ಭಕ್ತನ ಭಕ್ತಸ್ಥಲ - ಪ್ರಾರ್ಥನೆ
ಜಜ್ಜನೆ ಜರಿದೆನು, ಜಜ್ಜನೆ ಜರಿದೆ, ನೋಡಯ್ಯಾ!
ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ, ನೋಡಯ್ಯಾ!
ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆ
ಕೂಡಲಸಂಗಮದೇವಾ, ನಿಮ್ಮ ಶರಣರನಗಲಿದ ಕಾರಣ!
Transliteration Jajjane jaridenu, jajjane jaride, nōḍayya!
Bibbane biridenu, bibbane biride, nōḍayya!
Nānobbane uḷidenu, nānobbane uḷide
kūḍalasaṅgamadēvā, nim'ma śaraṇaranagalida kāraṇa!
Manuscript
English Translation 2 Mark, Lord, how suddenly I am shrunk!
Mark, Lord, how broken utterly!
Alone I am, alone,
Away from Thy Śaraṇās,
O Kūḍala Saṅgama Lord!
Translated by: L M A Menezes, S M Angadi
Hindi Translation देखो, मैं जर्जरित हुआ, जर्जरित हुआ, जर्जरित हुआ,
मैं हठात् भग्न हुआ, भग्न हुआ, भग्न हुआ,
मैं एकाकी रह गया, एकाकी रह गया, एकाकी रह गया,
कूडलसंगमदेव, तव शरणों से वियुक्त होने के कारण ॥
Translated by: Banakara K Gowdappa
Telugu Translation జర్జర తిట్టితి జర్జర తెగడితినయ్యా
బిర్రన బిగిసితి బిట్టునీల్గితి: అయ్యా
కడకొకడనే మిగిలి యేకాకినై పోతి
కూడల సంగని శరణులు దూరమైపోవ
Translated by: Dr. Badala Ramaiah
Marathi Translation
तन कृश झाले, तन कृश झाले,
तन कृश झाले पहा.
मन द्विधा झाले, मन द्वधा झाले,
मन द्वधा झाले पहा.
प्राण दुःखी झाले, प्राण दुःखी झाले,
प्राण दुःखी झाले,
मी एकटा झालो, मी एकटा झालो, मी एकटा झालो,
कूडलसंगमदेवा आपल्या शरणांच्यापासून वेगळा झाल्याने.
Translated by Shalini Sreeshaila Doddamani
ಶಬ್ದಾರ್ಥಗಳು ಜಜ್ಜನೆ = ; ಜರಿ = ; ಬಿಬ್ಬ = ; ಬಿರಿ = ;
ಕನ್ನಡ ವ್ಯಾಖ್ಯಾನ “ನಾನೊಬ್ಬನೆ ಉಳಿದೆನು ಕೂಡಲಸಂಗಮದೇವ ನಿಮ್ಮ ಶರಣರನಗಲಿದ ಕಾರಣ”-ಎಂಬ ಮಾತು ಬಸವಣ್ಣನವರ ದೈನಂದಿನ ಸಂದರ್ಭವನ್ನು ಕುರಿತುದೋ-ಅಥವಾ ಯಾವುದಾದರೊಂದು ಗಂಭೀರ ಪರಿಸ್ಥಿತಿಯನ್ನು ಕುರಿತುದೋ ಊಹಿಸಲಾಗುತ್ತಿಲ್ಲ.ಶರಣರನ್ನಗಲಿದರೆ ಬಸವಣ್ಣನವರು ಯಾರ ಜೊತೆಯಲ್ಲಿದ್ದರೂ ಏನು ವ್ಯವಹಾರದಲ್ಲಿ ತೊಡಗಿದ್ದರೂ ದುರ್ಭರವಾದ ತಬ್ಬಲಿತನವನ್ನು ಅನುಭವಿಸುತ್ತಿದ್ದರೆಂಬುದಂತೂ ನಿಶ್ಚಯ.
ಜಜ್ಜನೆ ಜರಿ:ತೀವ್ರ ಕೃಶವಾಗು ಅಥವಾ ಹತಪ್ರಭನಾಗು. ಬಿಬ್ಬನೆ ಬಿರಿ : ಉದ್ವೇಗದಿಂದ ಮನಸ್ಸು ವಿಚ್ಛಿದ್ರವಾಗು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು