్యా? Translated by: Dr. Badala Ramaiah
Marathi Translation देवा, आपल्या महाव्रतीपासून वेगळे होऊन जगू शकत नाही रक्षावे, रक्षावे, डोळ्यातील आसवामुळे पुढचे काही दिसेना. लिंग-संगीच्यापासून वेगळे मी कसा राहू कूडलसंगमदेवा. आपल्या शरणांना दाखवून जीवंत ठेवणे आपला धर्म. Translated by Shalini Sreeshaila Doddamani
ಶಬ್ದಾರ್ಥಗಳು ಅಶ್ರು = ಕಣ್ಣೀರು; ಕಂಗಳು = ; ವ್ರತಿ = ; ಶಿವಧೋ = ; ಸಂಗಿ = ;
ಕನ್ನಡ ವ್ಯಾಖ್ಯಾನ ಮರಳಿ ಈ ವಚನದಲ್ಲಿಯೂ-ಶರಣರಿಲ್ಲದೆ ಸಂಘರ್ಷದ ತಮ್ಮ ಬದುಕಿನಲ್ಲಿ ಅರ್ಥಪೂರ್ಣವಾಗಿ ಮುಂದುವರಿಯಲು ತಮಗೆ ಸಾಧ್ಯವಿಲ್ಲವೆನ್ನುತ್ತಿರುವರು ಬಸವಣ್ಣನವರು. ಅವರಿಗೆ ಹೀಗೆ ಅನಿಸಲು ಶರಣರ ಮೇಲಣ ಭಕ್ತಿಯೊಂದೇ ಕಾರಣವಲ್ಲದೆ-ಆ ಶರಣರು ಬಸವಣ್ಣನವರು ಕೈಗೊಂಡ ಮಹತ್ಕಾರ್ಯದಲ್ಲಿ ಎಷ್ಟು ಸಕ್ರಿಯವಾಗಿ ಪಾಲ್ಗೊಂಡಿದ್ದರೆಂಬುದನ್ನೂ ಸೂಚಿಸುವಂತಿದೆ ಈ ವಚನ : ಯಾವುದಾದರೊಂದು ತುರ್ತು ನಿರ್ಣಯವನ್ನು ತೆಗೆದುಕೊಳ್ಳಬೇಕಾದಾಗ ಬಸವಣ್ಣನವರಿಗೆ ಆ ಶರಣರು ಸಮಕ್ಷಮದಲ್ಲಿಲ್ಲದೇ ಹೋದರೆ-ಮಗುವಿನಂತೆ ಅವರು ಅತ್ತುಬಿಡುತ್ತಿದ್ದರಾಗಬಹುದು. ಅಷ್ಟು ಅಹಂಭಾವರಹಿತ ಮುಗ್ಧ ಮುಕ್ತ ನಿಲುವು ಅವರದು. ಮಹಾವ್ರತಿ : ಲಿಂಗವನ್ನು ಕೈಯಲ್ಲಿ ಧರಿಸಿ-ದುರಾಶೆಗೆ ಕೈಯೊಡ್ಡುವುದಿಲ್ಲ, ಲಿಂಗಕ್ಕೆ ತಲೆಬಾಗಿ-ದೌಷ್ಟ್ಯಕ್ಕೆ ತಲೆಬಾಗುವುದಿಲ್ಲ. ಲಿಂಗವನ್ನು ಎದೆಯಲ್ಲಿ ಧರಿಸಿ-ದುಶ್ಚಿಂತೆ ಮಾಡುವುದಿಲ್ಲ-ಎಂದು ಲಿಂಗಧರಿಸಿ ಅಂಗಗುಣಕ್ಕೆ ಎಡೆಕೊಡದಂತೆ ಜೀವಿಸುವುದೇ ಮಹಾವ್ರತ. ಅಂಥ ಮಹಾವ್ರತ ಹಿಡಿದವರು ಶರಣರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು